Skip to main content

ರೈನಾ ದೆ ಪಿಮೆಂಟಾ - ಕರಿಮೆಣಸಿನ ರಾಣಿಯ ಕಥೆ!

ನಾವೆಲ್ಲರೂ ಇತಿಹಾಸವನ್ನು ಶಾಲೆಯಲ್ಲಿ ಕಲಿಯುವಾಗ, ರಾಣಿ ಅಬ್ಬಕ್ಕದೇವಿ ಉಳ್ಳಾಳದ ರಾಣಿಯಾಗಿದ್ದಳು.. ಅವಳು ಪೋರ್ಚುಗೀಸರೊಡನೆ ಹೋರಾಡಿದಳು.. ಎಂದೆಲ್ಲಾ ಬಾಯಿಪಾಠ  ಮಾಡಿರುತ್ತೇವೆ. ಹಾಗೆ, ಲಕ್ಷ್ಮಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ರಾಣಿಯರ ಬಗ್ಗೆಯೂ ಕಲಿತಿರುತ್ತೇವೆ. ಈಜಿಪ್ಟ್ ನ ಕ್ಲಿಯೋಪಾತ್ರ, ನೆಫೇರಿಟ್ಟಿ , ಇಂಗ್ಲೆಂಡ್ ನ ರಾಣಿ ಎಲಿಜಬೆತ್ ಮುಂತಾದವರ ಬಗ್ಗೆಯೂ ಕೇಳಿರುತ್ತೇವೆ. ಆದರೆ ನಮ್ಮೂರಿನ ರಾಣಿಯರ ಬಗ್ಗೆ, ನಮ್ಮೂರಿನ ಇತಿಹಾಸದ ಬಗ್ಗೆ ನಮಗೆ ಎಷ್ಟು ಗೊತ್ತು? 
ನನಗೆ ನಿಜ ಹೇಳಬೇಕೆಂದರೆ ಸೊದೆ ಅರಸರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದು ಬಿಟ್ಟರೆ, ಮತ್ತೇನು ಗೊತ್ತಿರಲಿಲ್ಲ. ಆದರೆ ಈಗೊಂದು 2 ವಾರದ ಹಿಂದೆ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಎಂಬ ಪುಸ್ತಕ ಓದಿದೆ. ಈ ವರ್ಷದ ನನ್ನ favorite  ಪುಸ್ತಕ ಎನ್ನಬಹುದೇನೋ. 

ಚೆನ್ನ ಭೈರಾ ದೇವಿಯ ಬಗ್ಗೆ ಒಂದೆರಡು ಕಥೆಗಳನ್ನೂ, ಡಾ. ಕೆ. ಎನ್. ಗಣೇಶಯ್ಯನವರ 'ಬಳ್ಳಿ ಕಾಳ ಬೆಳ್ಳಿ' ಎಂಬ ಪುಸ್ತಕವನ್ನೂ ಓದಿದ್ದೆ. ಆದರೆ ಈ ರಾಣಿಯ ಪೂರ್ಣ ಇತಿಹಾಸವನ್ನು ತಿಳಿದಿರಲಿಲ್ಲ, ಎಲ್ಲವೂ ಒಂದು ರೀತಿಯ ಪಝಲ್ ತುಂಡುಗಳಂತೆ ಇತ್ತು. ಆದರೆ ಈ ಪುಸ್ತಕ ಉಳಿದ ಇತಿಹಾಸದ ಪುಸ್ತಕದಂತೆ ಇರದೆ, ಕಥೆಯಂತೆ ಇದ್ದು,  ತುಂಬಾ ಇಷ್ಟವಾಯಿತು. 

