ಗಾರಲಪಟ್ಟಿಯ ರಾಮಕೃಷ್ಣನೂ... ಕೃಷ್ಣ ದೇವರಾಯನೂ.... ಈ ಗಾರಲಪಟ್ಟಿ ರಾಮ ಯಾರೆಂದು ಯೋಚಿಸುತ್ತಿದ್ದಿರಿ ಅಲ್ಲವೇ? ಆತ ಬೇರಾರೂ ಅಲ್ಲ, ನಮ್ಮ ತೆನಾಲಿ ರಾಮಕೃಷ್ಣ. ನಾವು ನೀವು ಎಲ್ಲರೂ ಶಾಲೆಗೆ ಹೋಗುವ ಮೊದಲಿನಿಂದಲೂ ತೆನಾಲಿ ರಾಮನ ಕಥೆಗಳನ್ನು ಕೇಳಿಯೋ ಓದಿಯೋ ಬೆಳೆದವರೇ. ಬದನೇಕಾಯಿಯ ಕಳ್ಳತನದಿಂದ ಹಿಡಿದು ಬಾವಿಯೇ ಕಳ್ಳತನವಾದ ಸಮಸ್ಯೆಗಳನ್ನೂ ಪರಿಹರಿಸುವ ಮಕ್ಕಳ ಪಾಲಿನ ಸುಪರ್ ಹೀರೋ ಈತ. ಕೃಷ್ಣದವರಾಯನ ಸಮಸ್ಯೆಗಳನ್ನು ತನ್ನ ಜಾಣತನದಿಂದ ಬಗೆಹರಿಸುವ ಈ ರಾಮನ ಪರಿ ಎಲ್ಲರಿಗೂ ಇಷ್ಟ . ತನ್ನ ವಿಶಿಷ್ಟ ಅವಲೋಕನ ಶಕ್ತಿಯಿಂದ ಈ ವಿಕಟಕವಿ ನಮ್ಮ ಜನಮಾನಸದಲ್ಲಿ ಇಂದು ಮಾಸದೆ ಬದುಕಿದ್ದಾನೆ.. ತೆನಾಲಿ ರಾಮನ ನೈಜ ಹೆಸರು ಗಾರಲಪಟ್ಟಿ ರಾಮಕೃಷ್ಣಯ್ಯ. ನಮ್ಮ ತೆನಾಲಿ ಅಲ್ಲಲ್ಲ..ಗಾರಲಪಟ್ಟಿ ರಾಮಕೃಷ್ಣಯ್ಯ ಹುಟ್ಟಿದ್ದು ಆಂಧ್ರದ ತುಮುಳೂರಿನಲ್ಲಿ. ತಂದೆ ಗಾರಲಪಟ್ಟಿ ರಾಮಯ್ಯ . ತಾಯಿ ಲಕ್ಷ್ಮಮ್ಮ. ರಾಮಯ್ಯನವರು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಯದಲ್ಲಿ ಅರ್ಚಕರಾಗಿದ್ದರು. ಆದರೆ ದುರದೃಷ್ಟವಶಾತ್ ಅವರು ರಾಮನ ಬಾಲ್ಯದಲ್ಲೇ ತೀರಿಕೊಂಡರು. ನಂತರ ರಾಮನ ಸೋದರ ಮಾವನ ಮನೆಯಾ...