Skip to main content

ಮಕ್ಕಳ ಕಣ್ಣಿನಿಂದ ಹೊಲೊಕಾಸ್ಟ್ !

I dont think of All the misery, but of the beauty that still remains.     ~Anne Frank.

Anne Frank  ಹೆಸರು ಕೇಳದವರು ಇದ್ದಾರೆಯೇ? 14 ವರ್ಷದ ಯಹೂದೀ  ಹುಡುಗಿ ತನ್ನ ಡೈರಿಯಿಂದ ಇಂದು ವಿಶ್ವ ಪ್ರಸಿದ್ದಳು. ಅವಳೇ ತನ್ನ diary ಅಲ್ಲಿ   ಬರೆದಿರುವಂತೆ "ನಾನು ತೀರಿದ ನಂತರವೂ ಜನರ ಮನದಲ್ಲಿ ಬದುಕಿರುವಂತಹದದನ್ನು ಮಾಡಬೇಕು" Anne ಬರೆದ ಮಾತುಗಳು ಅವಳ ವಿಷಯದಲ್ಲಿ ಅಂತೂ ನಿಜವಾಗಿದೆ. ಪ್ರಪಂಚದಾದ್ಯಂತ ಜನರೆಲ್ಲರ ಮನದಲ್ಲಿ Anne ಇಂದಿಗೂ ಜೀವಂತವಾಗಿದ್ದಾಳೆ, ಅವಳ ಡೈರಿಯ  ಹಾಗೆ. 

ಸುಮಾರು ನನ್ನದೇ ವಯಸ್ಸಿನವಳಾಗಿದ್ದ (14) ಇವಳು  ಮನಕ್ಕೆ ನಾಟುವಂತೆ ಅದ್ಬುತವಾಗಿ ಬರೆದಿದ್ದಾಳೆ. ತನ್ನ ಹದಿಮೂರನೇ  ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಿಕ್ಕ diary ಅಲ್ಲಿ ದಿನನಿತ್ಯದ ಘಟನೆಗಳನ್ನೇ ಬರೆಯುತ್ತಾ ಹೋಗುವ ಇವಳ ಡೈರಿ ಮೊದಮೊದಲು ಸ್ವಲ್ಪ ಬೋರು ಹೊಡೆಸಿದರೂ ಎರಡನೇ ಭಾಗದಲ್ಲಿ ರಾಜಕೀಯ ವಿಷಯಗಳು, ತನ್ನ ಅಡಗುತಾಣವಾಗಿದ್ದ The  Secret Annex ನಲ್ಲಿ ಇರುವಾಗಿನ ಒಂಟಿತನ, ಅಕ್ಕ Margot ನ ರೀತಿ ತಾನೂ ಬುದ್ಧಿವಂತಳಾಗಿದ್ದರೆ ಎಂಬ ಯೋಚನೆ, ಕಾಮಿಕ್ ಒಂದರ ಪಾತ್ರ kitty  ಗೆ ಪ್ರತಿದಿನ ಬರೆಯುತ್ತಿದ್ದ ಪತ್ರ, ಯಹೂದಿಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಎಲ್ಲವನೂ ತನ್ನ ವಿಶಿಷ್ಟ ಬರವಣಿಗೆ ಶೈಲಿಯಲ್ಲಿ ಸುಂದರವಾಗಿ ಬರೆಯುತ್ತಾ ಹೋಗುತ್ತಾಳೆ. ಈ Anne Frank ಮೂಲ ಜರ್ಮನಿಯವಳಾದರೂ ನಂತರ ಹಿಟ್ಲರನ ನಿಯಮಗಳಿಂದ ಪಕ್ಕದ Netherlands ಗೆ 1934ರಲ್ಲಿ  ಬಂದು ನೆಲೆಸಿದ್ದಳು. ನಂತರ ನೆದರ್ಲ್ಯಾಂಡ್ಸ್ ಕೂಡ 1941ರಲ್ಲಿ ನಾಜಿಗಳ ಕೈವಶವಾಯಿತು. ಯಹೂದಿಗಳ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧನೆಗಳು ಬಂದವು. ಅದೇ ವರ್ಷ ಹಿಟ್ಲರ್ ಯಹೂದಿ ಶ್ರಮ ಶಿಬಿರಗಳನ್ನು ಶುರುಮಾಡಿದ. ಆಮ್ ಸ್ಟರ್ ಡ್ಯಾಮ್ ನಲ್ಲಿದ್ದ  ಯಹೂದಿಗಳಿಗೆ ದೇಶ ಬಿಟ್ಟು ತೆರಳುವಂತೆ ಆಜ್ನೆ ಆಯಿತು. ಆದರೆ ಅವಳ ಅಕ್ಕನಿಗೂ ಅದೇ ಸಮಯಕ್ಕೆ ಶ್ರಮಶಿಬಿರಕ್ಕೆ ತೆರಳುವಂತೆ ಆದೇಶ ಬಂತು.ಈ ರೀತಿ ಇನ್ನೂ ಹಲವು ಜನ ಇಂತಹ ಅಡಗುದಾಣಗಳಲಲ್ಲಿ ಅಡಗಿದ್ದರು. Anne ಇವರಲ್ಲಿ ಒಬ್ಬಳಷ್ಟೇ. Anne ಳ ಕುಟುಂಬದವರು ಮತ್ತೊಂದು ಯಹೂದೀ ಕುಟುಂಬವಾದ van dan ಕುಟುಂಬದ ಜೊತೆ Secret Annex ಎಂಬಲ್ಲಿ ಅಡಗಿದ್ದಳು. ಆ ಅಡಗುತಾಣದಲ್ಲಿ ಬರೆದದ್ದೇ ಈ ಡೈರಿ. ಇದನ್ನು ಯುದ್ಧದ ನಂತರ ಪುಸ್ತಕದ ರೂಪದಲ್ಲಿ ಪ್ರಕಟಿಸಬೇಕು ಎಂಬ ಯೋಚನೆಯೂ ಅವಳಲ್ಲಿ ಇತ್ತು ಎನ್ನುವ ಮಾಹಿತಿಯೂ ಇದೆ. Annexನಲ್ಲಿ ಒಟ್ಟು 8 ಜನ ಯಹೂದಿಗಳು ಅಡಗಿದ್ದರು, ಅದೂ ಸುಮಾರು 2 ವರ್ಷಗಳ ಕಾಲ!

