Skip to main content

Posts

Showing posts from October, 2020

ಗಾರಲಪಟ್ಟಿಯ ರಾಮಕೃಷ್ಣನೂ ..... ಕೃಷ್ಣದೇವರಾಯನೂ....

ಗಾರಲಪಟ್ಟಿಯ ರಾಮಕೃಷ್ಣನೂ...                        ಕೃಷ್ಣ ದೇವರಾಯನೂ.... ಈ ಗಾರಲಪಟ್ಟಿ ರಾಮ ಯಾರೆಂದು ಯೋಚಿಸುತ್ತಿದ್ದಿರಿ ಅಲ್ಲವೇ? ಆತ ಬೇರಾರೂ ಅಲ್ಲ,  ನಮ್ಮ ತೆನಾಲಿ ರಾಮಕೃಷ್ಣ. ನಾವು ನೀವು ಎಲ್ಲರೂ ಶಾಲೆಗೆ ಹೋಗುವ ಮೊದಲಿನಿಂದಲೂ ತೆನಾಲಿ ರಾಮನ ಕಥೆಗಳನ್ನು ಕೇಳಿಯೋ ಓದಿಯೋ ಬೆಳೆದವರೇ. ಬದನೇಕಾಯಿಯ ಕಳ್ಳತನದಿಂದ ಹಿಡಿದು ಬಾವಿಯೇ ಕಳ್ಳತನವಾದ ಸಮಸ್ಯೆಗಳನ್ನೂ ಪರಿಹರಿಸುವ ಮಕ್ಕಳ ಪಾಲಿನ ಸುಪರ್ ಹೀರೋ ಈತ.  ಕೃಷ್ಣದವರಾಯನ ಸಮಸ್ಯೆಗಳನ್ನು ತನ್ನ ಜಾಣತನದಿಂದ ಬಗೆಹರಿಸುವ ಈ ರಾಮನ ಪರಿ ಎಲ್ಲರಿಗೂ ಇಷ್ಟ . ತನ್ನ ವಿಶಿಷ್ಟ ಅವಲೋಕನ ಶಕ್ತಿಯಿಂದ ಈ ವಿಕಟಕವಿ ನಮ್ಮ ಜನಮಾನಸದಲ್ಲಿ ಇಂದು  ಮಾಸದೆ ಬದುಕಿದ್ದಾನೆ..                              ತೆನಾಲಿ ರಾಮನ ನೈಜ ಹೆಸರು ಗಾರಲಪಟ್ಟಿ ರಾಮಕೃಷ್ಣಯ್ಯ. ನಮ್ಮ ತೆನಾಲಿ ಅಲ್ಲಲ್ಲ..ಗಾರಲಪಟ್ಟಿ ರಾಮಕೃಷ್ಣಯ್ಯ ಹುಟ್ಟಿದ್ದು ಆಂಧ್ರದ ತುಮುಳೂರಿನಲ್ಲಿ. ತಂದೆ ಗಾರಲಪಟ್ಟಿ ರಾಮಯ್ಯ . ತಾಯಿ ಲಕ್ಷ್ಮಮ್ಮ. ರಾಮಯ್ಯನವರು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಯದಲ್ಲಿ ಅರ್ಚಕರಾಗಿದ್ದರು. ಆದರೆ ದುರದೃಷ್ಟವಶಾತ್ ಅವರು ರಾಮನ ಬಾಲ್ಯದಲ್ಲೇ ತೀರಿಕೊಂಡರು.  ನಂತರ ರಾಮನ ಸೋದರ ಮಾವನ ಮನೆಯಾದ ತೆನಾಲಿಗೆ ಬಂದು ಉಳಿದುಕೊಂಡರು. ಹೀಗಾಗಿ ಗಾರಲಪಟ್ಟಿ ರಾಮಕೃಷ್ಣಯ್ಯ ತೆನಾಲಿ ರಾಮ ಆದ.                 ಆಗ ವಿಜಯನಗರ ಸಾಮ್ರಾಜ್ಯದಲ್ಲಿ ವೈಷ್ಣವ ಮತ್ತು ಶೈವರ ಮದ್ಯೆ ವೈಷಮ್ಯ ಬ

ಮಳೆಗಾಲವೆಂಬ ಸರ್ಕಸ್ ಕಂಪೆನಿ!!

