Skip to main content

Posts

Showing posts from November, 2020

ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು

ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು   ಫ಼್ಯಾಂಟಸಿ ಕಥೆಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಬಾಲಮಂಗಳದ ಡಿಂಗ, ಶಕ್ತಿಮದ್ದು, ತುಂತುರುವಿನಲ್ಲಿ ಬರುವ ಮರಿಯಾನೆ ಐರಾ, ಶೇರು.... ಇನ್ನು  ಜಗತ್ಪ್ರಸಿದ್ದ Harry Potter ಪುಸ್ತಕ ಸರಣಿ.... ಪುರಾಣವನ್ನು ಆಧರಿಸಿ ಇತ್ತೀಚಿಗೆ ಬರೆದ Sita:The Warrior of Mithila..... ಇತ್ಯಾದಿ ಪುಸ್ತಕಗಳನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ ಅಥವಾ ಹೆಸರನ್ನಾದರೂ ಕೇಳಿರುತ್ತಾರೆ. ಡಿಂಗನಂತಹ ಕಾಮಿಕ್ ಕಥೆಗಳಂತೂ ನಮ್ಮಂತ ಮಕ್ಕಳಿಗೆ ಬಹಳ ಇಷ್ಟವಾದದ್ದು. ಜಗತ್ತಿನಲ್ಲಿ ಎಲ್ಲೇ ಹೋದರೂ ಫ಼್ಯಾಂಟಸಿ ಕಥೆಗಳು ಸಿಗುತ್ತವೆ. ಈ ಪುಸ್ತಕಗಳ ಮೋಡಿಯೇ ಅಂಥದ್ದು.     ಫ಼್ಯಾಂಟಸಿ ಕಥೆಗಳನ್ನು ಓದುತ್ತಿದ್ದರೆ ಸಮಯ ಓಡಿದ್ದೇ ತಿಳಿಯುವುದಿಲ್ಲ. ಅದರದ್ದು ಬೇರೆಯದೇ ಪ್ರಪಂಚ. ಇಲ್ಲಿ ಕಲ್ಪನೆಗೆ ಮಿತಿಯೆಂಬುದೇ ಇಲ್ಲ. ಮಾಟಗಾತಿಯರು ಒಳ್ಳೆಯವರೂ ಆಗಬಹುದು... ಕೆಟ್ಟವರೂ ಆಗಬಹುದು. ಪ್ರಾಣಿ ಪಕ್ಷಿಗಳು ಮಾತನಾಡಲೂಬಹುದು... ಮನುಷ್ಯನೇ ಪ್ರಾಣಿಯಾಗಿ ಮಾರ್ಪಾಡಾಗಲೂಬಹುದು. ಇಂತಹ ಜಗತ್ತು ನಮಗೊಂದಿದ್ದಿದ್ದರೆ ಎಷ್ಟು ಚೆನ್ನ?    ಮಕ್ಕಳಿಂದ ಹಿರಿಯರ ವರೆಗೂ ಇದು ಇಷ್ಟವಾಗುತ್ತದೆ. ತಾನೂ ಕಥೆಯ ನಾಯಕ/ನಾಯಕಿಯಂತೆ ‍‍‍‍‍ಸಾಹಸಿಯಾಗಬೇಕೆಂದು ಎಲ್ಲರಿಗೂ ಅನಿಸುತ್ತದೆ. ಡಿಂಗನನ್ನು ನೋಡಿ ಅವನ ಹಾಗೆಯೇ ಹಾರಬೇಕೆಂದು ಹೋದವರೆಷ್ಟೋ...ಹೋಗಿ ಬಿದ್ದು ಗಾಯ ಮಾಡಿಕೊಂಡವರೆಷ್ಟೋ! ಈ ಕಥೆಗಳ ಪಾತ್ರಗಳೆಲ್ಲ ನಮ್ಮ ಪ

ನಿಸರ್ಗದ ಆರ್ಕಿಟೆಕ್ಟ್ ಗಳು!

