ಯಾರಾದರೂ ಹಿರಿಯರನ್ನು ಕೇಳಿ,ಅವರು ಚಿಕ್ಕವರಿದ್ದಾಗ ಎಂದಾದರೂ ಮಾಲಿನ್ಯದ ಕಾರಣದಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತೆ ಎಂದು. ಅಥವಾ ನೀವೆ ಹಿರಿಯರಾಗಿದ್ದರೆ ನೀವೆ ಹೇಳಿ , ನೀವು ಚಿಕ್ಕವರಿದ್ದಾಗ ಇದ್ದ ಪರಿಚಿತ ಜೀವಿಗಳು ಇಂದು ನಮಗೇಕೆ ನೋಡಲು ಸಿಗುತ್ತಿಲ್ಲ? ನೀವು ಚಿಕ್ಕವರಿದ್ದಾಗ ಎಂದಾದರೂ ಮಲೆನಾಡಿನಲ್ಲಿ ನೀರಿಗೆ ಬರಗಾಲ ಬಂದಿತ್ತೆ? ಇಲ್ಲ ತಾನೆ? ಆದರೆ ಇವೆಲ್ಲವೂ ಇಂದು ನಡೆಯುತ್ತಿದೆ ಹಾಗು ನಿಮ್ಮ ಮುಂದಿನ ತಲೆಮಾರಿನ ನಾವು ಇವೆಲ್ಲಕ್ಕೂ ಸಾಕ್ಷಿಯಾಗಿದ್ದೇವೆ. ನಮ್ಮ ಮನೆಯಲ್ಲಿಯೆ ಈ ಬಾರಿ ಒಂದು ದಿನಕ್ಕೆ ೩೧೫ಮೀಮೀ ಮಳೆ ಬಂದಿತ್ತು. ಇಷ್ಟು ವರ್ಷ ಜೂನ್ ನಲ್ಲಿ ಬರುತ್ತಿದ್ದ ಮಳೆ ತಡವಾಗುತ್ತಿದೆ. ಕೊಲಾರದಲ್ಲಿ ನೀರಿಗಾಗಿ ೧.೬ ಕೀಮೀ ಬೋರ್ವೆಲ್ಲ್ ಹೊಡೆಯುವ ಪರಿಸ್ಥಿತಿ ಬಂದಿದೆ. ಪ್ರತಿವರ್ಷ ಪ್ರವಾಹದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಇದ್ದ ಕೆರೆಗಳ ಮೇಲೆ ಕಟ್ಟಡಗಳು ಬಂದು ಕುಳಿತಿವೆ ನೀವೆಲ್ಲರೂ ನಮಗೆ ಪಾಠ ಮಾಡುತ್ತೀರಿ, ಮರ ಕಡಿಯಬಾರದು, ನೀರನ್ನು ಹಿತಮಿತವಾಗಿ ಬಳಸಬೇಕು,ದುರಾಸೆ ಪಡಬೇಡ, ಪರಿಸರ ರಕ್ಷಣೆ ಮಾಡಬೇಕು ಎಂದು. ಆದರೆ ಯೋಚಿಸಿ ದೊಡ್ಡವರೆ, ನೀವೇನು ಮಾಡುತ್ತಿದ್ದೀರಿ? ನೀವು ನಿಮ್ಮ ಮುಂದಿನ ತಲೆಮಾರಿಗೆ ಏನು ಉಳಿಸುತ್ತಿದ್ದಿರಿ? ಬೋಳು ಗುಡ್ಡಗಳನ್ನೆ? ಕರಗಿದ ಹಿಮಕವಚಗಳನ್ನೆ? ಬಿಸಿಯಾದ ವಾತಾವರಣವನ್ನೆ? ನಾವು ಮಾನವರ ದುರಾಸೆಯಿಂದ ಏನೆಲ್ಲಾ ಆಗ...