ಮಲೆನಾಡಿನಲ್ಲಿ ಮಳೆಗಾಲ ಎಂದರೆ ಒಂದು ರೀತಿಯಲ್ಲಿ ಹೊಸ ವರ್ಷದ ಪ್ರಾರಂಭ. ಮಕ್ಕಳಿಗೆ ಶಾಲೆ ಶುರುವಾಗುವ ಸಮಯ, ರೈತರಿಗೆ ಗದ್ದೆ ನೆಟ್ಟಿಯ ಸಮಯ, ಹೊಸ ಕೊಡೆ, ಕಂಬಳಿ ಕೊಪ್ಪೆ, ರೈನ್ ಕೋಟುಗಳು ಊರುತುಂಬಾ ಓಡಾಡುವ ಸಮಯ.      ಮಳೆಗಾಲ ಶುರುವಾಗುತ್ತಿದ್ದಂತೆ ಅದೆಲ್ಲಿಂದಲೋ ಬಸವನ ತಲೆ ಹೂವು, ನಾಗದಾಳಿ ಹೂವು, ಕೆಂಪು , ಬಿಳಿ ಬಣ್ಣದ ರೈನ್ ಲಿಲಿಗಳು ಎಲ್ಲವು ಪ್ರತ್ಯಕ್ಷವಾಗುತ್ತವೆ. ಒಣಗಿದ್ದ ನೆಲದಲ್ಲಿ ಹುಲ್ಲು ನಿಧಾನವಾಗಿ ಬೆಳೆದು ಹಸಿರಾಗುತ್ತದೆ. ಮಾವಿನ ಹಣ್ಣಿನ ಕಾಲ ಮುಗಿದು ಹಲಸಿನ ಕಾಲ ಶುರುವಾಗುತ್ತದೆ.   "ಈ ವರ್ಷ ಅಡಿಕೆಗೆ ಕೊಳೆ ಬಂದೊತೊ ಮಾರಾಯ" ಎಂಬ ಮಾತುಗಳು ಸಾಮಾನ್ಯ. "ಹೊಸ ಶಾಲೆ ಬ್ಯಾಗು ಬೇಕಾಗಿತ್ತು" , "ನನ್ನ ಕೊಡೆ ಅವ ಮುರಿದು ಹಾಕ್ಬುಟ" ಎಂಬ ದೂರುಗಳು ಶಾಲೆಗಳನ್ನು ತುಂಬಿರುತ್ತವೆ. ಇವೆಲ್ಲಾ ನಮ್ಮೂರಿನವರಿಗೆ ಬಹಳ ಪರಿಚಿತವಾದದ್ದು.  ಮಳೇಗಾಲದ ಟೈಮ್ ಟೇಬಲ್ ಪ್ರಕಾರ ಮೊದಲ ಒಂದೆರಡು ವಾರಗಳಲ್ಲಿ ಒಂದು ಜ್ವರವೋ, ನೆಗಡಿಯೋ ಆಗಿ ಮುಗಿಯಬೇಕು ನಂತರದ ಅಗಸ್ಟ್ ತಿಂಗಳಲ್ಲಿ ಒಮ್ಮೆ ಭಾರಿ ಮಳೆಯಾಗಿ ಹೊಳೆ ಹತ್ತಿ ಬಂದು ವಾರಗಳ ಕಾಲ ಇಂಟರ್ನೆಟ್ , ಸಿಗ್ನಲ್ಲು ಕರೆಂಟ್ ಏನೂ ಇಲ್ಲದೇ ಶಾಲೆಗಳು, ಆಫ಼ೀಸುಗಳು ಎಲ್ಲವು ಮುಚ್ಚಿ ಕೂರಬೇಕು. ಈ ಹೊಳೆ  ಬೇಗ ಹತ್ತಿ ಬರಲೆಂದು  ಎಲ್ಲಾ ಮಕ್ಕಳ ಪ್ರಾರ್ಥನೆ. ಹೀಗಾಗಿ ನಮಗೆ ಮಳೆಗಾಲವೇ ಲಾಕ್ ಡೌನ್.   ಹೊಳೆ ಹತ್ತಿ ಬಂದಾಗ  ಮೊಬೈಲು, ಟಿವಿ ಏನ

