Skip to main content

Posts

Showing posts from August, 2021

ರೈನಾ ದೆ ಪಿಮೆಂಟಾ - ಕರಿಮೆಣಸಿನ ರಾಣಿಯ ಕಥೆ!

ನಾವೆಲ್ಲರೂ ಇತಿಹಾಸವನ್ನು ಶಾಲೆಯಲ್ಲಿ ಕಲಿಯುವಾಗ, ರಾಣಿ ಅಬ್ಬಕ್ಕದೇವಿ ಉಳ್ಳಾಳದ ರಾಣಿಯಾಗಿದ್ದಳು.. ಅವಳು ಪೋರ್ಚುಗೀಸರೊಡನೆ ಹೋರಾಡಿದಳು.. ಎಂದೆಲ್ಲಾ ಬಾಯಿಪಾಠ  ಮಾಡಿರುತ್ತೇವೆ. ಹಾಗೆ, ಲಕ್ಷ್ಮಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ರಾಣಿಯರ ಬಗ್ಗೆಯೂ ಕಲಿತಿರುತ್ತೇವೆ. ಈಜಿಪ್ಟ್ ನ ಕ್ಲಿಯೋಪಾತ್ರ, ನೆಫೇರಿಟ್ಟಿ , ಇಂಗ್ಲೆಂಡ್ ನ ರಾಣಿ ಎಲಿಜಬೆತ್ ಮುಂತಾದವರ ಬಗ್ಗೆಯೂ ಕೇಳಿರುತ್ತೇವೆ. ಆದರೆ ನಮ್ಮೂರಿನ ರಾಣಿಯರ ಬಗ್ಗೆ, ನಮ್ಮೂರಿನ ಇತಿಹಾಸದ ಬಗ್ಗೆ ನಮಗೆ ಎಷ್ಟು ಗೊತ್ತು?  ನನಗೆ ನಿಜ ಹೇಳಬೇಕೆಂದರೆ ಸೊದೆ ಅರಸರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದು ಬಿಟ್ಟರೆ, ಮತ್ತೇನು ಗೊತ್ತಿರಲಿಲ್ಲ. ಆದರೆ ಈಗೊಂದು 2 ವಾರದ ಹಿಂದೆ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಎಂಬ ಪುಸ್ತಕ ಓದಿದೆ. ಈ ವರ್ಷದ ನನ್ನ favorite  ಪುಸ್ತಕ ಎನ್ನಬಹುದೇನೋ.  ಚೆನ್ನ ಭೈರಾ ದೇವಿಯ ಬಗ್ಗೆ ಒಂದೆರಡು ಕಥೆಗಳನ್ನೂ, ಡಾ. ಕೆ. ಎನ್. ಗಣೇಶಯ್ಯನವರ 'ಬಳ್ಳಿ ಕಾಳ ಬೆಳ್ಳಿ' ಎಂಬ ಪುಸ್ತಕವನ್ನೂ ಓದಿದ್ದೆ. ಆದರೆ ಈ ರಾಣಿಯ ಪೂರ್ಣ ಇತಿಹಾಸವನ್ನು ತಿಳಿದಿರಲಿಲ್ಲ, ಎಲ್ಲವೂ ಒಂದು ರೀತಿಯ ಪಝಲ್ ತುಂಡುಗಳಂತೆ ಇತ್ತು. ಆದರೆ ಈ ಪುಸ್ತಕ ಉಳಿದ ಇತಿಹಾಸದ ಪುಸ್ತಕದಂತೆ ಇರದೆ, ಕಥೆಯಂತೆ ಇದ್ದು,  ತುಂಬಾ ಇಷ್ಟವಾಯಿತು.  ಯಾರಿವಳು ಚೆನ್ನಭೈರಾದೇವಿ? : ಇ ವಳು ಗೇರುಸೊಪ್ಪದ ರಾಣಿ! ಗೇರುಸೊಪ್ಪ ನಮ್ಮ ಜಿಲ್ಲೆಯ ಒಂದು ಸಣ್ಣ ಹಳ್ಳಿ (ಉತ್ತರ ಕನ್ನಡ) ಇದು ಶರಾವತಿ ನದಿಯ