Skip to main content

ಹುಲಿಮರಿ : ಸಣ್ಣ ಕಥೆ

Photo by Sacha Styles on Unsplash

 

‘’ಭಾರತದಲ್ಲಿ ಕಂಡುಬರುವ  15 ಬೆಕ್ಕಿನ ಜಾತಿಯ ಸಸ್ತನಿಗಳು ಕಂಡುಬರುತ್ತವೇ. ನಮ್ಮ ಊರಿನ ಬಳಿ ಕಾಣುವ ಚಿರತೆ,ಹುಲಿ  ಕೂಡಾ ಇದೆ ಗುಂಪಿಗೆ ಸೇರುವಂತದ್ದು…ನೇಹಾ? ನೇಹಾ?’’  ಸಸ್ತನಿಗಳ ಬಗ್ಗೆ ಪಾಠ  ಮಾಡುತ್ತಿದ್ದ ಟೀಚರ್  ನೇಹಾ ಏನನ್ನೋ ಯೋಚಿಸುತ್ತಿದ್ದದನ್ನು  ಕೂಗಿದರು. ಹಗಲುಗನಸು ಕಾಣುತ್ತಿದ್ದ ನೇಹಾ ಗಾಬರಿಯಿಂದ ತಿರುಗಿ ನೋಡಿದಳು.

‘’ನೇಹಾ.. ಏನು ಯೋಚಿಸ್ತಾ ಇದ್ದೀಯಾ?’’ ಟೀಚರ್ ಕೋಪದಿಂದ ಕೇಳಿದರು.

‘’ ಎ-ಏನೂ ಇಲ್ಲಾ’’ ನೇಹಾ ಸ್ವಲ್ಪ ಹೆದರುತ್ತಲೆ ಉತ್ತರಿಸಿದಳು. 

‘’ಸರಿ ಹಾಗಾದ್ರೆ, ಈಗ ಉತ್ತರ ಹೇಳು... ಭಾರತದಲ್ಲಿ ಎಷ್ಟು ಬೆಕ್ಕಿನ ಜಾತಿಯ ಪ್ರಾಣಿಗಳಿವೆ?’’ ಅವರು ಸ್ವಲ್ಪ ಕಠೋರವಾಗಿಯೇ ಕೇಳಿದರು. 

‘’ಹದಿನೈದು, ಟೀಚರ್’’ ನೇಹಾ ಉತ್ತರಿಸಿದಳು. 

‘’ಸರಿ. ಇನ್ನೂ ಪಾಠದ ಮೇಲೆ ಗಮನ ಕೊಡು’’ ಎಂದು ಟೀಚರ್ ಉತ್ತರಿಸಿ ಮುಂದೆ ಓದಲು ಶುರು ಮಾಡಿದರು. ಪಾಠ ಸಾಗಿತು... 

*****

‘’ನೇಹಾ...ನೀನು ಇವತ್ತು ರಂಜಲು ಹಣ್ಣು ಹೆಕ್ಕಲೆ ಕಾಡಿಗೆ ಬತ್ಯಾ?’’ ಗೆಳತಿ ಇಶಾ ಕೇಳಿದಳು. 

‘’ಬರದೇ ಎಂತಾ ಆಜೇ? ಬರ್ತಿ  ಬಿಡು’’ ನೇಹಾ ಉತ್ತರಿಸಿ ಮತ್ತೆ ತನ್ನ ಪುಸ್ತಕದ ಪ್ರಪಂಚಕ್ಕೆ ಹಿಂದಿರುಗಿದಳು. 

ನೇಹಾ 12 ವರ್ಷದ ಹುಡುಗಿ.ಮಲೆನಾಡಿನ ಚಿಕ್ಕ ಹಳ್ಳಿಯೊಂದರಲ್ಲಿದ್ದ ನೇಹಾ 7 ನೇ ತರಗತಿಯಲ್ಲಿ ಓದುತ್ತಿದ್ದಳು. 

ಮಧ್ಯಾಹ್ನದ ನಂತರ ಸುಮಾರು 4 ಗಂಟೆಗೆ ಇಶಾ ಉಳಿದ ಗೆಳೆಯರೊಡನೆ ಬಂದಳು. 

‘’ನೇಹಾ...   ಹಣ್ಣು ಹೆಕ್ಕಲೆ  ಬತ್ತಿಲ್ಯನೇ ?’’ ಹೊರಗಿನಿಂದ ಇಶಾ ಕೂಗಿದಳು.

‘’ಬರ್ತಿ. ಒಂದು ನಿಮಿಷ’’ ನೇಹಾ ತಿರುಗಿ ಕೂಗಿ ಹಣ್ಣು ತುಂಬಲು ಒಂದು ಪುಟ್ಟ ಚೀಲ ತೆಗೆದುಕೊಂಡು ಹೊರಟಳು.

