ಗಾರಲಪಟ್ಟಿಯ ರಾಮಕೃಷ್ಣನೂ... ಕೃಷ್ಣ ದೇವರಾಯನೂ....
ಈ ಗಾರಲಪಟ್ಟಿ ರಾಮ ಯಾರೆಂದು ಯೋಚಿಸುತ್ತಿದ್ದಿರಿ ಅಲ್ಲವೇ? ಆತ ಬೇರಾರೂ ಅಲ್ಲ,
ನಮ್ಮ ತೆನಾಲಿ ರಾಮಕೃಷ್ಣ.
ನಾವು ನೀವು ಎಲ್ಲರೂ ಶಾಲೆಗೆ ಹೋಗುವ ಮೊದಲಿನಿಂದಲೂ ತೆನಾಲಿ ರಾಮನ ಕಥೆಗಳನ್ನು ಕೇಳಿಯೋ ಓದಿಯೋ ಬೆಳೆದವರೇ. ಬದನೇಕಾಯಿಯ ಕಳ್ಳತನದಿಂದ ಹಿಡಿದು ಬಾವಿಯೇ ಕಳ್ಳತನವಾದ ಸಮಸ್ಯೆಗಳನ್ನೂ ಪರಿಹರಿಸುವ ಮಕ್ಕಳ ಪಾಲಿನ ಸುಪರ್ ಹೀರೋ ಈತ.
ಕೃಷ್ಣದವರಾಯನ ಸಮಸ್ಯೆಗಳನ್ನು ತನ್ನ ಜಾಣತನದಿಂದ ಬಗೆಹರಿಸುವ ಈ ರಾಮನ ಪರಿ ಎಲ್ಲರಿಗೂ ಇಷ್ಟ . ತನ್ನ ವಿಶಿಷ್ಟ ಅವಲೋಕನ ಶಕ್ತಿಯಿಂದ ಈ ವಿಕಟಕವಿ ನಮ್ಮ ಜನಮಾನಸದಲ್ಲಿ ಇಂದು ಮಾಸದೆ ಬದುಕಿದ್ದಾನೆ..
ತೆನಾಲಿ ರಾಮನ ನೈಜ ಹೆಸರು ಗಾರಲಪಟ್ಟಿ ರಾಮಕೃಷ್ಣಯ್ಯ. ನಮ್ಮ ತೆನಾಲಿ ಅಲ್ಲಲ್ಲ..ಗಾರಲಪಟ್ಟಿ ರಾಮಕೃಷ್ಣಯ್ಯ ಹುಟ್ಟಿದ್ದು ಆಂಧ್ರದ ತುಮುಳೂರಿನಲ್ಲಿ. ತಂದೆ ಗಾರಲಪಟ್ಟಿ ರಾಮಯ್ಯ . ತಾಯಿ ಲಕ್ಷ್ಮಮ್ಮ. ರಾಮಯ್ಯನವರು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಯದಲ್ಲಿ ಅರ್ಚಕರಾಗಿದ್ದರು. ಆದರೆ ದುರದೃಷ್ಟವಶಾತ್ ಅವರು ರಾಮನ ಬಾಲ್ಯದಲ್ಲೇ ತೀರಿಕೊಂಡರು. ನಂತರ ರಾಮನ ಸೋದರ ಮಾವನ ಮನೆಯಾದ ತೆನಾಲಿಗೆ ಬಂದು ಉಳಿದುಕೊಂಡರು. ಹೀಗಾಗಿ ಗಾರಲಪಟ್ಟಿ ರಾಮಕೃಷ್ಣಯ್ಯ ತೆನಾಲಿ ರಾಮ ಆದ.
ಆಗ ವಿಜಯನಗರ ಸಾಮ್ರಾಜ್ಯದಲ್ಲಿ ವೈಷ್ಣವ ಮತ್ತು ಶೈವರ ಮದ್ಯೆ ವೈಷಮ್ಯ ಬೆಳೆಯುತ್ತಿತ್ತು.ಈ ಕಾರಣದಿಂದ ಶೈವನಾದ ರಾಮನಿಗೆ ಸಾಂಪ್ರದಾಯಿಕ ಶಿಕ್ಷಣ ಸಿಗಲಿಲ್ಲ. ಆದರೆ ವಿದ್ಯಾಸಕ್ತನಾದ ರಾಮ ಊರಿನ ಶಾಲೆಯ ಬಾಗಿಲಲ್ಲಿ ಅಡಗಿ ನಿಂತು ಪಾಠ ಕಲಿಯುತ್ತಿದ್ದ.ಒಂದು ದಿನ ಹೀಗೆ ಅಡಗಿ ಕುಳಿತಿದ್ದಾಗ ಸಿಕ್ಕಿಬಿದ್ದು ಕಳ್ಳನೆಂದು ಆರೋಪ ಬಂತು. ಇದರಿಂದ ದುಃಖಿತನಾದ ರಾಮನು ಕಾಡಿಗೆ ಹೋದ. ಕಾಡಿನಲ್ಲಿ ಸಿಕ್ಕ ಸನ್ಯಾಸಿಯೊಬ್ಬ ಅವನ ಕಥೆಯನ್ನು ಕೇಳಿ ಕಾಳೀ ಮಾತೆಯ ಜಪ ಮಾಡಲು ಹೇಳಿದರು. ಹಾಗೇ ಮಾಡಿದಾಗ ಕಾಳಿ ಪ್ರತ್ಯಕ್ಷವಾಗಿ ವರವನ್ನು ಕೊಟ್ಟಿದ್ದು, ವಿಕಟ ಕವಿ ಎಂಬ ಹೆಸರು ಕೊಟ್ಟಿದ್ದು ಎಲ್ಲವೂ ಎಲ್ಲರಿಗೂ ತಿಳಿದ ಕಥೆ. ಆದರೆ ಈ ವಿಕಟ ಕವಿ ಎಂಬ ಹೆಸರಿನಲ್ಲಿ ವಿಕಟ ಎಂದರೆ ವಿಚಿತ್ರ ಎಂಬ ಅರ್ಥ ಬರುತ್ತದೆ . ಜೊತೆಗೆ ವಿಕಟ ಇದು ನಿಕಟ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಈ ಹೆಸರು ಕೃಷ್ಣದೇವರಾಯ ಅಥವಾ ಇತರರು ಯಾರಿಂದಲೋ ಬಂದಿರುವ ಸಾಧ್ಯತೆ ಇದೆ. ಜೊತೆಗೆ ಕಾಳಿಯ ಕಥೆಯೂ ಕಾಳಿದಾಸ ನ ಕಥೆಯಿಂದ ಪ್ರೇರಿತವಾಗಿ ಬಂದಿರಬಹುದು.
