Skip to main content

Posts

Showing posts with the label History

ರೈನಾ ದೆ ಪಿಮೆಂಟಾ - ಕರಿಮೆಣಸಿನ ರಾಣಿಯ ಕಥೆ!

ನಾವೆಲ್ಲರೂ ಇತಿಹಾಸವನ್ನು ಶಾಲೆಯಲ್ಲಿ ಕಲಿಯುವಾಗ, ರಾಣಿ ಅಬ್ಬಕ್ಕದೇವಿ ಉಳ್ಳಾಳದ ರಾಣಿಯಾಗಿದ್ದಳು.. ಅವಳು ಪೋರ್ಚುಗೀಸರೊಡನೆ ಹೋರಾಡಿದಳು.. ಎಂದೆಲ್ಲಾ ಬಾಯಿಪಾಠ  ಮಾಡಿರುತ್ತೇವೆ. ಹಾಗೆ, ಲಕ್ಷ್ಮಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ರಾಣಿಯರ ಬಗ್ಗೆಯೂ ಕಲಿತಿರುತ್ತೇವೆ. ಈಜಿಪ್ಟ್ ನ ಕ್ಲಿಯೋಪಾತ್ರ, ನೆಫೇರಿಟ್ಟಿ , ಇಂಗ್ಲೆಂಡ್ ನ ರಾಣಿ ಎಲಿಜಬೆತ್ ಮುಂತಾದವರ ಬಗ್ಗೆಯೂ ಕೇಳಿರುತ್ತೇವೆ. ಆದರೆ ನಮ್ಮೂರಿನ ರಾಣಿಯರ ಬಗ್ಗೆ, ನಮ್ಮೂರಿನ ಇತಿಹಾಸದ ಬಗ್ಗೆ ನಮಗೆ ಎಷ್ಟು ಗೊತ್ತು?  ನನಗೆ ನಿಜ ಹೇಳಬೇಕೆಂದರೆ ಸೊದೆ ಅರಸರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದು ಬಿಟ್ಟರೆ, ಮತ್ತೇನು ಗೊತ್ತಿರಲಿಲ್ಲ. ಆದರೆ ಈಗೊಂದು 2 ವಾರದ ಹಿಂದೆ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಎಂಬ ಪುಸ್ತಕ ಓದಿದೆ. ಈ ವರ್ಷದ ನನ್ನ favorite  ಪುಸ್ತಕ ಎನ್ನಬಹುದೇನೋ.  ಚೆನ್ನ ಭೈರಾ ದೇವಿಯ ಬಗ್ಗೆ ಒಂದೆರಡು ಕಥೆಗಳನ್ನೂ, ಡಾ. ಕೆ. ಎನ್. ಗಣೇಶಯ್ಯನವರ 'ಬಳ್ಳಿ ಕಾಳ ಬೆಳ್ಳಿ' ಎಂಬ ಪುಸ್ತಕವನ್ನೂ ಓದಿದ್ದೆ. ಆದರೆ ಈ ರಾಣಿಯ ಪೂರ್ಣ ಇತಿಹಾಸವನ್ನು ತಿಳಿದಿರಲಿಲ್ಲ, ಎಲ್ಲವೂ ಒಂದು ರೀತಿಯ ಪಝಲ್ ತುಂಡುಗಳಂತೆ ಇತ್ತು. ಆದರೆ ಈ ಪುಸ್ತಕ ಉಳಿದ ಇತಿಹಾಸದ ಪುಸ್ತಕದಂತೆ ಇರದೆ, ಕಥೆಯಂತೆ ಇದ್ದು,  ತುಂಬಾ ಇಷ್ಟವಾಯಿತು.  ಯಾರಿವಳು ಚೆನ್ನಭೈರಾದೇವಿ? : ಇ ವಳು ಗೇರುಸೊಪ್ಪದ ರಾಣಿ! ಗೇರುಸೊಪ್ಪ ನಮ್ಮ ಜಿಲ್ಲೆಯ ಒಂದು ಸಣ್ಣ ಹಳ್ಳಿ (ಉತ್ತರ ಕನ್...

The story of my name!