ಅಣ್ಣನ ನೆನಪು : ಮತ್ತೆ ಓದಿದಾಗ

ಈ ಪುಸ್ತಕವನ್ನು ನಾನು ಅದೆಷ್ಟು ಸರಿ ಓದಿದ್ದೆನೋ ಗೊತ್ತಿಲ್ಲ . ಒಂದು ನೂರು ಸಾರಿಯಾದರೂ ಆಗಿರಬಹುದೇನೊ! ಮೊದಲು ಓದಿದಾಗ ಹೇಗೆ ನಕ್ಕಿದ್ದೆನೋ ಹಾಗೆಯೆ ಈಗ ಓದಿದರೂ ನಗಿಸುತ್ತದೆ ಈ ಪುಸ್ತಕ. ಇದು ಒಂದು ರೀತಿಯಲ್ಲಿ ತೇಜಸ್ವಿಯವರ ಆತ್ಮಕಥೆಯೂ ಹೌದು, ಕುವೆಂಪು ಅವರ ವೈಯಕ್ತಿಕ ಜೀವನದ ಕತೆಯೂ ಹೌದು.  ಇಡಿ ಪುಸ್ತಕದ ಪೂರ್ವಾರ್ಧ ಅಣ್ಣನ ನೆನಪಾಗಿ ಉಳಿದರೆ ಇನ್ನರ್ಧ ಭಾಗ ಶಾಮಣ್ಣ, ಬಿಎಸ್ ಆಚಾರ್ಯ.  ಮುಂತಾದವರ 'ಮಾರ್ವೆಲಸ್ ' ಪೇಚಿನ ಕಥೆಗಳು ಬರುತ್ತವೆ. ಒಂದು ಸರಳ ,ಸೈಕಲ್ ಲೈಸೆನ್ಸ್ ಇಲ್ಲದೆ ಓಡಾಡಿದ್ದರ ಕೇಸು ನ್ಯಾಯಾಲಯಕ್ಕೆ ಹೋಗಿ ಬಂದದ್ದರ ಕಥೆ, ಅಲ್ಲಿಯೇ ಬರುವ ಪೋಲಿಸ ಪೀಟರ್ ರಾಣಿ, ಶಾಮಣ್ಣನ ಸಂಗೀತದ ಹುಚ್ಚಿನ ಅವಾಂತರ, ದಂತವಾದ್ಯ, ಬುಲ್ ಬುಲ್ ತರಂಗ್, ಸ್ಕೂಲಿನಿಂದ ಪರಾರಿ, ನಾಯಿಯ ಬಾಲ ಮುರಿದದ್ದು...   ಇಂತಹ ಘಟನೆಗಳು ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕು ಅನ್ನಿಸುವಂತೆ ಮಾಡುತ್ತದೆ. ಬಿಎಸ್ ಆಚಾರ್ಯ ರ  ಕವಿಗಳ ಫೊಟೊ ಸಂಗ್ರಹ ಮಾಡುವ ಮಾರ್ವೆಲಸ್ ಐಡಿಯಾ ಕೊನೆಗೆ ಕ್ಯಾಮೆರಾ ಕಳ್ಳತನದೊಂದಿಗೆ‌ ಮುಗಿದದ್ದು, ಜವಹರಲಾಲ್ ನೆಹರುಗೂ ಸೈಕಲ್ ಗಲಾಟೆಗೂ ಇರುವ ಸಂಬಂಧ ತಿಳಿಯದೇ ಪೆಚ್ಚಾಗಿದ್ದು, ಸೆಂಟ್ ವಾಲಾನೊಬ್ಬ ಕುವೆಂಪುರವರಿಗೆ ಯಾವುದೋ ಸೆಂಟು ಹಚ್ಚಿ ದಿನವಿಡಿ 'ಕಸ್ತೂರಿ ಮೃಗದಂತೆ' ಗಮ ಬೀರುತ್ತಾ ಓಡಾಡಿದ್ದು, ಇಂಗ್ಲಿಶ್ ಪರೀಕ್ಷೆಯಲ್ಲಿ He   ಬರೆಯಲು  hi ಎಂದು ಬರೆದು ಫೇಲಾಗಿ ಬೈಸಿಕೊಂಡಿದ್ದು ಎಲ್ಲಾ ಘಟನೆಗಳು

ಮಾಟಗಾತಿಯ ಬೆಣ್ಣೆ!!

