"The greatest threat to our planet is the belief that someone else will save it. - Robert Swan
ಭೂಮಿಗಿರುವ ಅತ್ಯಂತ ದೊಡ್ಡ ಸಂಕಷ್ಟ ಎಂದರೆ ಅದು ಭೂಮಿಯನ್ನು ಮತ್ತೊಬ್ಬರು ಉಳಿಸುತ್ತಾರೆ ಎಂಬ ನಿರ್ಲಕ್ಷ್ಯ ಭಾವ - ರಾಬರ್ಟ್ ಸ್ವಾನ್
ನಮ್ಮ ದೇಹದ ತಾಪಮಾನ ಎರಡು ಡಿಗ್ರೀ ಹೆಚ್ಚಾದರೆ ನಮಗೇನಾಗಬಹುದು? ಹೆಚ್ಚೆಂದರೆ ಸಣ್ಣ ಜ್ವರ ಬರಬಹುದಷ್ಟೇ. ಆದರೆ ಭೂಮಿಯ ತಾಪಮಾನ ಇನ್ನೂ 2 ಡಿಗ್ರೀ Celcius ಹೆಚ್ಚಾದರೆ..? ನಾವು ಮತ್ತೆ ಭೂಮಿಯನ್ನು ಸುಸ್ಥಿತಿಗೆ ತರಲಾರದ ಸ್ಥಿತಿಗೆ ಹೋಗಿಬಿಡಬಹುದು! ಸಮುದ್ರ ಮಟ್ಟ ಹೆಚ್ಚಾಗಿ, ಅನೇಕ ದ್ವೀಪಗಳು ಮುಳುಗಿ ಹೋಗಬಹುದು,ಕರಾವಳಿ ಇಲ್ಲವಾಗಬಹುದು. ಪ್ರವಾಹ ಗಳು (ಇನ್ನೂ) ಹೆಚ್ಚಾಗಬಹುದು.ಇವೆಲ್ಲವೂ ನೂರಾರು ವರ್ಷಗಳ ನಂತರ ಆಗುವಂತದ್ದಲ್ಲ.
ಈಗ ಆಗುತ್ತಿರುವಂತದ್ದು. ಭೂಮಿಯ ತಾಪಮಾನವನ್ನು 1.5 ಡಿಗ್ರೀ celsius ನಲ್ಲಿಯೇ ನಿಯಂತ್ರಿಸದಿದ್ದರೆ ಇವೆಲ್ಲವೂ ಆಗುತ್ತದೆ.
ಇದೇ ಉದ್ದೇಶದಿಂದಲೇ ಪ್ಯಾರಿಸ್ ಅಗ್ರೀಮೆಂಟ್ ಮಾಡಿದ್ದು .ಈ ಪ್ಯಾರಿಸ್ ಅಗ್ರೀಮೆಂಟ್ ಗೆ ಈಗ 5 ವರ್ಷ. 5 ನೇ ವರ್ಷದ ಸಲುವಾಗಿ ಮೊನ್ನೆ ನ್ಯೂಸ್ ಚಾನೆಲ್ ಒಂದರಲ್ಲಿ ಇದರ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಇದೇನಿದು ಎಂದು ಪ್ಯಾರಿಸ್ ಅಗ್ರೀಮೆಂಟ್ ಬಗ್ಗೆ ಕುತೂಹಲದಿಂದ ಒಂದಿಷ್ಟು ಹುಡುಕಿದೆ.ಹೀಗೆ ಹುಡುಕಾಡುವಾಗ ಸಿಕ್ಕಿದ್ದು #Fightfor1Point5 ಚಳುವಳಿ. ಮೊದಲು ಸುಮಾರು ಒಂದು ತಿಂಗಳ ಹಿಂದೆಯೇನೋ ಇದರ ಬಗ್ಗೆ ಕೇಳಿದ್ದೇನಾದರೂ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಕೊನೆಗೆ ಹಲವಾರು ಹುಡುಕಾಟಗಳ ನಂತರ ಇದು Fridays For Future ಸಂಘಟನೆಯದದೇ ಒಂದು ಭಾಗ ಎಂದು ತಿಳಿಯಿತು.ಈ ಚಳುವಳಿಯ ಉದ್ದೇಶ ಭೂಮಿಯನ್ನು 1.5 ಡಿಗ್ರೀ Celsius ತಾಪಮಾನಕ್ಕಿಂತ ಮೇಲೆ ಹೋಗದಂತೆ ತಡೆಯಬೇಕು ಎಂದು.ಅಗ್ರೀಮೆಂಟ್ ಗೆ ಬರೀ ಸಹಿ ಹಾಕುವುದಷ್ಟೇ ಅಲ್ಲ, ಸ್ವಲ್ಪ ತಾಪಮಾನ ನಿಯಂತ್ರಿಸುವ ಕೆಲಸವನ್ನೂ ಮಾಡಿ ಎಂಬುದು ಇವರ ಬೇಡಿಕೆ.
