Skip to main content

ಕೋಟೆ ನೋಡಲು ಹೋದೆ!

ಮೊನ್ನೆ  ಮಾರ್ಚ್ 7 ನೇ ತಾರೀಕು ನಾವು ನಮ್ಮದೇ ಊರಿನ ಐತಿಹಾಸಿಕ ತಾಣ, ಸೊಂದಾ ಕೋಟೆಗೆ ಹೋಗಿದ್ದೆವು. ಮೊದಲು ಸೋದೆ ಎಂದು ಹೆಸರಾಗಿದ್ದ ಈ ಊರಿನ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ. ಮೊದಲಿನಿಂದಲೂ ಸೊಂದಾ ಕೋಟೆಗೆ ಹೋಗಬೇಕು ಎಂದುಕೊಂಡಿದ್ದ ನಾನು ಈ ಬಾರಿ ನನ್ನ ಗೆಳೆಯರೂ  ಬರುತ್ತಾರೆ ಎಂದಾಗ ಖುಷಿಯಿಂದ ಹೊರಟು  ನಿಂತೆ. ಸಿರಸಿಯಿಂದ ಸುಮಾರು 15-16  ಕಿಲೋಮೀಟರ್ ದೂರವಿರುವ ಸೊಂದಾದಲ್ಲಿ ಬರೀ ಕೋಟೆಯಷ್ಟೆ ಅಲ್ಲದೆ  ಅದೇ ಅರಸರೆ ಕಟ್ಟಿಸಿದ ಸ್ವರ್ಣವಳ್ಳಿ ಮಠ , ವಾದಿರಾಜ ಮಠ ಮತ್ತು ಜೈನ ಮಠಗಳೂ ಇವೆ. ಅಲ್ಲೆಲ್ಲ ನಾನು ಹಲವು ಬಾರಿ ಹೋಗಿ ಬಂದಿದ್ದರಿಂದ ಈ ಬಾರಿ ಬರೀ ಕೋಟೆಗೆ ಮಾತ್ರ ಭೇಟಿ ಕೊಟ್ಟೆ. 
    1555 ರಲ್ಲಿ ಅರಸಪ್ಪ ನಾಯಕ ಎಂಬ ಅರಸ ಈ ರಾಜ್ಯವನ್ನು ಸ್ಥಾಪಿಸಿದನಂತೆ. ವಿಚಿತ್ರ ನೋಡಿ, ಅರಸನ ಹೆಸರೇ ಅರಸಪ್ಪ ನಾಯಕ!  ಈ ಸೋದೇ ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಆಗ ವಿಜಯನಗರದಲ್ಲಿದ್ದದ್ದು ಸದಾಶಿವರಾಯ ಎಂಬ ರಾಜ. ಈ ಅರಸಪ್ಪ ನಾಯಕ ಒಬ್ಬ ಜೈನ ರಾಜನಾಗಿದ್ದನಂತೆ.1565 ರಲ್ಲಿ ವಿಜಯನಗರದ ಪತನವಾದ ನನತರ ಈ ಸಾಮ್ರಾಜ್ಯ ಬಹಮನಿ ಸುಲ್ತಾನರ ಸಾಮಂತ ರಾಜ್ಯವಾಯಿತು. ಅರಸಪ್ಪನ ನಾಯಕನ ಮರಣದ ನಂತರ  1674 ರಲ್ಲಿ ಶಿವಾಜಿ ಈ ಸಾಮ್ರಾಜ್ಯವನ್ನು ವಶ ಪಡಿಸಿಕೊಂಡ ಎಂದೂ ಕೊನೆಗೆ ಪೋರ್ತುಗೀಸರ ಕಾಲದಲ್ಲಿ ಈ ರಾಜವಂಶ ಕಾರವಾರಕ್ಕೆ ಹೋಗಿ ಅಲ್ಲಿ ಸದಾಶಿವಘಡ ಎಂಬ ಕೋಟೆ ಸ್ಥಾಪಿಸಿತೆಂದು ಕೆಲ ಪುಸ್ತಕಗಳಲ್ಲಿ  ಓದಿದೆ. ಹಾಗೆಯೇ ಸೋದೆಯ ರಾಜರ ವಂಶದವರು ಈಗ ಗೋವಾದಲ್ಲಿದ್ದಾರೆಂದೂ, ಅವರು ಕೆಲ ವರ್ಷಗಳ ಹಿಂದೆ ಸೊಂದಾಕ್ಕೆ ಬಂದಿದ್ದಾರೆಂದೂ ತಿಳಿಯಿತು.
         ಈಗ ಕೋಟೆ ಎಂದು ಹೆಚ್ಚೆನು ಉಳಿದಿಲ್ಲವಾದರೂ ಅದರ ಅವಶೇಷಗಳು, ಮುರಿದ ಶಾಸನಗಳು, ಒಂದಿಷ್ಟು ಫಿರಂಗಿಗಳು, ಕಲ್ಲಿನ ಮಂಚ, ದೇವಸ್ತಾನ, ಹಳೆಯ ಬಾವಿ ಇತ್ಯಾದಿಗಳು  ಇನ್ನೂ ಉಳಿದುಕೊಂಡಿವೆ. ಇಲ್ಲಿ ಒಂದು ಸುರಂಗವೂ ಇದೆ! ಈಗ ಅದರ ಬಾಗಿಲನ್ನು ಮುಚ್ಚಲಾಗಿದೆಯಾದರೂ ಅದನ್ನು ಏಕೆ ನಿರ್ಮಿಸಿದ್ದರು ಎನ್ನುವುದು ತಿಳಿದಿಲ್ಲ. ಹಲವರ ಪ್ರಕಾರ ಅದು ನಿಧಿಸಾಗಣೆ ಮತ್ತು ರಾಜರು ತುರ್ತು ಸಮಯದಲ್ಲಿ ತಪ್ಪಿಸಿಕೊಳ್ಳಲು ಮಾಡಿದ ಮಾರ್ಗ, ಯಾವುದು ಎಷ್ಟು ಸರಿ ಎಷ್ಟು ಸುಳ್ಳು ಎಂದೇನೂ ತಿಳಿದಿಲ್ಲ. ಅಲ್ಲಿ ಮುರಿದು ಬಿದ್ದಿರುವ ಶಾಸನಗಳ ಮೇಲೆ  ಚಿತ್ರಗಳನ್ನು ಕೆತ್ತಲಾಗಿದೆ. ಈ ಎಲ್ಲಾ ಅವಶೇಷಗಳೂ ಇರುವುದು ಕಾಡಿನ ಮಧ್ಯದಲ್ಲಿ. ನನಗೆ ಇವೆಲ್ಲದರಲ್ಲಿ ಅತ್ಯಂತ ಕುತೂಹಲಕಾರಿಯಾಗಿ ಕಂಡಿದ್ದು ಅಲ್ಲಿದ್ದ ಕಲ್ಲಿನ ಶಾಸನ ಮತ್ತು ಸುರಂಗ ಮಾರ್ಗ.  ಇಲ್ಲಿರುವ ಕೋಟೆಯ ಅವಶೇಷ, ಬಾವಿ ಎಲ್ಲವೂ ಪಾಳು ಬಿದ್ದಿವೆ. ಪ್ರವಾಸೋದ್ಯಮ ಇಲಾಖೆಗೆ ಇದರ ಬಗ್ಗೆ ಸ್ವಲ್ಪ ಗಮನ ಬರುವಂತಾದರೆ ಸಾಕು.    