Anne (13), Margot (16), Peter (16) ಈ ಮೂರು ಜನ ಅಲ್ಲಿದ್ದವರಲ್ಲಿ  ಮಕ್ಕಳು. Anne ಹದಿಮೂರು ವರ್ಷದಿಂದ ತನ್ನ 15ನೇ ವರ್ಷದ ವರೆಗೆ ಅಲ್ಲಿ ಅಡಗಿದ್ದಳು. ನಂತರ ದುರದೃಷ್ಟವಾತ್  1944 ರಲ್ಲಿ ಇವರೆಲ್ಲರೂ ಸಿಕ್ಕಿಬಿದ್ದು ಶ್ರಮಶಿಬಿರಕ್ಕೆ ಇವರನ್ನು ರವಾನಿಸಲಾಯಿತು. Anne ಮತ್ತು ಅವಳ ಅಕ್ಕ Margot ಅನ್ನು ಜರ್ಮನಿಯ ಬೆರ್ಗರ್ ಬೆಲ್ಸನ್ ಶ್ರಮಶಿಬಿರಕ್ಕೆ ಸಾಗಿಸಲಾಯಿತು. ಅಲ್ಲಿಯೇ  1945 ರಲ್ಲಿ Anne  ಮತ್ತು ಅವಳ ಅಕ್ಕ ತೀರಿಕೊಂಡರು. ಅಡಗಿದ್ದವರಲ್ಲಿ ಬದುಕಿ ಉಳಿದಿದ್ದು Anne ಳ ತಂದೆ Otto Frank ಒಬ್ಬರೇ. Anne ಡೈರಿಯನ್ನು ಅವರು 1947 ರಲ್ಲಿ 'The Secret Annex' ಎಂಬ ಹೆಸರಿನಲ್ಲಿ ಪ್ರಕಟಿಸಿದರು.ನಂತರ 1960 ರಲ್ಲಿ Secret Annex ಅನ್ನು ಸಂಗ್ರಹಾಲಯವನ್ನಾಗಿ ಮಾಡಲಾಯಿತು. ಈಗಲೂ ಸಾಯ ಅವಳ ಡೈರಿ, ಆ ಅಡಗುತಾಣ ಎಲ್ಲವನ್ನೂ ಸಂರಕ್ಷಸಲಾಗಿದೆ, ಘೋರ ಇತಿಹಾಸದ ತುಣುಕಾಗಿ.... 
 