‘’ಯಾರ್ಯಾರು ಬಂಜ ?’’ ನೇಹಾ ಮನೆಯಿಂದ ಹೊರಬಿದ್ದ ತಕ್ಷಣ ಕೇಳಿದಳು. 

‘’ನಾನು, ನನ್ನ ತಮ್ಮ ಆರ್ಣವ , ನೀನು. ಇಷ್ಟೇ ಜನ ‘’ ಇಶಾ ಪಟಪಟನೆ ಹೇಳಿದಳು. 

‘’ಸರಿ.ಆದ್ರುವ ಆ ಕಾಡಲ್ಲಿ ಹುಲಿ ,ಚಿರತೆ ಓಡಾಡತು ಹೇಳ್ತಾ. ನಿಮ್ಮಲ್ಲಿ ಹೆಂಗೆ ಅಲ್ಲಿ ಹೋಪಲೆ ಬಿಟ್ವ ಆರ್ಣವ ?’’ ನೇಹಾ ಸ್ವಲ್ಪ ಅನುಮಾನದಿಂದಲೇ ಕೇಳಿದಳು. 

‘’ಯಾರೂ ಆ ಬದಿಗೆ ಹೋಪಲೆ ಬಿಡತವಿಲ್ಲೆ. ನಂಗವೆ ಹೊರಗೆ ಬಿದ್ದು ಬಂದಿದ್ದು. ಸುಮ್ನೆ ಬಾ ‘’ ಇಶಾ ಕರೆದಳು.ಊರು ದಾಟಿ ಸ್ವಲ್ಪ ಹೊತ್ತು ನಡೆದ ನಂತರ ಕಾಡು ಸಿಕ್ಕಿತು. ನೇಹಾ ಸುತ್ತಲೂ ನೋಡಿ,

‘’ಇಲ್ಲೆಲ್ಲಿ ರಂಜಲು ಮರ ಇದ್ದೇ?’’ ಎಂದು ಕೇಳಿದಳು. 

‘’ಇನ್ನೂ ಒಳಗೆ ಇದ್ದು. ಮೊನ್ನೆ ಇಲ್ಲಿ ಬಂದಿದ್ಯ .ರಾಶಿ ರುಚಿ ಇರತು ಆ ಮರದ ಹಣ್ಣು.’’ ಆರ್ಣವ ಉತ್ತರಿಸಿದ. ಇರಬಹುದೇನೋ ಎಂದುಕೊಂಡು ನೇಹಾ ಅವರ ಜೊತೆಗೆ ನಡೆದಳು.ಒಂದು ಹತ್ತು ನಿಮಿಷ ಕಳೆದಿರಬಹುದೇನೋ.. ಇಶಾ ಕೂಗಿದಳು. 

‘’ಅಲ್ಲಿದ್ದು ನೋಡು. ಆ.. ಮರ’’ 

‘’ಯಾವ ಮರ?’’ ನೇಹಾ ಮತ್ತೆ ಕೇಳಿದಳು.

‘’ಅಲ್ಲಿ ನನ್ನ ಬೆರಳಿನ ನೇರಕ್ಕೆ ನೋಡು. ಅದೇ  ಅಲ್ಲಿ’’ ಅವಳು ಮತ್ತೆ ತೋರಿಸಿದಳು. 

‘’ಓ... ಕಂಡತು.’’ ನೇಹಾ ಉತ್ತರಿಸಿದಳು. ಸೊಂಪಾಗಿ ಬೆಳೆದಿದ್ದ ರಂಜಲು ಮರ, ಕೆಳಗೆ ಹಣ್ಣುಗಳನ್ನು ಉದುರಿಸಿ ನಿಂತಿತ್ತು. 

ರಂಜಲು ಹಣ್ಣು - Mimusops elengi
By J.M.Garg - Own work, CC BY-SA 3.0

‘’ಬಾ. ಹಣ್ಣು ಹೆಕ್ಕನಾ’’ ಆರ್ಣವ  ದೂರದಿಂದ ಕರೆದ.ಮರದ ಕೆಳಗೆ ಅಲ್ಲಲ್ಲಿ ಬಿದ್ದಿದ ಹಣ್ಣು ಹೆಕ್ಕುತ್ತಾ, ಆಗಾಗ  ಅದನ್ನು ತಿನ್ನುತ್ತಾ ಸ್ವಲ್ಪ ಸಮಯ ಕಳೆಯಿತು. ನೇಹಾ ಮರದ ಹತ್ತಿರದಲ್ಲಿ ಮತ್ತೊಂದು ಹಣ್ಣು ಇರುವುದನ್ನು ಕಂಡು ಅದನ್ನು ಹೆಕ್ಕಲು ಕೆಳಗೆ ಬಾಗಿದಳು. ಆಗ ಹತ್ತಿರದಲ್ಲಿದ್ದ ಚಿಕ್ಕ ಪೊದೆಯೊಂದು  ಸ್ವಲ್ಪ ಅಲ್ಲಾಡಿದಂತಾಯಿತು.ನೇಹಾ ತಲೆ ಎತ್ತಿ ಮೇಲೆ ನೋಡಿದಳು. ಏನೂ ಇರಲಿಲ್ಲ. ಏಕೋ ಅನುಮಾನ ಬಂದು ಆ ಪೊದೆಯ ಬಳಿ ಹೋಗಿ ಇಣುಕಿದಳು. ಅದನ್ನು ಕಂಡ ತಕ್ಷಣ ಅವಕ್ಕಾಗಿ ನಿಂತಳು. 