  When I was born , my father was working for wildlife and forest conservation. So I was named Vanya, which means forest in sanskrit. Many times, people who came to our home, pronounced my name as Vaanya, which was supposed to be pronounce as Vanyaa. This always made me wonder, is there any other meaning for my name? But yesterday I accidently typed my name in google search and learnt more things about my name. Well, Vanya doesn’t only means forest… it has lot other meanings in other languages! So here in India, there are a tonnes of girl’s names that ends with  ‘nya’  or ‘ ya’ . For example :  Dhanya, Manya, Kanya, Aanya, Aranya, Ananya, Kavya, Navya. . etc. Also, almost 80% of my friends’ name ends with ‘nya’ or ‘ya’ ! So whenever someone asks my name, many of them confuses it to some other name like  Dhanya , and I have to explain my name with syllables. This time, I searched over 50 websites about names and their meanings and finally found some meanings whic...

Distinct Rivers

  Some call me Ganga, some call me Narmada. Some named me Nile and some says Congo. I go by many names, but I am same everywhere…With different forms and different names, I’m the water you drink… I’m Aghanashini for some, and Amazon for some. I’m  nehir  in Turkey, and  nadi  in India.I’m part of many lives and heritages- and I’m universal… I don’t only nurture humans, but also lacks of other creatures… There are colourful birds, jumping frogs, and quirky fishes… and tonnes of other. I’ve got a huge family called earth. And in that huge family, humans are members too… members-not rulers. Photo by  Sergio Capuzzimati  on  Unsplash Today, I am all polluted. You seems to thing I belong to you only… but no. There are many other creatures living in me, not only you. You dump your wastes in water, it may be an easy deal for you. But not for animals live with me. Your plastics are eaten by the fishes here. Your pollution is making the coral reefs in sea ...

A tree of History!

  You might be wondering why this banyan tree is talking. Well, because it is time to talk. I’ve been in this world for almost 200 years. I was born in the Asiatic cholera pandemic time. And now I am dying in the time of covid pandemic time. Between these two pandemics, I’ve seen amazing changes. I’ve been the witness to many historical incidents. I’ve seen your growth, your developments, disruptions, your success, and your failures… Ah, it feels like, yesterday, you humans invented your first airplanes. But now, thousands of planes fly over my head every day. When I was born, this place was a complete forest. I had so many friends to talk with. Now, I’m alone. Around me, there are shops, malls, and huge buildings. It was just yesterday, you were arguing whether plants are lives or not. But now, you are developing devices to talk with plants! It feels like yesterday, you people were talking about first space travel. Now, I’m hearing things about living on Mars. You developed very f...

ಕೋಟೆ ನೋಡಲು ಹೋದೆ!

