Skip to main content

Posts

Showing posts with the label Writing

ಕಾಡಿನ ಹಾಡು!

ಇವತ್ತು ದೀಪಾವಳಿ ರಜೆಗೆಂದು ಮನೆಗೆ ಬಂದಾಗ , ಮನೆಯಲ್ಲಿ ಎರಡು ಮೂರು ಸೌಂಡ್ ರೆಕಾರ್ಡರ್ ಗಳು ಬಂದು ಕುಳಿತಿದ್ದವು.  ಅವು ಏಕೆ ಬಂದಿದೆ ಎಂದು  ಕುತೂಹಲದಿಂದ ಕೇಳಿದಾಗ,ಈ ಉಪಕರಣಗಳನ್ನು ಜೀವ ವಿಜ್ಞಾನಿ Dr. ಕೆ. ವಿ ಗುರುರಾಜ ಅವರು ಕೊಟ್ಟಿದ್ದು, ಇವು ಕಾಡನ್ನು ಕೇಳುವ  ಹೊಸ ಅಧ್ಯಯನದ  ಪರಿಕರಗಳೆಂದು ಎಂದು ತಿಳಿಯಿತು. ಆದರೆ ಕಾಡು ಕೇಳುವುದೆಂದೆಂದರೆ? ಕಾಡನ್ನು ನೋಡಬಹುದೆ ಹೊರತು, ಕೇಳಲು ಸಾಧ್ಯವಿಲ್ಲ ಎಂದಲ್ಲವೇ?     ಕೇಳಬಹುದು. ನೀವು ಎರಡು ನಿಮಿಷ ಹೊರಗಿನ ಪರಿಸರಕ್ಕೆ ಕಿವಿಗೊಟ್ಟು  ಕೇಳಿ. ಅದು ಮರುಭೂಮಿಯಾಗಿದ್ದರು ಯಾವುದಾದರೂ ಸದ್ದು ಕೇಳಿಸುತ್ತದೆ. ಅದು ವಾಹನಗಳ ಸದ್ದೇ ಆಗಿರಬಹುದು. ಅಥವಾ ಹಕ್ಕಿಗಳ ಚಿಲಿಪಿಲಿಯೇ ಆಗಿರಬಹುದು. ಅಥವಾ ಎಲೆಗಳೆ ಆಗಿರಬಹುದು. ಇಂತಹ ಸದ್ದುಗಳನ್ನು soundscapes ಎನ್ನುತ್ತಾರೆ.                ಹೀಗೆ ಕಾಡಿನಲ್ಲಿ ಸಿಗುವ ಸದ್ದುಗಳನ್ನು ರೆಕಾರ್ಡ್  ಮಾಡಿ ಅದರ ಮೂಲಕ ಕಾಡನ್ನು ಮತ್ತೊಂದ ದೃಷ್ಟಿಕೋನದಿಂದ ನೋಡಬಹುದದಲ್ಲವೇ? ಇದಕ್ಕೇ ನಾನು ಕಾಡನ್ನು ಕೇಳಬಹುದು ಎಂದಿದ್ದು. ನಾನು ಮೊದಲೊಮ್ಮೆ camera traps ಗಳ ಮೂಲಕ ಕಾಡಿನ ಚಲನವಲನಗಳನ್ನು ಗಮನಿಸುವ ಬಗಗೆ  ಬರೆದಿದ್ದೆ. ಅದು ಕಾಡು ನೋಡುವ ಪರಿ. ಇದು ಕಾಡು ಕೇಳುವ ಪರಿ.  ಕಳೆದ ವಾರವಷ್ಟೆ ಈ  soundscapes  ಬಗ್ಗೆ ಓದಿ...

Designs of Nature!

