Skip to main content

Posts

ವಿಜ್ಞಾನಿಯ ಕಣ್ಣಿನಲ್ಲಿ ಇತಿಹಾಸದ ಪಾಠಗಳು!

2 020ರಲ್ಲಿ ಲಾಕ್ಡೌನ್ ಶುರುವಾದಾಗಿನಿಂದ  ಹತ್ತು ತಿಂಗಳು ನಾನು ಮಾಡಿದ್ದು ಪುಸ್ತಕ ಓದಿದ್ದು ಅಷ್ಟೇ . ಆಗ ತಾನೇ ಮನೆಯಲ್ಲಿ ಸುಮಾರು 30-40 ಪುಸ್ತಕಗಳು ಬಂದು ಕುಳಿತಿದ್ದವು. ಡಾ. ಕೆ. ಎನ್. ಗಣೇಶಯ್ಯ ಅವರ ಪುಸ್ತಕಗಳು, ತೇಜೋ ತುಂಗಭದ್ರಾ, ಪುನರ್ವಸು,ಮಧ್ಯಗಟ್ಟ ಎಲ್ಲವೂ ಪುಸ್ತಕದ ಷೆಲ್ಫ್ ಏರಿ ಕುಳಿತಿದ್ದವು. ಒಂದಿಷ್ಟು ಪುಸ್ತಕಗಳು ಮೊದಲೇ ಅಮ್ಮ ಮತ್ತು ಅಪ್ಪನಿಂದ ಬುಕ್ ಆಗಿಬಿಟ್ಟಿತ್ತು.ಮೊದಲು ಬರೀ ಮಕ್ಕಳ ಕಥೆಗಳನ್ನು ಮತ್ತು fantasyಗಳನ್ನೇ ಓದುತ್ತಾ ಐದಾರು ತಿಂಗಳು ಕಳೆದಿದ್ದ ನಾನು ಹೀಗೆ ಒಂದು ದಿನ  ಅಪ್ಪ ಗಣೇಶಯ್ಯನವರ ಕರಿಸಿರಿಯಾನದ ಬಗ್ಗೆ ಹೇಳುತಿದ್ದದ್ದನ್ನು ಕೇಳಿ ಕುತೂಹಲದಿಂದ ಮಧ್ಯದಲ್ಲಿನ ಯಾವುದೋ ಹಾಳೆ ತೆಗೆದು ಓದಿದೆ. ವಿಜಯನಗರದ ಹೆಸರನ್ನು ನೋಡಿ ಕುತೂಹಲ ಬಂತು. ಮೊದಲ ಪುಟದಿಂದ ಓದುತ್ತಾ ಹೋದೆ. ಅದೇ ತಿಂಗಳಲ್ಲಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ್ದೆ! ಕರಿಸಿರಿಯಾನ    ಎಂಬ ಹೆಸರನ್ನು ಕೇಳಿ ಒಮ್ಮೆ ಗೊಂದಲವಾದರೂ ಕೊನೆಗೆ ಓದಿ ಮುಗಿಸಿದಾಗ ಹೆಸರಿನ ಒಳಾರ್ಥ ತಿಳಿಯಿತು. ಕರಿ ಎಂದರೆ ಆನೆ, ಸಿರಿ ಎಂದರೆ ಏನು ಎಂದು ವಿವರಿಸುವುದೇನೂ ಬೇಕಿಲ್ಲ, ಐಶ್ವರ್ಯ ಎಂದು ಅರ್ಥ. ಇನ್ನು  ಯಾನ ಎಂದರೆ ಪಯಣ. ಆನೆಯ ಮೇಲೆ ಐಶ್ವರ್ಯದ ಪಯಣ. ಇವರ ಎಲ್ಲಾ ಪುಸ್ತಕಗಳ ಹೆಸರುಗಳೂ ಹೀಗೆ ಪ್ರಾರಂಭವಾಗುವುದು ವಿಶೇಷ(ಉದಾಹರಣೆಗೆ: ಕನಕ ಮುಸುಕು, ಕಪಿಲಿಪಿಸಾರ ಇತ್ಯಾದಿ).ಜೊತೆಗೆ ಥ್ರಿಲ್ಲರ್ ರೀತಿಯಲ್ಲಿಯೇ...