ಮೊನ್ನೆ  ಮಾರ್ಚ್ 7 ನೇ ತಾರೀಕು ನಾವು ನಮ್ಮದೇ ಊರಿನ ಐತಿಹಾಸಿಕ ತಾಣ, ಸೊಂದಾ ಕೋಟೆಗೆ ಹೋಗಿದ್ದೆವು. ಮೊದಲು ಸೋದೆ ಎಂದು ಹೆಸರಾಗಿದ್ದ ಈ ಊರಿನ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ. ಮೊದಲಿನಿಂದಲೂ ಸೊಂದಾ ಕೋಟೆಗೆ ಹೋಗಬೇಕು ಎಂದುಕೊಂಡಿದ್ದ ನಾನು ಈ ಬಾರಿ ನನ್ನ ಗೆಳೆಯರೂ  ಬರುತ್ತಾರೆ ಎಂದಾಗ ಖುಷಿಯಿಂದ ಹೊರಟು  ನಿಂತೆ. ಸಿರಸಿಯಿಂದ ಸುಮಾರು 15-16  ಕಿಲೋಮೀಟರ್ ದೂರವಿರುವ ಸೊಂದಾದಲ್ಲಿ ಬರೀ ಕೋಟೆಯಷ್ಟೆ ಅಲ್ಲದೆ  ಅದೇ ಅರಸರೆ ಕಟ್ಟಿಸಿದ ಸ್ವರ್ಣವಳ್ಳಿ ಮಠ , ವಾದಿರಾಜ ಮಠ ಮತ್ತು ಜೈನ ಮಠಗಳೂ ಇವೆ. ಅಲ್ಲೆಲ್ಲ ನಾನು ಹಲವು ಬಾರಿ ಹೋಗಿ ಬಂದಿದ್ದರಿಂದ ಈ ಬಾರಿ ಬರೀ ಕೋಟೆಗೆ ಮಾತ್ರ ಭೇಟಿ ಕೊಟ್ಟೆ.      1555 ರಲ್ಲಿ ಅರಸಪ್ಪ ನಾಯಕ ಎಂಬ ಅರಸ ಈ ರಾಜ್ಯವನ್ನು ಸ್ಥಾಪಿಸಿದನಂತೆ. ವಿಚಿತ್ರ ನೋಡಿ, ಅರಸನ ಹೆಸರೇ ಅರಸಪ್ಪ ನಾಯಕ!  ಈ ಸೋದೇ ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಆಗ ವಿಜಯನಗರದಲ್ಲಿದ್ದದ್ದು ಸದಾಶಿವರಾಯ ಎಂಬ ರಾಜ. ಈ ಅರಸಪ್ಪ ನಾಯಕ ಒಬ್ಬ ಜೈನ ರಾಜನಾಗಿದ್ದನಂತೆ.1565 ರಲ್ಲಿ ವಿಜಯನಗರದ ಪತನವಾದ ನನತರ ಈ ಸಾಮ್ರಾಜ್ಯ ಬಹಮನಿ ಸುಲ್ತಾನರ ಸಾಮಂತ ರಾಜ್ಯವಾಯಿತು. ಅರಸಪ್ಪನ ನಾಯಕನ ಮರಣದ ನಂತರ  1674 ರಲ್ಲಿ ಶಿವಾಜಿ ಈ ಸಾಮ್ರಾಜ್ಯವನ್ನು ವಶ ಪಡಿಸಿಕೊಂಡ ಎಂದೂ ಕೊನೆಗೆ ಪೋರ್ತುಗೀಸರ ಕಾಲದಲ್ಲಿ ಈ ರಾಜವಂಶ ಕಾರವಾರಕ್ಕೆ ಹೋಗಿ ಅಲ್ಲಿ ಸದಾಶಿವಘಡ ಎಂಬ ಕೋಟೆ ಸ್ಥಾಪಿಸಿತ...

ವಿಜ್ಞಾನಿಯ ಕಣ್ಣಿನಲ್ಲಿ ಇತಿಹಾಸದ ಪಾಠಗಳು!

2 020ರಲ್ಲಿ ಲಾಕ್ಡೌನ್ ಶುರುವಾದಾಗಿನಿಂದ  ಹತ್ತು ತಿಂಗಳು ನಾನು ಮಾಡಿದ್ದು ಪುಸ್ತಕ ಓದಿದ್ದು ಅಷ್ಟೇ . ಆಗ ತಾನೇ ಮನೆಯಲ್ಲಿ ಸುಮಾರು 30-40 ಪುಸ್ತಕಗಳು ಬಂದು ಕುಳಿತಿದ್ದವು. ಡಾ. ಕೆ. ಎನ್. ಗಣೇಶಯ್ಯ ಅವರ ಪುಸ್ತಕಗಳು, ತೇಜೋ ತುಂಗಭದ್ರಾ, ಪುನರ್ವಸು,ಮಧ್ಯಗಟ್ಟ ಎಲ್ಲವೂ ಪುಸ್ತಕದ ಷೆಲ್ಫ್ ಏರಿ ಕುಳಿತಿದ್ದವು. ಒಂದಿಷ್ಟು ಪುಸ್ತಕಗಳು ಮೊದಲೇ ಅಮ್ಮ ಮತ್ತು ಅಪ್ಪನಿಂದ ಬುಕ್ ಆಗಿಬಿಟ್ಟಿತ್ತು.ಮೊದಲು ಬರೀ ಮಕ್ಕಳ ಕಥೆಗಳನ್ನು ಮತ್ತು fantasyಗಳನ್ನೇ ಓದುತ್ತಾ ಐದಾರು ತಿಂಗಳು ಕಳೆದಿದ್ದ ನಾನು ಹೀಗೆ ಒಂದು ದಿನ  ಅಪ್ಪ ಗಣೇಶಯ್ಯನವರ ಕರಿಸಿರಿಯಾನದ ಬಗ್ಗೆ ಹೇಳುತಿದ್ದದ್ದನ್ನು ಕೇಳಿ ಕುತೂಹಲದಿಂದ ಮಧ್ಯದಲ್ಲಿನ ಯಾವುದೋ ಹಾಳೆ ತೆಗೆದು ಓದಿದೆ. ವಿಜಯನಗರದ ಹೆಸರನ್ನು ನೋಡಿ ಕುತೂಹಲ ಬಂತು. ಮೊದಲ ಪುಟದಿಂದ ಓದುತ್ತಾ ಹೋದೆ. ಅದೇ ತಿಂಗಳಲ್ಲಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ್ದೆ! ಕರಿಸಿರಿಯಾನ    ಎಂಬ ಹೆಸರನ್ನು ಕೇಳಿ ಒಮ್ಮೆ ಗೊಂದಲವಾದರೂ ಕೊನೆಗೆ ಓದಿ ಮುಗಿಸಿದಾಗ ಹೆಸರಿನ ಒಳಾರ್ಥ ತಿಳಿಯಿತು. ಕರಿ ಎಂದರೆ ಆನೆ, ಸಿರಿ ಎಂದರೆ ಏನು ಎಂದು ವಿವರಿಸುವುದೇನೂ ಬೇಕಿಲ್ಲ, ಐಶ್ವರ್ಯ ಎಂದು ಅರ್ಥ. ಇನ್ನು  ಯಾನ ಎಂದರೆ ಪಯಣ. ಆನೆಯ ಮೇಲೆ ಐಶ್ವರ್ಯದ ಪಯಣ. ಇವರ ಎಲ್ಲಾ ಪುಸ್ತಕಗಳ ಹೆಸರುಗಳೂ ಹೀಗೆ ಪ್ರಾರಂಭವಾಗುವುದು ವಿಶೇಷ(ಉದಾಹರಣೆಗೆ: ಕನಕ ಮುಸುಕು, ಕಪಿಲಿಪಿಸಾರ ಇತ್ಯಾದಿ).ಜೊತೆಗೆ ಥ್ರಿಲ್ಲರ್ ರೀತಿಯಲ್ಲಿಯೇ...