ಯಾರಿವಳು ಚೆನ್ನಭೈರಾದೇವಿ? :ವಳು ಗೇರುಸೊಪ್ಪದ ರಾಣಿ! ಗೇರುಸೊಪ್ಪ ನಮ್ಮ ಜಿಲ್ಲೆಯ ಒಂದು ಸಣ್ಣ ಹಳ್ಳಿ (ಉತ್ತರ ಕನ್ನಡ) ಇದು ಶರಾವತಿ ನದಿಯ ಬಳಿ ಇದೆ. ಈ ಚೆನ್ನಭೈರಾದೇವಿಯ ಕಥೆ ಇತಿಹಾಸದ ಅತ್ಯಂತ ಪ್ರಸಿದ್ಧ ಮತ್ತು ಮಹತ್ವದ ತಿರುವಿನಿಂದ ಆರಂಭವಾಗುತ್ತದೆ: ಹೊಸ ಸಮುದ್ರ ಮಾರ್ಗಗಳ ಆವಿಷ್ಕಾರ! ನಾವೆಲ್ಲರೂ ಇದರ ಬಗ್ಗೆ ಶಾಲೆಯಲ್ಲಿ ಓದಿದವರೇ. ಒಟ್ಟೋಮನ್ ತುರ್ಕಿಗಳು ಪ್ರಪಂಚದ ವ್ಯಾಪಾರ ಕೇಂದ್ರವಾಗಿದ್ದ ಕಾನ್ಸ್ಟಾಂಟಿನೋಪಲ್ ಅನ್ನು ವಶಪಡಿಸಿಕೊಂಡಾಗ, ಅವರು ಏಷ್ಯಾದಿಂದ ಸರಕುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಒತ್ತಾಯಿಸಲು ಪ್ರಾರಂಭಿಸಿದರು. ಹಾಗಾಗಿ ಸ್ಪೇನ್ ಮತ್ತು ಪೋರ್ಚುಗಲ್ ನಂತಹ ಕೆಲವು ದೇಶಗಳು ಭಾರತ ಮತ್ತು ಇತರ ಏಷ್ಯನ್ ದೇಶಗಳಿಗೆ ಹೊಸ ಸಮುದ್ರ ಮಾರ್ಗಗಳನ್ನು ಅನ್ವೇಷಿಸಲು ಹೋದವು- ಮಸಾಲೆಗಳನ್ನು ವ್ಯಾಪಾರ ಮಾಡಲು. ಭಾರತಕ್ಕೆ ಮೊದಲು ಬಂದ ಪೋರ್ಚುಗೀಸರು ಗೋವಾವನ್ನು ಆಕ್ರಮಿಸಿಕೊಂಡ ಸಮಯದಲ್ಲಿ , ನಮ್ಮ ಪ್ರದೇಶವು ವಿಜಯನಗರದ ನಿಯಂತ್ರಣದಲ್ಲಿತ್ತು. ಮತ್ತು ಚೆನ್ನಭೈರಾದೇವಿಯ ತಾಯಿ ಭೈರಾದೇವಿ ಮಹಾಮಂಡಳೇಶ್ವರಿಯಾಗಿದ್ದಳು. ಮತ್ತು ಆಕೆಯ ನಂತರ, ಚೆನ್ನಭೈರಾದೇವಿಯ ಸಹೋದರಿ ಚೆನ್ನಾದೇವಿ ರಾಣಿಯಾಗಿದ್ದಳು. ಅವಳು ಯುದ್ಧದಲ್ಲಿ ತೀರಿಕೊಂಡ ನಂತರ ಕಿರಿಯ ಮಗಳು- ಚೆನ್ನಭೈರಾದೇವಿ 1550 ರಲ್ಲಿ ಗೇರುಸೊಪ್ಪದ ರಾಣಿಯಾದಳು. ಈಕೆ ಪೋರ್ಚುಗೀಸರನ್ನೇ ಹಿಮ್ಮೆಟ್ಟಿಸಿದ ಧೈರ್ಯವಂತೆ. ಪೋರ್ಚುಗೀಸರು ಇವಳನ್ನು ರೈನಾ ದೆ ಪಿಮೆಂಟ ಅಂದರೆ ಕರಿಮೆಣಸಿನ ರಾಣಿ ಎಂದು ಹೆಸರು ಕೊಟ್ಟಿದ್ದರು! ತನ್ನ ಚಿಕ್ಕ ಸೈನ್ಯದ ತುಕಡಿಯ ಜೊತೆಗೆ, ಪೋರ್ಚುಗೀಸರ ದೊಡ್ಡ ಸೈನ್ಯವನ್ನು ಸೋಲಿಸಿದ್ದಳು!ಈ ರಾಣಿ ಜೈನ ಧರ್ಮದವಳು. ಈಕೆ ನಿರ್ಮಿಸಿದ ಚತುರ್ಮುಖ ಬಸದಿಯಂತಹ ಕೆಲವು ಬಸದಿಗಳನ್ನು ಈಗಲೂ ಕಾಣಬಹುದು. ಈಕೆ ಕಾಡುಗಳಿಂದ ಮೆಣಸು ಸಂಗ್ರಹಿಸಲು ರೈತರನ್ನು ಪ್ರೋತ್ಸಾಹಿಸಿ ಕಾಳುಮೆಣಸಿನ ವ್ಯಾಪಾರದ ಮೇಲೆ ಹಿಡಿತ ಸಾಧಿಸಿದ್ದವಳು. ಹಲವು ಮೆಣಸು ಬಾವಿಗಳನ್ನು ಕಾಳುಮೆಣಸಿನ ಸಂಸ್ಕರಣೆಗಾಗಿ ನಿರ್ಮಿಸಿದ್ದಳಂತೆ.