A Boookworm in a lockdown year!

It was March 15th afternoon, I was preparing for my maths exam. I got a message from my friend saying that exams have been canceled due to the coronavirus. I didn't believe this message at first, but then I called my teacher to clarify the  good  news. And YES! It was true, the lockdown has started and exams were canceled. It was a joyful news for me. There it started my year full of reading and reading and more reading...   I always loved to read books from the beginning. But I never got a whole year to reading and doing things I loved! 2020 turned into an amazing year for me( thanks Covid-19). The day the lockdown started, I started looking for books. All the books I bought for my birthday weren't enough for me. I ended up reading them in two weeks or so. This time I moved to e-books. I was confused about where to start with. I picked up a half-finished   Harry Potter series . I had already finished reading the first 4 books in the series a year before, but ne...

ಮಕ್ಕಳ ಕಣ್ಣಿನಿಂದ ಹೊಲೊಕಾಸ್ಟ್ !

I dont think of All the misery, but of the beauty that still remains.      ~Anne Frank. Anne Frank  ಹೆಸರು ಕೇಳದವರು ಇದ್ದಾರೆಯೇ? 14 ವರ್ಷದ ಯಹೂದೀ  ಹುಡುಗಿ ತನ್ನ ಡೈರಿಯಿಂದ ಇಂದು ವಿಶ್ವ ಪ್ರಸಿದ್ದಳು. ಅವಳೇ ತನ್ನ diary ಅಲ್ಲಿ   ಬರೆದಿರುವಂತೆ " ನಾನು ತೀರಿದ ನಂತರವೂ ಜನರ ಮನದಲ್ಲಿ ಬದುಕಿರುವಂತಹದದನ್ನು ಮಾಡಬೇಕು"  Anne ಬರೆದ ಮಾತುಗಳು  ಅವಳ ವಿಷಯದಲ್ಲಿ ಅಂತೂ ನಿಜವಾಗಿದೆ. ಪ್ರಪಂಚದಾದ್ಯಂತ ಜನರೆಲ್ಲರ ಮನದಲ್ಲಿ Anne ಇಂದಿಗೂ ಜೀವಂತವಾಗಿದ್ದಾಳೆ, ಅವಳ ಡೈರಿಯ  ಹಾಗೆ.  ಸುಮಾರು ನನ್ನದೇ ವಯಸ್ಸಿನವಳಾಗಿದ್ದ (14) ಇವಳು  ಮನಕ್ಕೆ ನಾಟುವಂತೆ ಅದ್ಬುತವಾಗಿ ಬರೆದಿದ್ದಾಳೆ. ತನ್ನ ಹದಿಮೂರನೇ  ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಿಕ್ಕ diary ಅಲ್ಲಿ ದಿನನಿತ್ಯದ ಘಟನೆಗಳನ್ನೇ ಬರೆಯುತ್ತಾ ಹೋಗುವ ಇವಳ ಡೈರಿ ಮೊದಮೊದಲು ಸ್ವಲ್ಪ ಬೋರು ಹೊಡೆಸಿದರೂ ಎರಡನೇ ಭಾಗದಲ್ಲಿ ರಾಜಕೀಯ ವಿಷಯಗಳು, ತನ್ನ ಅಡಗುತಾಣವಾಗಿದ್ದ The  Secret Annex ನಲ್ಲಿ ಇರುವಾಗಿನ ಒಂಟಿತನ, ಅಕ್ಕ Margot ನ ರೀತಿ ತಾನೂ ಬುದ್ಧಿವಂತ ಳಾಗಿದ್ದರೆ ಎಂಬ ಯೋಚನೆ, ಕಾಮಿಕ್ ಒಂದರ ಪಾತ್ರ kitty  ಗೆ ಪ್ರತಿದಿನ ಬರೆಯುತ್ತಿದ್ದ ಪತ್ರ, ಯಹೂದಿಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಎಲ್ಲವನೂ ತನ್ನ ವಿಶಿಷ್ಟ ಬರವಣಿಗೆ ಶೈಲಿಯಲ್ಲಿ ಸುಂದರವಾಗಿ ಬರೆಯುತ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...