  How do leaves have a specific pattern? Why does lighting appears in a specific shapes which looks like tree branches ? (at least it looked like that to me :P) Why do succulents looks like a geometry diagram? Well, it’s all science. These are called Fractals. Now, what exactly are fractals? According to Encyclopedia of Britannica, ” Fractal , in mathematics, any of a class of complex geometric shapes that commonly have fractional dimension”. In other words, Fractals are the repeated patterns.They can be found anywhere. From lightings to leaves, these are present. And as the encyclopedia said, it is a part of Maths – which is a great example for how maths can be applied in our day-to-day life. Of course, they can be found in every part of the science, from astronomy to computer science. But I’ll talk about fractals in nature today. Back in 1918, a mathematician called Felix Hausdorff introduced this concept. We can find these almost anywhere. Look at a tree. The branches have ...

ರೈನಾ ದೆ ಪಿಮೆಂಟಾ - ಕರಿಮೆಣಸಿನ ರಾಣಿಯ ಕಥೆ!

ನಾವೆಲ್ಲರೂ ಇತಿಹಾಸವನ್ನು ಶಾಲೆಯಲ್ಲಿ ಕಲಿಯುವಾಗ, ರಾಣಿ ಅಬ್ಬಕ್ಕದೇವಿ ಉಳ್ಳಾಳದ ರಾಣಿಯಾಗಿದ್ದಳು.. ಅವಳು ಪೋರ್ಚುಗೀಸರೊಡನೆ ಹೋರಾಡಿದಳು.. ಎಂದೆಲ್ಲಾ ಬಾಯಿಪಾಠ  ಮಾಡಿರುತ್ತೇವೆ. ಹಾಗೆ, ಲಕ್ಷ್ಮಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ರಾಣಿಯರ ಬಗ್ಗೆಯೂ ಕಲಿತಿರುತ್ತೇವೆ. ಈಜಿಪ್ಟ್ ನ ಕ್ಲಿಯೋಪಾತ್ರ, ನೆಫೇರಿಟ್ಟಿ , ಇಂಗ್ಲೆಂಡ್ ನ ರಾಣಿ ಎಲಿಜಬೆತ್ ಮುಂತಾದವರ ಬಗ್ಗೆಯೂ ಕೇಳಿರುತ್ತೇವೆ. ಆದರೆ ನಮ್ಮೂರಿನ ರಾಣಿಯರ ಬಗ್ಗೆ, ನಮ್ಮೂರಿನ ಇತಿಹಾಸದ ಬಗ್ಗೆ ನಮಗೆ ಎಷ್ಟು ಗೊತ್ತು?  ನನಗೆ ನಿಜ ಹೇಳಬೇಕೆಂದರೆ ಸೊದೆ ಅರಸರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದು ಬಿಟ್ಟರೆ, ಮತ್ತೇನು ಗೊತ್ತಿರಲಿಲ್ಲ. ಆದರೆ ಈಗೊಂದು 2 ವಾರದ ಹಿಂದೆ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಎಂಬ ಪುಸ್ತಕ ಓದಿದೆ. ಈ ವರ್ಷದ ನನ್ನ favorite  ಪುಸ್ತಕ ಎನ್ನಬಹುದೇನೋ.  ಚೆನ್ನ ಭೈರಾ ದೇವಿಯ ಬಗ್ಗೆ ಒಂದೆರಡು ಕಥೆಗಳನ್ನೂ, ಡಾ. ಕೆ. ಎನ್. ಗಣೇಶಯ್ಯನವರ 'ಬಳ್ಳಿ ಕಾಳ ಬೆಳ್ಳಿ' ಎಂಬ ಪುಸ್ತಕವನ್ನೂ ಓದಿದ್ದೆ. ಆದರೆ ಈ ರಾಣಿಯ ಪೂರ್ಣ ಇತಿಹಾಸವನ್ನು ತಿಳಿದಿರಲಿಲ್ಲ, ಎಲ್ಲವೂ ಒಂದು ರೀತಿಯ ಪಝಲ್ ತುಂಡುಗಳಂತೆ ಇತ್ತು. ಆದರೆ ಈ ಪುಸ್ತಕ ಉಳಿದ ಇತಿಹಾಸದ ಪುಸ್ತಕದಂತೆ ಇರದೆ, ಕಥೆಯಂತೆ ಇದ್ದು,  ತುಂಬಾ ಇಷ್ಟವಾಯಿತು.  ಯಾರಿವಳು ಚೆನ್ನಭೈರಾದೇವಿ? : ಇ ವಳು ಗೇರುಸೊಪ್ಪದ ರಾಣಿ! ಗೇರುಸೊಪ್ಪ ನಮ್ಮ ಜಿಲ್ಲೆಯ ಒಂದು ಸಣ್ಣ ಹಳ್ಳಿ (ಉತ್ತರ ಕನ್...