ಆವತ್ತು ಸುಮ್ಮನೆ ಸಂಜೆ ಬಲ್ಪ್ ಉರಿಸಿಕೊಂಡು ಮನೆಯಲ್ಲಿ ಕುಳಿತಿದ್ದೆ. ಬಲ್ಪ್ ಉರಿಸಿದ ಹತ್ತೇ ನಿಮಿಷದಲ್ಲಿ ಹಾತೆ ಹುಳುಗಳ ಹಾವಳಿ ಶುರುವಾಯಿತು.  ಕೊನೆಗೆ ಅವುಗಳ ಉಪಟಳ ಹೆಚ್ಚಾಗಿ ಲೈಟ್ ಅನ್ನೇ ಬಂದುಮಾಡಿಬಿಟ್ಟೆ. ಸ್ವಲ್ಪ ಹೊತ್ತು ಬಿಟ್ಟು ನೋಡಿದರೆ ಸುಮಾರು ಒಂದು ಬುಟ್ಟಿಯಷ್ಟು ಹುಳುಗಳು ಸತ್ತು ಬಿದ್ದಿವೆ! ಸೂಕ್ಷ್ಮ ವಾಗಿ ನೋಡಿದಾಗ ತಿಳಿಯಿತು, ಇವು ಬೇರೆ ಜಾತಿಯ ಹುಳುಗಳಲ್ಲ ನಾವೆಲ್ಲರು ಬೈದುಕೊಳ್ಳುವ ವರಲೆಗಳೆ ಎಂದು. ವರ್ಷವಿಡಿ ರೆಕ್ಕೆಯಿಲ್ಲದೇ ಹುತ್ತದಲ್ಲಿಯೇ ಇರುವ ವರಲೆಗಳು ಮಳೆಗಾಲದಲ್ಲಿ ಮಾತ್ರ ಅದು ಏಕೆ ರೆಕ್ಕೆ ಬಂದು   ಹೊರಗೆ ಬರುತ್ತವೆಯೋ?  ಬಹುಶಃ ಇವು ಒಂದು ಹುತ್ತದಿಂದ ಮತ್ತೊಂದು ಜಾಗಕ್ಕೆ ಪಡೆಯನ್ನು ಸಾಗಿಸುವ ಕೆಲಸ ಇರಬೇಕು. ಆದರೂ ಬೆಳಕಿಗೆ ಆಕರ್ಶಿತವಾಗಿ ಬರುವುದೇಕೆ? ಅದೇಕೆ ಅವು ಮಳೆಗಾಲದಲ್ಲಿಯೇ ಹೊರಬೀಳಬೇಕು? ಚಿಕ್ಕ ಮಕ್ಕಳು ಹಠ ಮಾಡಿದರೆ "ಎಂತಾ ವರಲೆ ಹಿಡಿತ್ಯಾ" ಎಂದು ಬೈಯುವ ವರೆಗು ಈ ವರಲೆಗಳು  ನಮ್ಮ ಜೀವನದಲ್ಲಿ ' ಹಾಸು ಹೊಕ್ಕಿವೆ'. ಅಚ್ಚ ಕನ್ನಡದಲ್ಲಿ ಇದನ್ನು ಗೆದ್ದಲು ಎಂದು ಕರೆದರೂ ನಮ್ಮ ಕಡೆ ವರಲೆ ಎಂದೇ ಹೇಳುವುದರಿಂದ, ನಾನು ಈ ಲೇಖನದುದ್ದಕ್ಕೂ ವರಲೆ ಎಂದೇ ಬಳಸುತ್ತೇನೆ. ಇವುಗಳ ಹುತ್ತವನ್ನು ಮುರಿದು ಹಾಕಿ, ಸ್ವಲ್ಪ ಸಮಯದ ನಂತರ ಬಂದು ನೋಡಿದರೆ ಹುತ್ತ ಎಂದೂ ಮುರಿದೇ ಇರಲಿಲ್ಲವೇನೊ ಎನ್ನುವ ಮಟ್ಟಿಗೆ ಮತ್ತೆ ಕಟ್ಟಿಬಿಡುವ ಚಾಲಾಕಿಗಳು ಈ ವರಲೆ.  ವರಲೆಗಳ

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

The Night Diary : ಒಂದು ಗೆರೆಯಿಂದ ಜನ ವೈರಿಗಳಾಗಬಲ್ಲರೇ?