ಮಕ್ಕಳ ಕಣ್ಣಿನಿಂದ ಹೊಲೊಕಾಸ್ಟ್ !

I dont think of All the misery, but of the beauty that still remains.      ~Anne Frank. Anne Frank  ಹೆಸರು ಕೇಳದವರು ಇದ್ದಾರೆಯೇ? 14 ವರ್ಷದ ಯಹೂದೀ  ಹುಡುಗಿ ತನ್ನ ಡೈರಿಯಿಂದ ಇಂದು ವಿಶ್ವ ಪ್ರಸಿದ್ದಳು. ಅವಳೇ ತನ್ನ diary ಅಲ್ಲಿ   ಬರೆದಿರುವಂತೆ " ನಾನು ತೀರಿದ ನಂತರವೂ ಜನರ ಮನದಲ್ಲಿ ಬದುಕಿರುವಂತಹದದನ್ನು ಮಾಡಬೇಕು"  Anne ಬರೆದ ಮಾತುಗಳು  ಅವಳ ವಿಷಯದಲ್ಲಿ ಅಂತೂ ನಿಜವಾಗಿದೆ. ಪ್ರಪಂಚದಾದ್ಯಂತ ಜನರೆಲ್ಲರ ಮನದಲ್ಲಿ Anne ಇಂದಿಗೂ ಜೀವಂತವಾಗಿದ್ದಾಳೆ, ಅವಳ ಡೈರಿಯ  ಹಾಗೆ.  ಸುಮಾರು ನನ್ನದೇ ವಯಸ್ಸಿನವಳಾಗಿದ್ದ (14) ಇವಳು  ಮನಕ್ಕೆ ನಾಟುವಂತೆ ಅದ್ಬುತವಾಗಿ ಬರೆದಿದ್ದಾಳೆ. ತನ್ನ ಹದಿಮೂರನೇ  ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಿಕ್ಕ diary ಅಲ್ಲಿ ದಿನನಿತ್ಯದ ಘಟನೆಗಳನ್ನೇ ಬರೆಯುತ್ತಾ ಹೋಗುವ ಇವಳ ಡೈರಿ ಮೊದಮೊದಲು ಸ್ವಲ್ಪ ಬೋರು ಹೊಡೆಸಿದರೂ ಎರಡನೇ ಭಾಗದಲ್ಲಿ ರಾಜಕೀಯ ವಿಷಯಗಳು, ತನ್ನ ಅಡಗುತಾಣವಾಗಿದ್ದ The  Secret Annex ನಲ್ಲಿ ಇರುವಾಗಿನ ಒಂಟಿತನ, ಅಕ್ಕ Margot ನ ರೀತಿ ತಾನೂ ಬುದ್ಧಿವಂತ ಳಾಗಿದ್ದರೆ ಎಂಬ ಯೋಚನೆ, ಕಾಮಿಕ್ ಒಂದರ ಪಾತ್ರ kitty  ಗೆ ಪ್ರತಿದಿನ ಬರೆಯುತ್ತಿದ್ದ ಪತ್ರ, ಯಹೂದಿಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಎಲ್ಲವನೂ ತನ್ನ ವಿಶಿಷ್ಟ ಬರವಣಿಗೆ ಶೈಲಿಯಲ್ಲಿ ಸುಂದರವಾಗಿ ಬರೆಯುತ...