The story of my name!

  When I was born , my father was working for wildlife and forest conservation. So I was named Vanya, which means forest in sanskrit. Many times, people who came to our home, pronounced my name as Vaanya, which was supposed to be pronounce as Vanyaa. This always made me wonder, is there any other meaning for my name? But yesterday I accidently typed my name in google search and learnt more things about my name. Well, Vanya doesn’t only means forest… it has lot other meanings in other languages! So here in India, there are a tonnes of girl’s names that ends with  ‘nya’  or ‘ ya’ . For example :  Dhanya, Manya, Kanya, Aanya, Aranya, Ananya, Kavya, Navya. . etc. Also, almost 80% of my friends’ name ends with ‘nya’ or ‘ya’ ! So whenever someone asks my name, many of them confuses it to some other name like  Dhanya , and I have to explain my name with syllables. This time, I searched over 50 websites about names and their meanings and finally found some meanings whic...

Rowdy Birds!

  It was back in my 4th grade. I was walking back from school. Suddenly a flock of different birds passed over my head shouting loudly. There were 2-3 woodpeckers, bee-eaters, and 4 other types of birds. I wondered, how birds of different species can become a flock… They weren’t fighting at all. Instead, they were flying and resting on trees for some seconds and flying again. After I reached home, I asked my father about it. He said it was called mixed hunting. A (rowdy) bird called Drongo chased all these birds and created a group of various birds and hunted with them! For the 9-year-old me, Drongo was a dominating bird who is rude to other birds… But now, these drongos are my favorite. Especially racket-tailed drongo – which has long tail streamers and ivory black feathers. After learning about group hunting, I read several books and articles about drongos which made me see them as villains of the bird society. These birds are extremely clever. They can mimic other birds’ calls a...

A tree of History!

  You might be wondering why this banyan tree is talking. Well, because it is time to talk. I’ve been in this world for almost 200 years. I was born in the Asiatic cholera pandemic time. And now I am dying in the time of covid pandemic time. Between these two pandemics, I’ve seen amazing changes. I’ve been the witness to many historical incidents. I’ve seen your growth, your developments, disruptions, your success, and your failures… Ah, it feels like, yesterday, you humans invented your first airplanes. But now, thousands of planes fly over my head every day. When I was born, this place was a complete forest. I had so many friends to talk with. Now, I’m alone. Around me, there are shops, malls, and huge buildings. It was just yesterday, you were arguing whether plants are lives or not. But now, you are developing devices to talk with plants! It feels like yesterday, you people were talking about first space travel. Now, I’m hearing things about living on Mars. You developed very f...

ಕಾಡಿನಲ್ಲಿಯ ದೀಪಾವಳಿ!