The Night Diary : ಸ್ವಾತಂತ್ರ್ಯ ಕಾಲದ ಕಥೆ  " All that suffering, all that death, for nothing. I will never understand, as long as I live, how a country could change overnight from a line drawn."   ದೇಶ ವಿಭಜನೆಯ ಸಮಯದಲ್ಲಿ ಚೂರು ಚೂರಾದ ಜನರ ಜೀವನದ ಕಥೆ ಇದು. ನಿಶಾ ಎಂಬ ೧೨ ವರ್ಷದ , ಈಗಿನ ಪಾಕಿಸ್ತಾನದ ಮಿರ್ ಪುರ್ ಖಾಸ್ ನಗರದಲ್ಲಿ ವಾಸಿಸುತ್ತಿದ್ದ   ಕಾಲ್ಪನಿಕ ಹುಡುಗಿಯ ಕಥೆಯಿದು. ಹೆಚ್ಚು ಮಾತನಾಡದ ನಿಶಾ ತನ್ನ ಪ್ರೀತಿಯ  ಅಡುಗೆ ಮಾಡುವವ ಕಾಜ಼ಿ ಕೊಟ್ಟ ಪುಸ್ತಕದಲ್ಲಿ ಹಳೆಯ ಭಾರತದಿಂದ ಹೊಸ ಭಾರತದವರೆಗಿನ ಕಥೆಗಳನ್ನು ಬಿಚ್ಚಿಡುತ್ತಾ ಬರುತ್ತಾಳೆ. ತಾನು ಮತ್ತು ತನ್ನ ಅವಳಿ ತಮ್ಮ ಅಮಿಲ್ ಹುಟ್ಟುವಾಗಲೆ ತೀರಿಹೋದ ಮುಸ್ಲಿಂ ತಾಯಿ ಮತ್ತು  ವೈದ್ಯನಾದ ಹಿಂದು ತಂದೆ ಮತ್ತು ಅಜ್ಜಿ ಇರುವ ಪುಟ್ಟ ಕುಟುಂಬದ  ಪಾಕಿಸ್ತಾನದಿಂದ ಭಾರತಕ್ಕೆ  ವಲಸೆ ಬರುವ ಕಥೆ ಇದು. ಮನೆ ಬಿಟ್ಟು ಜೊಧ್ ಪುರಕ್ಕೆ ಹೋಗುವಾಗ ಅಡುಗೆ ಮಾಡುವ ಕಾಜ಼ಿಯನ್ನು ಏಕೆ ಬಿಟ್ಟು ಹೋಗಬೇಕು ಎಂಬ ಅವಳಿಗಳ ಪ್ರಶ್ನೆ, ಮಾರ್ಗ ಮಧ್ಯದಲ್ಲಿ ಅಮ್ಮನ ಸಹೋದರನ  ಮನೆಯಲ್ಲಿ ಅಡಗುತಾಣವಾಗಿ ಉಳಿದುಕೊಂಡಾಗ ಎದುರಿನ ಮನೆಯ ಹಫ಼ಾ ಎಂಬ ಮುಸ್ಲಿಮ್ ಹುಡುಗಿಯ ಜೊತೆಗೆ  ಮಾತಾಡುವ ಆಸೆ, ರಾಜಸ್ತಾನದ ಮರುಭೂಮಿಯಲ್ಲಿ ನೀರಿಗಾಗಿ ನಡೆಯುವ ಕೊಲೆಗಳ ಕಥೆ ಎಲ್ಲವೂ ಒಬ್ಬ ಹುಡುಗಿಯ ದೃಷ್ಟಿಕೋನದಲ್ಲಿ  ಲೇಖಕಿ ನೋಡಿದ್ದಾರೆ . ಬೇರೆ ಧರ್