ಅಷ್ಟಕ್ಕೂ ಈ ಪ್ಯಾರಿಸ್ ಅಗ್ರೀಮೆಂಟ್ ಎಂದರೆ ಏನು?: 2015 , ಡಿಸೆಂಬರ್ 12 ರಂದು 194 ದೇಶಗಳು ಈ ಪ್ಯಾರಿಸ್ ಅಗ್ರೀಮೆಂಟ್ ಗೆ ಸಹಿ ಹಾಕಿದವು.ಈ ಅಗ್ರೀಮೆಂಟ್ ನ ಮುಖ್ಯ ಉದ್ದೇಶ Climate Change ನಿಂದ ತಾಪಮಾನ ಹೆಚ್ಚಾಗದಂತೆ ತಡೆಯುವುದು. ಅಂದರೆ 1.5 ಡಿಗ್ರೀ celsius ಮೇಲೆ ಹೋಗದಂತೆ ತಡೆಯುವುದು.ಇದೆ ಅಗ್ರೀಮೆಂಟ್ ನ ಕಾರಣದಿಂದಲೇ ಈ ಚಳುವಳಿ ಶುರುವಾದದ್ದು. ಒಂದು ಡಿಗ್ರೀ ಹೆಚ್ಚಾದರೆ ಏನು ಆಗುವುದಿದೆ ಎಂದು ಉದಾಸೀನ ಮಾಡುವ ಕಾಲವಲ್ಲ ಇದು. ಒಂದುವೇಳೆ 2040ರ ವೇಳೆಗೆ 2 ಡಿಗ್ರೀ celsius ಹೆಚ್ಚಾಗಿಬಿಟ್ಟರೆ ಎನಾಗಬಹುದು ಎಂಬ ಪರಿಣಾಮಗಳ ಪಟ್ಟಿಯನ್ನು ವಿಜ್ನಾನಿಗಳು ಕೊಟ್ಟಿದಾರೆ.
ಮೊದಲೇ ಹೇಳಿದ ಹಾಗೆ ಭೂಮಿಯಲ್ಲಿನ 70% ಕರಾವಳಿ ತೀರಗಳ ಹತ್ತಿರ ಸಮುದ್ರಮಟ್ಟ ಸುಮಾರು 0.66 feet ಅಂದರೆ 0.2 ಮೀಟರ್ ಏರುತ್ತದೆ.
ಪ್ರವಾಹಗಳು,ಸೂನಾಮಿಗಳು,ಮಣ್ಣಿನ ಸವಕಳಿ ಮುಂತಾದ ಸಮಸ್ಯೆಗಳಾಗುತ್ತದೆ.
ನೀರಿನಲ್ಲಿ ಲವಣಾಂಶ ಇನ್ನೂ ಹೆಚ್ಚಾಗುತ್ತದೆ.
ಅಂಟಾರ್ಕ್ಟಿಕದಲ್ಲಿ ಹಿಮಕುಸಿತ ಇನ್ನೂ ಹೆಚ್ಚಾಗುತ್ತದೆ ಮತ್ತು ಇದು ಮೊದಲು ಹೇಳಿದ ಸಮುದ್ರಮಟ್ಟ ಹೆಚ್ಚಾಗಳು ಕಾರಣವಾಗುತ್ತದೆ.
ಸಮುದ್ರದ ಮತ್ತು ನೀರಿನ ನೈಸರ್ಗಿಕ ಚಕ್ರ ಏರುಪೇರಾಗುತ್ತದೆ. ಅಂದರೆ ನೀರಿನ ಕೆಳಭಾಗದಲ್ಲಿ ಇರುವ ಜೀವಿಗಳು ಸ್ವಲ್ಪ ಮೇಲೆ ಬಂದು ಜೀವಸಬಹುದು. ಹೀಗಾದರೆ ಕ್ರಮೇಣ ಸಮುದ್ರ ಜೀವಿಗಳ ಆಹಾರ ಕ್ರಮ ವ್ಯತ್ಯಾಸವಾಗಿ, ಇವು ನಶಿಸಿಯೂ ಹೋಗಬಹುದು.
ಇನ್ನು ಒಂದು ಡಿಗ್ರೀ ಹೆಚ್ಚಿಗೆಯಾದರೂ ಮನುಷ್ಯರ ಸಾಮಾಜಿಕ ಜೀವನದಲ್ಲಿ ಇದು ಪರಿಣಾಮ ಬೀರಬಹುದು ಎನ್ನುತ್ತಾರೆ.