ಗಾಂಧಿಯ ಉಲ್ಲೇಖ : ವಿಶೇಷವೆಂದರೆ Anne ರಾಜಕೀಯ ಸ್ಥಿತಿಗತಿಗಳ ಬಗ್ಗೆ ಬರೆಯುವಾಗ ಒಮ್ಮೆ ಗಾಂಧಿಯ ಉಲ್ಲೇಖವನ್ನೂ ಮಾಡುತ್ತಾಳೆ. “Gandhi, the champion of Indian freedom is one of his umpteenth hunger strikes’’ ಎಂದು ಬರೆಯುತ್ತಾಳೆ. ಹಾಗೆಯೇ ಮುಂದಿನ ಪುಟದಲ್ಲಿ ಗಾಂಧಿ ಈಗ ಸತ್ಯಾಗ್ರಹ ನಿಲ್ಲಿಸಿದ್ದಾರೆ ಎಂದೂ ಬರೆದಿದ್ದಾಳೆ. ಇಂತಹ ಇನ್ನೂ ಹಲವು ಕುತೂಹಲಕಾರಿ ವಿಷಯಗಳನ್ನು ನಾವು ಪುಸ್ತಕದಲ್ಲಿ ಕಾಣಬಹುದು.


Anne ಳ ಡೈರಿ ಕೇವಲ ಒಂದು ಸಾಧಾರಣ ಡೈರಿ ಅಲ್ಲ. ಅದೊಂದು ಜಗತ್ತು ಮರೆಯಲು ಪ್ರಯತ್ನಿಸುವ ಒಂದು ಘೋರ ಇತಿಹಾಸದ ಸಾಕ್ಷಿ. ಇವಳ ಹಾಗೆ ಇನ್ನೂ ಹಲವು ಯಹೂದೀ ಮಕ್ಕಳು ಇವಳ ಹಾಗೆಯೇ ಬರೆದಿರುವ ಡೈರೀ ತುಣುಕುಗಳು ಇವೆ. ಉದಾಹರಣೆಗೆ  Moshe Flinker,Petr Ginz,Elsa Binder ಮುಂತಾದ  ಮಕ್ಕಳು ಡೈರಿ  ಬರೆದಿದ್ದಾರೆ. ಇದು ಮಕ್ಕಳ ಕಣ್ಣಿಂದ ಹೊಲೋಕಾಸ್ಟ್ !


ಒಂದು ಯುದ್ಧ ಏನೆಲ್ಲ ಬದಲಿಸಬಹುದು ಎಂಬುದಕ್ಕೆ Anneಳ ಡೈರಿ ಉತ್ತಮ ಉದಾಹರಣೆ. ಅದೆಷ್ಟೋ Anneಗಳು ಇಂತಹ ಯುದ್ಧದ ನಡುವೆ ಸಿಕ್ಕಿ ನಲುಗಿದವರಿದ್ದಾರೆ, ಅದರ ನಡುವೆಯೇ ಎದ್ದು ಬಂದವರಿದ್ದಾರೆ, ಹೊಲೋಕಾಸ್ಟ್ ಅನ್ನು ದಾಟಿ ಬಂದವರಿದ್ದಾರೆ.....ನಮ್ಮ ಲ್ಲಿಯೇ ನೋಡಿದರೆ ದೇಶ ವಿಭಜನೆಯ ಸಮಯದಲ್ಲಿ ತೀರಿಕೊಂಡವರಿದ್ದಾರೆ , ಅದನ್ನು ಪಾರುಮಾಡಿದವರಿದ್ದಾರೆ.. ನಮ್ಮ ನಡುವೆಯೇ ಅದೆಷ್ಟೋ Anne Frank ಗಳೂ ಇದ್ದಾರೆ!







Please fill this blog survey

Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...