ನಮ್ಮ ಹತ್ತಿರವೇ ಇದ್ದ, ತನ್ನೊಳಗೆ ಕುತೂಹಲಕಾರಿಯಾದ  ಇತಿಹಾಸವನ್ನು ಅಡಗಿಸಿಕೊಂಡಿರುವ ಸೊಂದಾ ಕೋಟೆಯನ್ನು ನೋಡಿ ತುಂಬಾ ಆಶ್ಚರ್ಯವಾಗಿದ್ದಂತೂ  ನಿಜ...ಜೊತೆಗೆ ನಮ್ಮೂರಿನ  ಇತಿಹಾಸದ ಬಗ್ಗೆ ಏನೂ ಗೊತ್ತಿಲ್ಲದೆ ಎಲ್ಲೂ ಮಾಹಿತಿ ಹೆಚ್ಚು ಸಿಗದೇ  ಗೂಗಲ್ ಮೊರೆ ಹೋಗಿದ್ದಕ್ಕೆ ಬೇಸರವಾಗಿದ್ದೂ ನಿಜ...
reference : https://en.m.wikipedia.org/wiki/Sodhe
Folk stories


     



Comments

  1. I had o translate this post because I only speak English. But, this post is so interesting and I now really wonder what the tunnel was truly used for! It's awesome that you wrote this post because if you hadn't I would have never known about any of what you wrote about!
    Overall great post Vanya!

    ReplyDelete
    Replies
    1. Thanks Isabella... I hope someone will find ut why the tunnel was there. Thanks for reading

      Delete
  2. Wow Vanya! Your hometown is amazing! History truly bewilders me, yet it is exquisite and mystical!

    ReplyDelete
    Replies
    1. Thanks Maith. History is amazing and it amuses me with the mysteries , even though I dont like the 'history in textbooks'!

      Delete
  3. Could you please provide sources to substantiate the historical information you have provided in the blog?

    ReplyDelete
    Replies
    1. thanks. I appreciate the effort. But it probably is better to provide some credible references than Wikipedia. Best wishes.

      Delete
  4. Good article Vanya.
    I read all your articles. All articles are so good.

    Do you know about Prasutapura ...?
    This place is nearest to you and an another historical place.

    ReplyDelete
  5. ಧನ್ಯವಾದಗಳು

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...