Skip to main content

Posts

Showing posts from September, 2020

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಮಂಜಿನ ನಡುವೆ ಮೇಲೆದ್ದ ಬೆಂಕಿಯ ಕಿಡಿ : ಮಲಾಲ

೨೦೧೨ ಅಕ್ಟೋಬರ್ ೯ , ತಾಲಿಬಾನಿ ಉಗ್ರನೊಬ್ಬ ೧೪ ವರ್ಷ ವಯಸ್ಸಿನ ಮಲಾಲ ಯುಸಫ಼ೈಜಿಯಾ ಎಂಬ ಹುಡುಗಿಯ ತಲೆಗೆ ಹೊಡೆದ ಒಂದು ಗುಂಡು ಪ್ರಪಂಚದ ಸಾವಿರಾರು ಶಿಕ್ಷಣ ವಂಚಿತ ಮಕ್ಕಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವಂತೆ ಮಾಡಿತು. ಜಗತ್ತಿಗೆ ಅನಾಮಿಕಳಾಗಿದ್ದ ಇದೇ ಮಲಾಲಳಿಗಾಗಿ ಜಗತ್ತು ಪ್ರಾರ್ಥಿಸಿತ್ತು. ಮಲಾಲ ಈಗ ಬರಿ ಹೆಸರಾಗಿ ಉಳಿದಿಲ್ಲ . ಆಕೆ ಒಬ್ಬ ಶಕ್ತಿಯಾಗಿದ್ದಾಳೆ. ತನ್ನ ಹುಟ್ಟಿದ ಊರಾದ ಸ್ವಾತ್ ಕಣಿವೆ ತಾಲಿಬಾನಿ ಆಕ್ರಮಿತ ಪ್ರದೇಶವಾಗಿದ್ದರೂ , ಜನರು ತಲೆಯೆತ್ತಿ ನೋಡಲೂ ಭಯಪಡುತ್ತಿದ್ದ ಸಮಯದಲ್ಲಿ ಅದೇ ತಾಲಿಬಾನಿಗಳ ವಿರುದ್ಧ ದನಿಯೆತ್ತಿ ಮಾತಾಡಿದ ಹುಡುಗಿ ಈಕೆ. ಕೇವಲ ೧೧ ವರ್ಷದವಳಾಗಿದ್ದಾಗ ಪಾಕಿಸ್ತಾನದ ಪೇಶಾವರದ ಪ್ರೆಸ್ ಕ್ಲಬ್ ನಲ್ಲಿ " ಮೂಲಭೂತ ಹಕ್ಕಾದ ಶಿಕ್ಷಣವನ್ನು ನಮ್ಮಿಂದ ಕಿತ್ತುಕೊಳ್ಳಲು ಆ ತಾಲಿಬಾನಿಗಳಿಗೆ ಎಷ್ಟು ಧೈರ್ಯ? " ಎಂದು ಪ್ರಶ್ನಿಸಿದ್ದಳು.    ಬಿಬಿಸಿ ಪತ್ರಿಕೆಗಾಗಿ ಸ್ವಾತ್ ಕಣಿವೆಯ ಪರಿಸ್ಥಿತಿ ಬಗ್ಗೆ ಗುಲ್ಮಕೈ ಎಂಬ ಗುಪ್ತ ನಾಮದಲ್ಲಿ ದಿನಚರಿ ಬರೆಯುತ್ತಿದ್ದ ಈಕೆ ಮತ್ತು ಅವಳ ತಂದೆ ಅದಾಗಲೆ ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವಳ ತಂದೆ ಜೀಯುದ್ದೀನ್ ಯುಸಫ಼ೈಜಿಯ  ಶಿಕ್ಷಣ ತಜ್ಞ ರಾಗಿ, ಖುಶಾಲ್ ಎಂಬ ಶಾಲೆಗಳನ್ನು ನಡೆಸುತ್ತಿದ್ದವರು. ಮಲಾಲಾಳೆ ಹೇಳುವಂತೆ ಅವಳ ತಂದೆ ಅವಳಲ್ಲಿ ಬತ್ತದ ಸ್ಥೈರ್ಯವನ್ನು ತುಂಬಿದವರು. ಬಿಬಿಸಿ ಯಲ್ಲಿ ಬರೆಯುತ್ತಿದ್ದ ದಿನಚರಿ ಪ್ರಸಿ