 ಅದು ಆಗಸ್ಟ್ ತಿಂಗಳಿನ ಸಮಯ. ಅಪ್ಪ ಮತ್ತು ನಾನು ರಾತ್ರಿ ಎಲ್ಲಿಗೋ ಹೋಗಿದ್ದವರು ಮನೆಗೆ ಹಿಂದಿರುಗುತ್ತಿದೆವು. ಕಾಡಿನ ಆ ರಸ್ತೆಯಲ್ಲಿ ಅಪ್ಪ  ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿ ಎಲ್ಲ ಲೈಟ್ ಗಳನ್ನು ಆಫ್ ಮಾಡಿ, ಒಂದು ಮರದ ಬುಡ  ನೋಡುತ್ತಿರಲು ಹೇಳಿದರು. ನನಗೆ ಮೊದಲು ಆ ಮರವನ್ನು ನೋಡಿದಾಗ ಏನೂ ಗೊತ್ತಾಗಲಿಲ್ಲ. ಕೆಲವು ನಿಮಿಷಗಳ ನಂತರ ಅದು  ಹಸಿರು ಬಣ್ಣದಲ್ಲಿ ಹೊಳೆಯಲಾರಂಭಿಸಿತು.ಫೋಟೋ ತೆಗೆಯಲು ಹೋದರೆ ಫ್ಲಾಶ್ ಲೈಟ್  ನ ಬೆಳಕಿಗೆ ಏನೂ ಕಾಣಲೆ ಇಲ್ಲ. ನಂತರ ತಿಳಿದದ್ದೇನೆಂದರೆ ಅದು ಹೊಳೆಯುವ fungus. ಇದು ಮಳೆಗಾಲದಲ್ಲಿ ನಮ್ಮ ಕಾಡುಗಳಲ್ಲಿ ಬೆಳೆಯುತ್ತದೆ ಎಂದು.  ಎಷ್ಟು ಆಶ್ಚರ್ಯವಲ್ಲವೇ? ನಾವೆಲ್ಲರೂ bioluminescence ಜೀವಿಗಳ ಬಗ್ಗೆ ಪುಸ್ತಕಗಳಲ್ಲಿಯೋ, ಅಥವಾ ಟಿವಿಯಲ್ಲೊ ನೋಡಿರುತ್ತೇವೆ. bioluminescence ಎಂದರೆ ಜೀವಿಗಳು ನೈಸರ್ಗಿಕವಾಗಿ  ತಮ್ಮಲ್ಲಿ ಬೆಳಕನ್ನು ಹೊಮ್ಮಿಸಿಕೊಳ್ಳುವುದು ಎನ್ನಬಹುದು. ಇವು ಸಾಮಾನ್ಯವಾಗಿ ರಾಸಾಯನಿಕ ಕ್ರೀಯೆಯ ಕಾರಣದಿಂದಲೇ ಆಗುತ್ತವೆ. ನಾವೆಲ್ಲರೂ ಮಿಂಚುಹುಳ (firefly )ಗಳನ್ನು ನೋಡಿರುತ್ತೇವೆ. ಕೆಲವು ಜೆಲ್ಲಿ ಫಿಶ್ಗಳು, ಸಮುದ್ರ ಜೀವಿಗಳು ಸಹ ಇದನ್ನು ಬಳಸುತ್ತವೆ. ಅವು ತಮ್ಮ  ಸಂಗಾತಿಯ ಹುಡುಕಾಟಕಾಗಿಯೇನೋ ಈ ಗುಣವನ್ನು ಬೆಳೆಸಿಕೊಂಡಿವೆ. ಆದರೆ ಈ fungi ಗಳು? ಇವಕ್ಕೆ ಅಂತಹ ಯಾವುದೇ ಕೆಲಸವಿಲ್ಲ. ವಿಕಾಸವಾದದ ಪ್ರಕಾರ  ಇವು ಈ ರೀತಿ...

Bee Buzziness!

  25th May, 2050 ”Why Areca nuts in our farms aren’t growing ?” I asked. ”I don’t know..” My big brother, Mahesh sighed. I am Mira , a 9 year old girl from the farming background. But now, me and my 3 friends were wondering why there no enough crops in their farms. From last year. the whole area didn’t had enough crops to feed on. What happened? ”Let’s find out! Let’s go and ask someone” Ramu suggested. He seemed pretty excited. ”What are you going ask anyway?” Chaitra asked, crossing her arms. ”Let us see what they say” Mahesh said. Chaitra nodded. We all went to find the best person to answer – our grandmother. After searching for a while, we finally found her! You know where she is? Near the Mango tree! But this year, we don’t have any mangoes. There are three other people with her. They looked like they were some officers. What she’s doing there anyway? ”Grandma?” Chaitra called. Grandma turned at us. The officer-looking people turned too. What they are doing here? ”What are yo...

