ಇವತ್ತು ತೋಟದಲ್ಲಿ ಸುತ್ತುತ್ತಿರುವಾಗ ಗಿಡವೊಂದಕ್ಕೆ ಆಧಾರವಾಗಿ ಕೊಟ್ಟಿದ್ದ ಗುಟ್ಟವೊಂದಕ್ಕೆ ಬೆಳೆದಿದ್ದ ಫ಼ಂಗಸ್ ಇದು. ನೋಡಲು ಜ್ವಲಂತವಾಗಿ ಉರಿಯುತ್ತಿರುವ ಬೆಂಕಿಯಂತೇ ಕಾಣುವ ಈ ಫ಼ಂಗಸ್ ಹೆಸರು ಮಾತ್ರ ವಿಚಿತ್ರ. Witche's Butter ಅಂದರೆ ಮಾಟಗಾತಿಯ ಬೆಣ್ಣೆ ಎಂದರ್ಥ. ಮುಟ್ಟಲು ಬೆಣ್ಣೆಯಂತೆ ಮೃದುವಾಗಿದ್ದರೂ ಮಾಟಗಾತಿಯರಿಗೂ ಈ ಫ಼ಂಗಸ್ ಗೂ ಏನಾದರೂ ಸಂಬಧವಿದೆಯೆ ಗೊತ್ತಿಲ್ಲ. ಇಷ್ಟು ಸುಂದರವಾದ ಫ಼ಂಗಸ್ ಗೆ ಇಂತಹ ಹೆಸರು ಸಿಕ್ಕಿದ್ದು ಮಾತ್ರ ವಿಪರ್ಯಾಸವೇ ಸರಿ!
ಈ ಫ಼ಂಗಸ್ ಸಾಮಾನ್ಯವಾಗಿ ಸತ್ತ ಜೀವಗಳ ಮೇಲೆ , ಹಳೆಯ ಮರದ ಕೊಂಬೆಗಳ ಮೇಲೆ ಬೆಳೆಯುತ್ತದೆ ಎಂಬುದು ಗೂಗಲ್ ಅತ್ತಿಗೆಯ ಉವಾಚ. ಉತ್ತರ ಮತ್ತು ದಕ್ಷಿಣ ಅಮೆರಿಕ, ಏಶಿಯ, ಯುರೋಪಿನ ಕೆಲ ಭಾಗಗಳು, ಆಫ಼್ರಿಕಾ ಖಂಡಗಳಲ್ಲಿ ಕಂಡುಬರುತ್ತವೆ. ಇದು ಆಶ್ರಿತ ಕೊಂಬೆಯ ಅಥವಾ ಸತ್ತ ಜೀವಿಯ ಅಂಗಾಂಶಗಳಿಂದ ಬದುಕುತ್ತದೆ.ಈ ಫ಼ಂಗಸ್ ಹಳದಿ, ಗುಲಾಬಿ, ಕಪ್ಪು, ಮತ್ತು ಕೇಸರಿ ಬಣ್ಣದಲ್ಲಿ ಕಾಣಬರುತ್ತದೆಯಂತೆ. ಇದಕ್ಕೆ Orange brain ಅಂದರೆ ಕೇಸರಿ ಮೆದುಳು ಎಂಬ ಹೆಸರೂ ಇದೆ.
ಈ ಮಾಟಗಾತಿಯ ಬೆಣ್ಣೆ ಯ ಸೌಂದರ್ಯವನ್ನು ಯಾರೂ ಸೃಷ್ಟಿ ಮಾಡಲಾಗದು ಅಲ್ಲವೇ?
Comments
Post a Comment