 ಇವತ್ತು  ತೋಟದಲ್ಲಿ ಸುತ್ತುತ್ತಿರುವಾಗ ಗಿಡವೊಂದಕ್ಕೆ ಆಧಾರವಾಗಿ ಕೊಟ್ಟಿದ್ದ ಗುಟ್ಟವೊಂದಕ್ಕೆ ಬೆಳೆದಿದ್ದ ಫ಼ಂಗಸ್ ಇದು. ನೋಡಲು  ಜ್ವಲಂತವಾಗಿ ಉರಿಯುತ್ತಿರುವ  ಬೆಂಕಿಯಂತೇ ಕಾಣುವ ಈ ಫ಼ಂಗಸ್ ಹೆಸರು  ಮಾತ್ರ ವಿಚಿತ್ರ. Witche's Butter ಅಂದರೆ  ಮಾಟಗಾತಿಯ ಬೆಣ್ಣೆ ಎಂದರ್ಥ.   ಮುಟ್ಟಲು ಬೆಣ್ಣೆಯಂತೆ ಮೃದುವಾಗಿದ್ದರೂ ಮಾಟಗಾತಿಯರಿಗೂ  ಈ ಫ಼ಂಗಸ್ ಗೂ ಏನಾದರೂ  ಸಂಬಧವಿದೆಯೆ   ಗೊತ್ತಿಲ್ಲ. ಇಷ್ಟು  ಸುಂದರವಾದ ಫ಼ಂಗಸ್ ಗೆ ಇಂತಹ ಹೆಸರು ಸಿಕ್ಕಿದ್ದು ಮಾತ್ರ ವಿಪರ್ಯಾಸವೇ ಸರಿ! ಈ ಫ಼ಂಗಸ್ ಸಾಮಾನ್ಯವಾಗಿ ಸತ್ತ ಜೀವಗಳ ಮೇಲೆ , ಹಳೆಯ ಮರದ ಕೊಂಬೆಗಳ ಮೇಲೆ  ಬೆಳೆಯುತ್ತದೆ ಎಂಬುದು ಗೂಗಲ್ ಅತ್ತಿಗೆಯ ಉವಾಚ. ಉತ್ತರ ಮತ್ತು ದಕ್ಷಿಣ ಅಮೆರಿಕ, ಏಶಿಯ, ಯುರೋಪಿನ ಕೆಲ ಭಾಗಗಳು, ಆಫ಼್ರಿಕಾ ಖಂಡಗಳಲ್ಲಿ ಕಂಡುಬರುತ್ತವೆ. ಇದು  ಆಶ್ರಿತ ಕೊಂಬೆಯ ಅಥವಾ ಸತ್ತ ಜೀವಿಯ ಅಂಗಾಂಶಗಳಿಂದ ಬದುಕುತ್ತದೆ.ಈ ಫ಼ಂಗಸ್ ಹಳದಿ, ಗುಲಾಬಿ, ಕಪ್ಪು,  ಮತ್ತು ಕೇಸರಿ  ಬಣ್ಣದಲ್ಲಿ ಕಾಣಬರುತ್ತದೆಯಂತೆ. ಇದಕ್ಕೆ Orange brain ಅಂದರೆ ಕೇಸರಿ ಮೆದುಳು ಎಂಬ ಹೆಸರೂ ಇದೆ.  ಈ ಮಾಟಗಾತಿಯ ಬೆಣ್ಣೆ ಯ ಸೌಂದರ್ಯವನ್ನು ಯಾರೂ ಸೃಷ್ಟಿ ಮಾಡಲಾಗದು ಅಲ್ಲವೇ?

How A Pandemic Changed The World

It was a silent sunny morning. All the flowers in the garden were blooming. But the little Daisy and plump Lotus were thinking about the absence of humans. “Why are they not coming to the garden? Are they sick?” asked Daisy. Lotus said “Yeah, you’re right. They’ve been missing for a week. If not they would come to garden with their mobiles. Maybe they have gone somewhere?” “Whatever the case, I am happy without them. They made us dump in the dust and plastic”, said Daisy. “But I am curious about it,” said Lotus. “We know what to do now!” A voice came from behind. There were two butterflies. “What do you mean you know?” asked the flowers. “I think we can call Mother Nature to answer our questions,” said one of the butterflies. “Mother Nature!” exclaimed Daisy. ” Yes, you’re right, let’s call her”. All of them called Mother Nature. Then suddenly the trees leaves became the shape of a face and she asked, “What happened little ones? Why did you call me?”. “Mother nature, where