ಗಾರಲಪಟ್ಟಿಯ ರಾಮಕೃಷ್ಣನೂ ..... ಕೃಷ್ಣದೇವರಾಯನೂ....

ಗಾರಲಪಟ್ಟಿಯ ರಾಮಕೃಷ್ಣನೂ...                        ಕೃಷ್ಣ ದೇವರಾಯನೂ.... ಈ ಗಾರಲಪಟ್ಟಿ ರಾಮ ಯಾರೆಂದು ಯೋಚಿಸುತ್ತಿದ್ದಿರಿ ಅಲ್ಲವೇ? ಆತ ಬೇರಾರೂ ಅಲ್ಲ,  ನಮ್ಮ ತೆನಾಲಿ ರಾಮಕೃಷ್ಣ. ನಾವು ನೀವು ಎಲ್ಲರೂ ಶಾಲೆಗೆ ಹೋಗುವ ಮೊದಲಿನಿಂದಲೂ ತೆನಾಲಿ ರಾಮನ ಕಥೆಗಳನ್ನು ಕೇಳಿಯೋ ಓದಿಯೋ ಬೆಳೆದವರೇ. ಬದನೇಕಾಯಿಯ ಕಳ್ಳತನದಿಂದ ಹಿಡಿದು ಬಾವಿಯೇ ಕಳ್ಳತನವಾದ ಸಮಸ್ಯೆಗಳನ್ನೂ ಪರಿಹರಿಸುವ ಮಕ್ಕಳ ಪಾಲಿನ ಸುಪರ್ ಹೀರೋ ಈತ.  ಕೃಷ್ಣದವರಾಯನ ಸಮಸ್ಯೆಗಳನ್ನು ತನ್ನ ಜಾಣತನದಿಂದ ಬಗೆಹರಿಸುವ ಈ ರಾಮನ ಪರಿ ಎಲ್ಲರಿಗೂ ಇಷ್ಟ . ತನ್ನ ವಿಶಿಷ್ಟ ಅವಲೋಕನ ಶಕ್ತಿಯಿಂದ ಈ ವಿಕಟಕವಿ ನಮ್ಮ ಜನಮಾನಸದಲ್ಲಿ ಇಂದು  ಮಾಸದೆ ಬದುಕಿದ್ದಾನೆ..                              ತೆನಾಲಿ ರಾಮನ ನೈಜ ಹೆಸರು ಗಾರಲಪಟ್ಟಿ ರಾಮಕೃಷ್ಣಯ್ಯ. ನಮ್ಮ ತೆನಾಲಿ ಅಲ್ಲಲ್ಲ..ಗಾರಲಪಟ್ಟಿ ರಾಮಕೃಷ್ಣಯ್ಯ ಹುಟ್ಟಿದ್ದು ಆಂಧ್ರದ ತುಮುಳೂರಿನಲ್ಲಿ. ತಂದೆ ಗಾರಲಪಟ್ಟಿ ರಾಮಯ್ಯ . ತಾಯಿ ಲಕ್ಷ್ಮಮ್ಮ. ರಾಮಯ್ಯನವರು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಯದಲ್ಲಿ ಅರ್ಚಕರಾಗಿದ್ದರು. ಆದರೆ ದುರದೃಷ್ಟವಶಾತ್ ಅವರು ರಾಮನ ಬಾಲ್ಯದಲ್ಲೇ ತೀರಿಕೊಂಡರು.  ನಂತರ ರಾಮನ ಸೋದರ ಮಾವನ ಮನೆಯಾ...