ಭೂಮಿಯ ಜ್ವರಕ್ಕೆ ಔಷಧಿ ಕೊಡುವ ಸಮಯ!

"The greatest threat to our planet is the belief that someone else will save it .  - Robert Swan  ಭೂಮಿಗಿರುವ ಅತ್ಯಂತ ದೊಡ್ಡ ಸಂಕಷ್ಟ ಎಂದರೆ ಅದು ಭೂಮಿಯನ್ನು ಮತ್ತೊಬ್ಬರು ಉಳಿಸುತ್ತಾರೆ ಎಂಬ ನಿರ್ಲಕ್ಷ್ಯ ಭಾವ - ರಾಬರ್ಟ್ ಸ್ವಾನ್      ನಮ್ಮ ದೇಹದ ತಾಪಮಾನ ಎರಡು ಡಿಗ್ರೀ ಹೆಚ್ಚಾದರೆ ನಮಗೇನಾಗಬಹುದು? ಹೆಚ್ಚೆಂದರೆ ಸಣ್ಣ ಜ್ವರ ಬರಬಹುದಷ್ಟೇ. ಆದರೆ ಭೂಮಿಯ ತಾಪಮಾನ ಇನ್ನೂ 2  ಡಿಗ್ರೀ Celcius ಹೆಚ್ಚಾದರೆ..? ನಾವು ಮತ್ತೆ ಭೂಮಿಯನ್ನು ಸುಸ್ಥಿತಿಗೆ ತರಲಾರದ ಸ್ಥಿತಿಗೆ ಹೋಗಿಬಿಡಬಹುದು! ಸಮುದ್ರ ಮಟ್ಟ ಹೆಚ್ಚಾಗಿ, ಅನೇಕ ದ್ವೀಪಗಳು ಮುಳುಗಿ ಹೋಗಬಹುದು,ಕರಾವಳಿ ಇಲ್ಲವಾಗಬಹುದು. ಪ್ರವಾಹ ಗಳು (ಇನ್ನೂ) ಹೆಚ್ಚಾಗಬಹುದು.ಇವೆಲ್ಲವೂ ನೂರಾರು ವರ್ಷಗಳ ನಂತರ ಆಗುವಂತದ್ದಲ್ಲ.  ಈಗ ಆಗುತ್ತಿರುವಂತದ್ದು. ಭೂಮಿಯ ತಾಪಮಾನವನ್ನು 1.5  ಡಿಗ್ರೀ celsius ನಲ್ಲಿಯೇ ನಿಯಂತ್ರಿಸದಿದ್ದರೆ ಇವೆಲ್ಲವೂ ಆಗುತ್ತದೆ.     ಇದೇ ಉದ್ದೇಶದಿಂದಲೇ   ಪ್ಯಾರಿಸ್ ಅಗ್ರೀಮೆಂಟ್ ಮಾಡಿದ್ದು .ಈ ಪ್ಯಾರಿಸ್ ಅಗ್ರೀಮೆಂಟ್ ಗೆ ಈಗ 5 ವರ್ಷ. 5 ನೇ ವರ್ಷದ ಸಲುವಾಗಿ ಮೊನ್ನೆ ನ್ಯೂಸ್ ಚಾನೆಲ್ ಒಂದರಲ್ಲಿ ಇದರ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಇದೇನಿದು ಎಂದು ಪ್ಯಾರಿಸ್ ಅಗ್ರೀಮೆಂಟ್  ಬಗ್ಗೆ ಕುತೂಹಲದಿಂದ ಒಂದಿಷ್ಟು ಹುಡುಕಿದೆ.ಹೀಗೆ ಹುಡ...