ಬೆಕ್ಕು v/s ಅಮ್ಮ

ಪುರಾತನ ನಾಗರೀಕತೆಗಳಲ್ಲಿ ಬೆಕ್ಕನ್ನು  ದೇವರೆಂದು ಪೂಜಿಸುತ್ತಿದ್ದರಂತೆ. ಈಗ ನೋಡಿದರೆ ನಮ್ಮ ಬೆಕ್ಕುಗಳು ಅದನ್ನಿನ್ನು ಮರೆತಿಲ್ಲವೆಂದು ಕಾಣುತ್ತದೆ.  ಈ ಮಾರ್ಜಾಲಗಳು  ತಾವೆ ಮನುಷ್ಯರನ್ನು ಆಳುವವರು ಎಂದು ತಿಳಿದಿರುವಂತಿದೆ. ಅಷ್ಟಕ್ಕೂ ಆಗಿದ್ದೇನು ಎಂದರೆ ನಮ್ಮ ಮನೆಯ ಬೆಕ್ಕು ಮತ್ತು ನನ್ನ ಅಮ್ಮನ ಕಾಳಗ. ಈ ಕಾಳಗವು ಸರ್ವವ್ಯಾಪಿಯೇ  ಎಂದೇನೂ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿಬಿಡಿ.   ನಾವು ಬೆಕ್ಕನ್ನು ತಂದಿದ್ದೇ ಇಲಿ ಹಿಡಿಯಲು ಬರಬಹುದು ಎಂಬ ಏಕೈಕ ನೆಪ ಕೊಟ್ಟು.ತಂದ ಮೊದಲ ಬೆಕ್ಕು ಒಂಥರಾ ರಾಯಲ್ ಕ್ಯಾಟ್ ಹಾಗೆಯೇ ಇತ್ತು. ಇಲಿ ಹೆಗ್ಗಣಗಳ ಮೇಲೆ ಸಂಪೂರ್ಣ ಹಿಡಿತ ಇದ್ದಿದ್ದರೂ ಅಮ್ಮ ಮಾತ್ರ "ಊರು ತಿರುಗ್ತು " ಎಂದು ಬೈದುಕೊಂಡಿದ್ದಳು. ತರುವಾಗ  ಮುದ್ದಾಗಿ ಇದೆ ಎಂದು ಆರ್ಕಿಡ್(ಸೀತಾಳೆ ಹೂವು) ಎಂದು ಹೆಸರು ಕೊಟ್ಟೆ. ನಂತರ ಗೊತ್ತಯಿತು ಇದು ಪೇಟೆಯ ಆರ್ಕಿಡ್  ಅಲ್ಲ ,ಪಕ್ಕಾ Wild  ಆರ್ಕಿಡ್ ಎಂದು. ಮನೆಯ ಬಳಿ    ಬರುವ ಕಳ್ಳ ಬೆಕ್ಕುಗಳ ಜೊತೆಗೆ ಜಗಳ ಕಾಯುವುದು ಇದರ ಅತೀ ಪ್ರಿಯ ಕೆಲಸ. ಜೊತೆಗೆ ನನ್ನ ಫೋಟೊಗಳ ಮಾಡೆಲ್ ಇವಳು. ತರತರವಾಗಿ ಅದನ್ನು ಹಿಡಿದು ಕುಳ್ಳಿರಿಸಿತೊಂದರೆ ಕೊಟ್ಟು ಫೋಟೊ ತೆಗೆಯುತ್ತಿದ್ದೆ. ನಂತರ  ನನ್ನ ಕಾಟದಿಂದ ಬೇಸತ್ತು ನಾನು ಬಂದೆ ಎಂದರೆ ಓಡಿಹೋಗುತ್ತಿತ್ತು . ತಮ್ಮ ಅದರ ಮೇಲೆ ಒಂದು ಬುಟ್ಟಿ ಮಗುಚಿಹಾಕಿ ಒಡಲು ಬಿಡುತ್ತಿದ್ದ. ಹೀಗೆ ಒಮ್ಮೆಯಂತು ಮತ್ತೊಂದು ಬೆಕ್ಕು ಕಚ್ಚಲು ಬಂದಾಗ ಇದ