ಅಲ್ಲಿ ಇದ್ದದ್ದು ಹುಲಿಮರಿ!

‘’ಇಶಾ.. ಏ ಇಶಾ.. ಇಲ್ಲಿ ಬಾ ‘’ ನೇಹಾ ಕೂಗಿ ಕರೆದಳು. 

‘’ಎಂತಾ ಆತೆ? ಎಂತಕ್ಕೆ  ಕೂಗತೆ?’’ ಇಶಾ ಸ್ವಲ್ಪ ಜೋರಾಗಿಯೇ ಕೇಳಿದಳು. 

‘’ಇಲ್ಲಿ ನೋಡು. ಇಲ್ಲೊಂದು ಹುಲಿಮರಿ ಇದ್ದು. ನೋಡ್ರೆ ರಾಶಿ ಸಣ್ಣದು ಅನಿಸ್ತು.’’ ನೇಹಾ ವಿವರಿಸಿದಳು. 

‘’ಹುಲಿಮರಿ? ಎಲ್ಲಿ? ಅದು ಹಂಗಾರೆ ಹಿಂದಿನ ವಾರ ಒಂದು ಹುಲಿ ಸತ್ತೋಗಿತ್ತಲೇ.. ಅದರ ಮರೀನೇ ಆಗಿಕ್ಕು.’’ ಇಶಾ ಉತ್ತರಿಸಿದಳು. 

‘’ಹ. ಈಗ ಇದರ ಎಂತಾ ಮಾಡದು? ಊರಿಗಂತು  ತಗಂಡೋಪಲೆ  ಆಗ್ತಿಲೆ. ಇಲ್ಲೇ ಬಿಡಲು ಆಗ್ತಿಲ್ಲೇ.’’ ಆರ್ಣವ ಉತ್ತರಿಸಿದ. 

‘’ನಾವೇ ಇದಕ್ಕೆ ದಿನಾ ಹಾಲು ತಂದು ಹಾಕರೆ ಹೆಂಗೆ? ಇನ್ನೂ ಮರಿ ಇದು. ಎಂತಾ ಕಚ್ಚಲೂ ಬತ್ತಿಲ್ಲೇ.’’ ನೇಹಾ ಸಲಹೆ ನೀಡಿದಳು.

‘’ಹುಲಿಮರಿ.. ಸಾಕದಾ?ಅದಕ್ಕೆ ಎಷ್ಟು ದಿವಸ ಹೇಳಿ ಹಾಲು ಹಾಕತೆ?ಒಂದು ಎರಡು ವಾರ ನೋಡನ ಕಾಡಿಗೆ ಅರಣ್ಯ ಇಲಾಖೆಯವಕೆ ಹೇಳನ’’ ಇಶಾ ಹೇಳಿದಳು. ನೇಹಾ ಹುಲಿ ಮರಿಯ ಮುಖ ನೋಡಿದಳು. ಒಂದು ದೊಡ್ಡ ಬೆಕ್ಕಿನಷ್ಟೆ ದೊಡ್ಡದಿತ್ತು. 

‘’ಸರಿ. ನೋಡನ.ನಾಳೆ ಮನೆಯಿಂದ ಹಾಲು ತಂದು ಕೊಡನ.’’ ನೇಹಾ ಹುಲಿ ಮರಿಯನ್ನು ಆಡಿಸುತ್ತಾ ಉತ್ತರಿಸಿದಳು. ಇಷ್ಟು ಚಿಕ್ಕ ಮರಿ ಮುಂದೆ ನರಹಂತಕ ಹೇಗೆ ಆಗಬಲ್ಲದು? ನೇಹಾ ಯೋಚಿಸಿದಳು. 



ಮುಂದುವರೆಯುವುದು ......


ರಂಜಲು ಮರ.

 Blog Survey



Comments

  1. This is Ria from https://riawonderland.blogspot.com/.I nominated you for Liebster award. I am a huge fan of your blog.IF YOU LOVE TO CONTINUE THE CHAIN CHECK OUT MY POST AND FOLLOW THE RULES.

    ReplyDelete
  2. This is Ria from https://riawonderland.blogspot.com/.I nominated you for Liebster award.IF YOU LOVE TO CONTINUE THE CHAIN CHECK OUT MY POST AND FOLLOW THE RULES.

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