ಆದರೆ ಕೆಲವು ನೆರೆಯ ಸಾಮ್ರಾಜ್ಯದ ಮುಖ್ಯಸ್ಥರು ಒಗ್ಗೂಡಿ ಮಾಡಿದ ಗೇರುಸೊಪ್ಪದ ಮೇಲಿ ನ ದಾಳಿಯಿಂದ ವಯಸ್ಸಾಗಿದ್ದ ರಾಣಿಯನ್ನು ಸೋಲಿಸಿ ಜೈಲಿಗೆ ಹಾಕಿದರು . ನಂತರ, ಗೇರುಸೊಪ್ಪ ಕೆಳದಿಯ ಸಾಮ್ರಾಜ್ಯದ ಅಡಿಯಲ್ಲಿ ಬಂತು . ಚೆನ್ನಭೈರಾದೇವಿ ಜೈಲಿನಲ್ಲಿಯೇ ತೀರಿಕೊಂಡಳು. ಅದರ ನಂತರ ರಾಣಿ ಇತಿಹಾಸದಿಂದ ಪೂರ್ಣ ಮರೆಯಾಗಿದ್ದಳು. ಕೆಲವು ಕಥೆಗಳ ಪ್ರಕಾರ ಆಕೆಯ ಮೇಲೆ ದಾಳಿ ಮಾಡಿದಾಗ ಅವಳು ಎಲ್ಲಾ ಸಂಪತ್ತನ್ನು ಮೆಣಸು ಬಾವಿಯಲ್ಲಿ ಹೂಳಿದ್ದಳು. ಆದರೆ ಅವುಗಳನ್ನು ಸಾಬೀತು ಮಾಡಲು ಯಾವುದೇ ಪುರಾವೆಗಳಿಲ್ಲ.

ನನಗೆ ಈ ಪುಸ್ತಕದಲ್ಲಿ ಬಹಳ ಇಷ್ಟವಾದ ಅಂಶವೆಂದರೆ ಅದು ಇದರ ನೈಜತೆ. ನಾವೂ ರಾಣಿ ಚೆನ್ನಭೈರಾದೇವಿಯ ಜೊತೆಗೆ ಕಾಲದಲ್ಲಿ ಪಯಣಿಸುತ್ತಿದ್ದೆವು ಎಂಬ ಭಾವನೆಯನ್ನು ಕೊಡುತ್ತದೆ.  ಈ ಪುಸ್ತಕವನ್ನು ಓದಿ ಮುಗಿಸಿದಾಗ ಮಾತ್ರ ''ಅಯ್ಯೋ ಇಷ್ಟು ಬೇಗ ಮುಗಿಯಿತೆ'' ಎನಿಸಿದ್ದು ಸುಳ್ಳಲ್ಲ.

ಈ ಪುಸ್ತಕ ಒಂದು must read. ಕನ್ನಡದಲ್ಲಿ ಇತಿಹಾಸದ ಬಗ್ಗೆ ಬಂದಿರುವ ಒಂದು ಅದ್ಭುತ ಪುಸ್ತಕ. ನನಗೆ ನಮ್ಮೂರಿನ ರಾಣಿಯ ಕಥೆಯನ್ನು ಪೂರ್ಣವಾಗಿ ಹೇಳಿದ ಈ ಪುಸ್ತಕ ನನ್ನ ಪೂಸಕ್ತಕ ಕಾಪಾಟಿನಲ್ಲಿನ ಈ ವರ್ಷದ ಸ್ಟಾರ್ ಪುಸ್ತಕ😉



Comments

  1. ಚೆನ್ನಾದ ನಿರೂಪಣೆ ವನ್ಯಾ...
    Good..

    ReplyDelete
  2. Hi ವನ್ಯ..ಒಳ್ಳೆಯ ಲೇಖನ... ಇದೊಂದು ಉತ್ತಮ ಐತಿಹಾಸಿಕ ಕಥೆ..ಸಾಧ್ಯವಾದಲ್ಲಿ ಇದನ್ನ ನಾಟಕ ಕೃತಿಯಾಗಿಸಿ... ಇದೊಂದು ಉತ್ತಮ ರಂಗ ಪ್ರಸ್ತುತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ...


    ಲೇಖನಕ್ಕೆ ಮತ್ತು ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು...
    - ಗುರು ಹೂಡ್ಲಮನೆ

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