ತೆನಾಲಿ ರಾಮನು ಕೃಷ್ಣದೇವರಾಯನ ವಿದೂಶಕನೂ, ಆಪ್ತ ಸಲಹಿಗಾರನೂ ಆಗಿದ್ದನು. ಇವನು ಬಾಲ್ಯದಲ್ಲಿ ಶಿಕ್ಷಣ ಪಡೆಯದೇ ಇದ್ದರೂ ಸಹ ಒಬ್ಬ ಕವಿ ಹಾಗೂ ಪಂದಿತನಾಗಿದ್ದನು. ಈತ ಪಾಂಡುರಂಗ ಮಹತ್ಮಂ, ಚಾತುವ ಇತ್ಯಾದಿ ಕೃತಿ ರಚಿಸಿದ್ದಾನೆ. ಈತನು ಬಹು ಭಾಷಾ ಪಂಡಿತನು ಆಗಿದ್ದನು. ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಅಂದರೆ ಕನ್ನಡ ,ತೆಲುಗು, ತಮಿಳು, ಮಲೆಯಾಳಂ ಜೊತೆಗೆ ಮರಾಠಿ ಇತ್ಯಾದಿ ಭಾಷೆಗಳನ್ನೂ ಬಲ್ಲವನಾಗಿದ್ದನು.
ಆದರೆ ೧೫೩೦ರ ಸುಮಾರಿಗೆ ಶ್ರೀ ಕೃಷ್ಣದೇವರಾಯನು ತೀರಿಕೊಂಡ. ಅವನ ಮಗ ತನ್ನ ಆರನೇ ವಯಸ್ಸಿನಲ್ಲಿ ಪಟ್ಟಕ್ಕೆರಿದ್ದರೂ ವಿಷಪ್ರಾಶನ ದ ಕಾರಣದಿಂದ ತೀರಿಕೊಂಡ . ಹೀಗಾಗಿ ಅವನ ತಮ್ಮ ಅಚ್ಯುತ ದೇವರಾಯ ಪಟ್ಟಕ್ಕೆ ಬಂದ. ವಿಚಿತ್ರವೆಂದರೆ ಅವನು ಆಡಳಿತಕ್ಕೆ ಬಂದ ನಂತರ ಅವನು ಊರಿಗೆ ಹೊರಟುಹೋದ. ಅವನ ಮತ್ತು ಅಚ್ಯುತ ರಾಯನ ಮಧ್ಯೆ ಏನಾದರೂ ಭಿನ್ನಾಭಿಪ್ರಾಯ ಬಂದಿತ್ತೆ? ಅಥವಾ ಇನ್ನೇನಾದರೂ ಕಾರಣವಿತ್ತೆ? ತಿಳಿಯದು. ತೆನಾಲಿರಾಮ ಊರಿಗೆ ಹಿಂದಿರುಗಿದ ನಂತರ ಕೆಲವು ವರ್ಷಗಳ ಲ್ಲಿ ಹಾವಿನ ಕಡಿತದಿಂದ ತೀರಿಕೊಂಡ.
ತುಮುಲೂರಿನಲ್ಲಿ ಹುಟ್ಟಿ ತೆನಾಲಿಯಲ್ಲಿ ಬೆಳೆದ ಈ ರಾಮ ರಾಜನ ಆಪ್ತನಾಗಿ, ವಿದೂಷಕನಾಗಿ, ಚಂಡಾಮಾಂದ ಕಥೆಗಳಲ್ಲಿ ಮೆರೆದು ೭೦೦ ವರ್ಷಗಳ ಹಿಂದಿನಿಂದಲೂ ನಮ್ಮ ಜನರ ಮನದಲ್ಲಿ ಎಂದಿಗೂ ಅಜ'ರಾಮ'ರ
~ವನ್ಯಾ ಸಾಯಿಮನೆ
೯ನೇ ತರಗತಿ
Comments
Post a Comment