ಹವಾಗುಣ ಬದಲಾವಣೆ ವಿರುದ್ಧದ ಮಕ್ಕಳ ಸೈನ್ಯ : Fridays for Future

ಯಾರಾದರೂ ಹಿರಿಯರನ್ನು ಕೇಳಿ,ಅವರು ಚಿಕ್ಕವರಿದ್ದಾಗ  ಎಂದಾದರೂ ಮಾಲಿನ್ಯದ ಕಾರಣದಿಂದ  ಶಾಲೆಗಳಿಗೆ  ರಜೆ ನೀಡಲಾಗಿತ್ತೆ ಎಂದು. ಅಥವಾ ನೀವೆ ಹಿರಿಯರಾಗಿದ್ದರೆ ನೀವೆ ಹೇಳಿ , ನೀವು ಚಿಕ್ಕವರಿದ್ದಾಗ ಇದ್ದ ಪರಿಚಿತ ಜೀವಿಗಳು ಇಂದು ನಮಗೇಕೆ ನೋಡಲು  ಸಿಗುತ್ತಿಲ್ಲ?  ನೀವು ಚಿಕ್ಕವರಿದ್ದಾಗ ಎಂದಾದರೂ ಮಲೆನಾಡಿನಲ್ಲಿ ನೀರಿಗೆ ಬರಗಾಲ ಬಂದಿತ್ತೆ? ಇಲ್ಲ ತಾನೆ? ಆದರೆ ಇವೆಲ್ಲವೂ ಇಂದು ನಡೆಯುತ್ತಿದೆ ಹಾಗು ನಿಮ್ಮ ಮುಂದಿನ ತಲೆಮಾರಿನ ನಾವು ಇವೆಲ್ಲಕ್ಕೂ  ಸಾಕ್ಷಿಯಾಗಿದ್ದೇವೆ.   ನಮ್ಮ ಮನೆಯಲ್ಲಿಯೆ ಈ ಬಾರಿ ಒಂದು ದಿನಕ್ಕೆ ೩೧೫ಮೀಮೀ ಮಳೆ ಬಂದಿತ್ತು. ಇಷ್ಟು ವರ್ಷ ಜೂನ್ ನಲ್ಲಿ ಬರುತ್ತಿದ್ದ ಮಳೆ ತಡವಾಗುತ್ತಿದೆ. ಕೊಲಾರದಲ್ಲಿ ನೀರಿಗಾಗಿ ೧.೬  ಕೀಮೀ ಬೋರ್ವೆಲ್ಲ್ ಹೊಡೆಯುವ ಪರಿಸ್ಥಿತಿ ಬಂದಿದೆ. ಪ್ರತಿವರ್ಷ ಪ್ರವಾಹದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಇದ್ದ ಕೆರೆಗಳ ಮೇಲೆ ಕಟ್ಟಡಗಳು ಬಂದು ಕುಳಿತಿವೆ ನೀವೆಲ್ಲರೂ ನಮಗೆ ಪಾಠ ಮಾಡುತ್ತೀರಿ, ಮರ ಕಡಿಯಬಾರದು, ನೀರನ್ನು ಹಿತಮಿತವಾಗಿ ಬಳಸಬೇಕು,ದುರಾಸೆ ಪಡಬೇಡ, ಪರಿಸರ ರಕ್ಷಣೆ ಮಾಡಬೇಕು ಎಂದು. ಆದರೆ ಯೋಚಿಸಿ ದೊಡ್ಡವರೆ, ನೀವೇನು ಮಾಡುತ್ತಿದ್ದೀರಿ? ನೀವು ನಿಮ್ಮ ಮುಂದಿನ ತಲೆಮಾರಿಗೆ ಏನು ಉಳಿಸುತ್ತಿದ್ದಿರಿ? ಬೋಳು ಗುಡ್ಡಗಳನ್ನೆ? ಕರಗಿದ ಹಿಮಕವಚಗಳನ್ನೆ? ಬಿಸಿಯಾದ ವಾತಾವರಣವನ್ನೆ?  ನಾವು ಮಾನವರ ದುರಾಸೆಯಿಂದ ಏನೆಲ್ಲಾ ಆಗಿದೆ .  ಆಫ಼್ರಿಕಾದ ಕೇಪ್ ಟೌನ್ನಲ್ಲಿ ನೀರು ಖಾಲಿಯಾಗ