ಇದು ಮನುಷ್ಯರಲ್ಲಿ ಬಿಸಿಲಿಂದ ಹೆಚ್ಚಾಗುವ ಕಾಯಿಲೆ ಗಳನ್ನು ತರಬಹುದು.
ಮಲೇರಿಯಾ,ಚಿಕನ್ಗುನ್ಯಾ , ಡೆಂಗೀ ಮುಂತಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆಯಂತೆ.
ಆಹಾರ ಭದ್ರತೆ ಕಡಿಮೆಯಾಗಬಹುದು. ಅದರಲ್ಲೂ ಪೂರ್ವ ಆಫ್ರಿಕಾ, ಮಧ್ಯ ಯುರೋಪ್ ಮತ್ತು ದಕ್ಷಿಣ ಅಮೆರಿಕ ದಲ್ಲಿ ಈ ಸಮಸ್ಯೆ ಬರಬಹುದು. ಜೊತೆಗೆ ನಮ್ಮ ಬೆಳೆಗಳಾದ ಭತ್ತ,ಗೋಧಿ,ಜೋಳಗಳಲ್ಲಿ ಸುಮಾರು 5% ನಷ್ಟು ಪೌಷ್ಟಿಕಾಂಶ ಕಡಿಮೆಯೂ ಆಗಬಹುದು.
ಮುಂದುವರೆದ ದೇಶಗಳಲ್ಲಿ ಆರ್ಥಿಕ ಕುಸಿತವಾಗಬಹುದು.
ಮೊದಲಿನದಲೂ ನಮಗೆ ಪರಿಹಾರ ಕೈಯಲ್ಲಿಯೇ ಇದೆ. ಆದರೆ ಅದನ್ನು ನಾವು ಕಣ್ಣು ತೆರೆದು ನೋಡಬೇಕಷ್ಟೆ. ನಾವು ಭೂಮಿಗಾಗಿ ಸ್ವಲ್ಪ ತ್ಯಾಗ ಮಾಡಲು ಸಿದ್ಧರಿರಬೇಕಷ್ಟೆ.
ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಬೇಕು.
ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆಯನ್ನೇ ಬಳಸಬೇಕು. ಅಥವಾ ಪರ್ಯಾಯ ಇಂಧನಗಳನ್ನು ಬಳಸಬೇಕು.
ಶಕ್ತಿಯನ್ನು ಉಳಿಸಬೇಕು. ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡುವುದನ್ನು ನಿಲ್ಲಿಸಬೇಕು.
ಯಾವಾಗಲೂ ಹೇಳುವಂತೆ ಕೊಳ್ಳುಬಾಕತನಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕಬೇಕು.
ಕಾಡುಗಳನ್ನು ಪುನರುಜ್ಜೀವನಗೊಳಿಸಬೇಕು
ಕೈಗಾರಿಕೆಗಳಲ್ಲಿ ಕಾರ್ಬನ್ ಹೊಮ್ಮಿಸುವಿಕೆಯನ್ನು ಕಡಿಮೆ ಮಾಡಬೇಕು.
ಕೈಗಾರಿಕೆಗಳಲ್ಲಿ ತ್ಯಾಜ್ಯವನ್ನು ಕಡಿಮೆ ಮಾಡಬೇಕು.
ಇದು ನಾವೆಲ್ಲರೂ ಮಾಡಬಹುದಾದ ಅಳಿಲು ಸೇವೆಯಷ್ಟೆ. ನಮ್ಮ ಮುಂದಿನ ಭವಿಷ್ಯಕ್ಕಾಗಿ ನಾವು ಇಷ್ಟಾದರೂ ಮಾಡಲೇ ಬೇಕು. ಭೂಮಿಯಲ್ಲಿ ಒಂದುವೇಳೆ ಜೀವಸಂಕುಲ ನಾಶವಾದರೆ ಮತ್ತೆ ಭೂಮಿ ಅದನ್ನು ಮರುಸ್ಥಾಪಿಸಿಕೊಳ್ಳುತ್ತದೆ. ಆದರೆ ಮನುಷ್ಯ ನಾಶವಾದರೆ?ನಾವು ನಮ್ಮನ್ನು ಮತ್ತೆ ಮರುಸ್ಥಾಪಿಸಿಕೊಳ್ಳಬಲ್ಲವೇ? ನಾವು ಇದನ್ನು ಬರೀ ಭೂಮಿಗಾಗಿಯಷ್ಟೆ ಅಲ್ಲ, ನಮಗಾಗಿಯೂ ಮಾಡಬೇಕು.ಭೂಮಿಗೆ ಜ್ವರ ಬಂದಿದೆ. ಬಂದಿರುವ ಜ್ವರಕ್ಕೆ ಔಷದಿ ನಾವೇ ಕೊಡೋಣವೆ?
Very well written in simple way about serious matter...
ReplyDeletethanks
Delete