ಎಲ್ಲಿಂದಲೋ ಬಂದವರು !

  ಯಾವುದೋ ದೂರದೇಶದಿಂದ ಬಂದು ನಮ್ಮವರಲ್ಲಿ ಒಂದಾಗಿ ನಮ್ಮವರಂತೆ ಇದ್ದು ಮರಳಿದವರು ಹಲವರಿದ್ದಾರೆ. ನಮ್ಮ ಮನೆಗೆ  ಹೀಗೆ ಬರುವ ಹಲವಾರು ವಿಧ್ಯಾರ್ಥಿಗಳು, ಪ್ರವಾಸಿಗರು, ಸಂಶೋಧಕರು ಮುಂತಾದವರಲ್ಲಿ ಹಲವರು ನಮ್ಮವರಲ್ಲಿಯೇ ಒಂದಾಗಿದದು ನಮ್ಮವರೇ ಎನಿಸುವಷ್ಟು ಆಪ್ತರಾಗಿರುವವರೂ ಇದ್ದಾರೆ. ಅಂತವರಲ್ಲಿ ಕೆಲವರ ಬಗ್ಗೆ  ಇಲ್ಲಿ ಸ್ವಲ್ಪ ಮಾಹಿತಿ ಇದೆಯಷ್ಟೆ.  Photo by Sayan Nath on Unsplash Lisa Andresen :  ಈಕೆ ನಮ್ಮ ಮನೆಗೆ ಬಂದಿದ್ದು ತನ್ನ m.sc  thesisನ ಕೆಲಸಕ್ಕಾಗಿ ಭಾರತಕ್ಕೆ ತನ್ನ ಸಬಾಟಿಕಲ್ ಗಾಗಿ ಮೊದಲೂ  ಬಂದಿದ್ದ ಇವಳು ಕುಂದಾಪುರದಲ್ಲಿ ಇದ್ದಿದ್ದಳು.  ಬಂದಿದ್ದು 2018 ರ ಅಂತ್ಯದಲ್ಲಿ  ಅಂದರೆ ಡಿಸೆಂಬರ್ ಸಮಯದಲ್ಲಿ. ಇಂದಿಗೂ ನಮ್ಮ ಕುಟುಂಬದ ಜೊತೆ ಹೆಚ್ಚು ಸಂಪರ್ಕದಲ್ಲಿರುವವರಲ್ಲಿ ಲೀಸಾ ಕೂಡಾ ಒಬ್ಬಳು. ಇವಳು ಬಂದ ಸಮಯದಲ್ಲಿ ಊರಲ್ಲಿ ಯಕ್ಷಗಾನ , ತಾಳಮದ್ದಳೆಯ ಸಮಯ. ಶಾಲೆಯಲ್ಲಿ ಕ್ರಿಸ್ಮಸ್ ದಿನವೇ ಗ್ರಾಮೋತ್ಸವ ಹಾಗೂ  ಕಲಿಕೋತ್ಸವವೂ ಇತ್ತು. ಅಂದು  ಎಲ್ಲರ ಜೊತೆಗೂ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದಳು. ಮೋಜೀನ ಆಟದ ಸ್ಪರ್ಧೆಯೊಂದರಲ್ಲಿ  ಊರಿನವರ ಪರವವಾಗಿ ಆಟವಾಡಿ ಒಂದು ಬಹುಮಾನವನ್ನೂ ಗೆದ್ದುಕೊಂಡಿದ್ದಳು. ಈಗಲೂ ಕ್ರಿಸ್ಮಸ್ ದಿನದಂಡು ನಮಗೆ  ಒಂದು ಪತ್ರದೊಂದಿಗೆ ಏನಾದರೂ chocolate ಅಥವಾ ಮತ್ತೇನಾದರೂ ಉಡುಗೊರೆಯನ್ನ...