ಹುಲಿಮರಿ : ಸಣ್ಣ ಕಥೆ

Photo by Sacha Styles on Unsplash   ‘’ಭಾರತದಲ್ಲಿ ಕಂಡುಬರುವ  15 ಬೆಕ್ಕಿನ ಜಾತಿಯ ಸಸ್ತನಿಗಳು ಕಂಡುಬರುತ್ತವೇ. ನಮ್ಮ ಊರಿನ ಬಳಿ ಕಾಣುವ ಚಿರತೆ,ಹುಲಿ  ಕೂಡಾ ಇದೆ ಗುಂಪಿಗೆ ಸೇರುವಂತದ್ದು…ನೇಹಾ? ನೇಹಾ?’’  ಸಸ್ತನಿಗಳ ಬಗ್ಗೆ ಪಾಠ  ಮಾಡುತ್ತಿದ್ದ ಟೀಚರ್  ನೇಹಾ ಏನನ್ನೋ ಯೋಚಿಸುತ್ತಿದ್ದದನ್ನು  ಕೂಗಿದರು. ಹಗಲುಗನಸು ಕಾಣುತ್ತಿದ್ದ ನೇಹಾ ಗಾಬರಿಯಿಂದ ತಿರುಗಿ ನೋಡಿದಳು. ‘’ನೇಹಾ.. ಏನು ಯೋಚಿಸ್ತಾ ಇದ್ದೀಯಾ?’’ ಟೀಚರ್ ಕೋಪದಿಂದ ಕೇಳಿದರು. ‘’ ಎ-ಏನೂ ಇಲ್ಲಾ’’ ನೇಹಾ ಸ್ವಲ್ಪ ಹೆದರುತ್ತಲೆ ಉತ್ತರಿಸಿದಳು.  ‘’ಸರಿ ಹಾಗಾದ್ರೆ, ಈಗ ಉತ್ತರ ಹೇಳು... ಭಾರತದಲ್ಲಿ ಎಷ್ಟು ಬೆಕ್ಕಿನ ಜಾತಿಯ ಪ್ರಾಣಿಗಳಿವೆ?’’ ಅವರು ಸ್ವಲ್ಪ ಕಠೋರವಾಗಿಯೇ ಕೇಳಿದರು.  ‘’ಹದಿನೈದು, ಟೀಚರ್’’ ನೇಹಾ ಉತ್ತರಿಸಿದಳು.  ‘’ಸರಿ. ಇನ್ನೂ ಪಾಠದ ಮೇಲೆ ಗಮನ ಕೊಡು’’ ಎಂದು ಟೀಚರ್ ಉತ್ತರಿಸಿ ಮುಂದೆ ಓದಲು ಶುರು ಮಾಡಿದರು. ಪಾಠ ಸಾಗಿತು...  ***** ‘’ನೇಹಾ...ನೀನು ಇವತ್ತು ರಂಜಲು ಹಣ್ಣು ಹೆಕ್ಕಲೆ ಕಾಡಿಗೆ ಬತ್ಯಾ?’’ ಗೆಳತಿ ಇಶಾ ಕೇಳಿದಳು.  ‘’ಬರದೇ ಎಂತಾ ಆಜೇ? ಬರ್ತಿ  ಬಿಡು’’ ನೇಹಾ ಉತ್ತರಿಸಿ ಮತ್ತೆ ತನ್ನ ಪುಸ್ತಕದ ಪ್ರಪಂಚಕ್ಕೆ ಹಿಂದಿರುಗಿದಳು.  ನೇಹಾ 12 ವರ್ಷದ ಹುಡುಗಿ.ಮಲೆನಾಡಿನ ಚಿಕ್ಕ ಹಳ್ಳಿಯೊಂದರಲ್ಲಿದ್ದ ನೇಹಾ 7 ನೇ ತರಗತಿಯಲ್ಲಿ ಓದುತ್ತಿದ್ದಳು.  ಮಧ...

Liebster Awards!!

 Today, I was looking at  Pretty Little Scribbles  blog by 12-year-old Maya and Ria from Ria wonderland  .I found their post about Liebster Awards and immediately clicked on it to read the post. I found that I am nominated for this award by both of them. So thanks, Maya  and Ria! Rules : Thank the blogger who nominated you. Answer the 11 questions the blogger asked you. Nominate 11 bloggers. Ask your nominees 11 questions. Notify your 11 nominees. What is success according to you?  To be happy is a success according to me. Where do you live? In India. If you are given an offer to buy 3 things for free of cost, what 3 things will you choose? The first thing will be books! second is not an object, it may be the opportunity to go to extraordinary places, and again a library?  If you have to give a huge amount as a donation, for which 1 cause would you want to donate? Climate change and education. Because these are the most important things right now. Why ...