ಅದು ಆಗಸ್ಟ್ ತಿಂಗಳಿನ ಸಮಯ. ಅಪ್ಪ ಮತ್ತು ನಾನು ರಾತ್ರಿ ಎಲ್ಲಿಗೋ ಹೋಗಿದ್ದವರು ಮನೆಗೆ ಹಿಂದಿರುಗುತ್ತಿದೆವು. ಕಾಡಿನ ಆ ರಸ್ತೆಯಲ್ಲಿ ಅಪ್ಪ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿ ಎಲ್ಲ ಲೈಟ್ ಗಳನ್ನು ಆಫ್ ಮಾಡಿ, ಒಂದು ಮರದ ಬುಡ ನೋಡುತ್ತಿರಲು ಹೇಳಿದರು. ನನಗೆ ಮೊದಲು ಆ ಮರವನ್ನು ನೋಡಿದಾಗ ಏನೂ ಗೊತ್ತಾಗಲಿಲ್ಲ. ಕೆಲವು ನಿಮಿಷಗಳ ನಂತರ ಅದು ಹಸಿರು ಬಣ್ಣದಲ್ಲಿ ಹೊಳೆಯಲಾರಂಭಿಸಿತು.ಫೋಟೋ ತೆಗೆಯಲು ಹೋದರೆ ಫ್ಲಾಶ್ ಲೈಟ್ ನ ಬೆಳಕಿಗೆ ಏನೂ ಕಾಣಲೆ ಇಲ್ಲ. ನಂತರ ತಿಳಿದದ್ದೇನೆಂದರೆ ಅದು ಹೊಳೆಯುವ fungus. ಇದು ಮಳೆಗಾಲದಲ್ಲಿ ನಮ್ಮ ಕಾಡುಗಳಲ್ಲಿ ಬೆಳೆಯುತ್ತದೆ ಎಂದು.
ಎಷ್ಟು ಆಶ್ಚರ್ಯವಲ್ಲವೇ? ನಾವೆಲ್ಲರೂ bioluminescence ಜೀವಿಗಳ ಬಗ್ಗೆ ಪುಸ್ತಕಗಳಲ್ಲಿಯೋ, ಅಥವಾ ಟಿವಿಯಲ್ಲೊ ನೋಡಿರುತ್ತೇವೆ. bioluminescence ಎಂದರೆ ಜೀವಿಗಳು ನೈಸರ್ಗಿಕವಾಗಿ ತಮ್ಮಲ್ಲಿ ಬೆಳಕನ್ನು ಹೊಮ್ಮಿಸಿಕೊಳ್ಳುವುದು ಎನ್ನಬಹುದು. ಇವು ಸಾಮಾನ್ಯವಾಗಿ ರಾಸಾಯನಿಕ ಕ್ರೀಯೆಯ ಕಾರಣದಿಂದಲೇ ಆಗುತ್ತವೆ. ನಾವೆಲ್ಲರೂ ಮಿಂಚುಹುಳ (firefly )ಗಳನ್ನು ನೋಡಿರುತ್ತೇವೆ. ಕೆಲವು ಜೆಲ್ಲಿ ಫಿಶ್ಗಳು, ಸಮುದ್ರ ಜೀವಿಗಳು ಸಹ ಇದನ್ನು ಬಳಸುತ್ತವೆ. ಅವು ತಮ್ಮ ಸಂಗಾತಿಯ ಹುಡುಕಾಟಕಾಗಿಯೇನೋ ಈ ಗುಣವನ್ನು ಬೆಳೆಸಿಕೊಂಡಿವೆ. ಆದರೆ ಈ fungi ಗಳು? ಇವಕ್ಕೆ ಅಂತಹ ಯಾವುದೇ ಕೆಲಸವಿಲ್ಲ. ವಿಕಾಸವಾದದ ಪ್ರಕಾರ ಇವು ಈ ರೀತಿಯ ಗುಣವನ್ನು ಬೆಳೆಸಿಕೊಳ್ಳಲು ಯಾವುದಾದರೊಂದು ಕಾರಣ ಇರಬೇಕಲ್ಲವೇ?via : newsindiaexpress |
ಈ fungi ಮೊದಲಿನಿಂದಲೂ ಮನುಷ್ಯರ ಕುತೂಹಲ ಕೆರಳಿಸಿದ್ದೇ. ಆರಿಸ್ಟೋಟಲ್ ಕೂಡಾ ಇವನ್ನು ತಾನು ನೋಡಿದ್ದಾಗಿ ಉಲ್ಲೇಖಿಸಿದದಾನಂತೆ. ಹಾಗೆಯೇ, ಮತ್ತೊಬ್ಬ ಪ್ರಾಚೀನ ಪ್ರಕೃತಿತಜ್ಞ Pliny the elder ಕೂಡಾ ಇದನ್ನು ಫ್ರಾನ್ಸ್ ನಲ್ಲಿ ನೋಡಿದ್ದಾಗಿ ಹೇಳಿದ್ದಾನೆ. ಈಗಿನ ವಿಜ್ಞಾನಿಗಳ ಪ್ರಕಾರರ ಸುಮ್ಮಾರು 71 ಜಾತಿಯ bioluminescence fungi ಈಗ ಇವೆ. ಅಂದಹಾಗೆ ನೀವು ಲೈಫ್ ಆಫ್ ಪೈ ಚಿತ್ರ ನೋಡಿದ್ದರೆ, ನಿಮಗೆ ನೆನಪಿರಬಹುದು, ಸಮುದ್ರದಲ್ಲಿ ಪೂರ್ತಿ ನೀಲಿ ಬಣ್ಣದ ಬೆಳಕು ಬರುತ್ತಿರುತ್ತದೆ. ಅವು bioluminescence plankton ಕಾರಣದಿಂದಲೇ(ಇದೆ ರೀತಿ ನೀವು ಮಲೆಯಾಳಂ ಚಿತ್ರ ಕುಂಬಳಂಗಿ ನೈಟ್ಸ್ ಎಂಬ ಚಿತ್ರದಲ್ಲಿಯೂ ಇದನ್ನು ಕಾಣಬಹುದು) ಅಷ್ಟೇಕೆ, ನಮ್ಮ ಕಾರವಾರದಲ್ಲಿಯೇ 2020 ರಲ್ಲಿ ಈ ಸಮುದ್ರದ plankton ಕಂಡುಬಂದಿತ್ತು.
ಇವೆಲ್ಲವೂ ಯಾವ ಮ್ಯಾಜಿಕ್ಕೂ ಅಲ್ಲ. ಎಲ್ಲವೂ ರಾಸಾಯನಿಕ ಕ್ರೀಯೆಯ ಪರಿಣಾಮ. ಈ fungi ಗಳಲ್ಲಿ luciferase ಎಂಬ enzyme ಇರುತ್ತದೆ. ಇದು lucifern ಎಂಬ ಮತ್ತೊಂದು ಅಣುವಿನ ಜೊತೆ ಸೇರಿದಾಗ ಬೆಳಕು ಬರುತ್ತದೆ. ಈ ಬೆಳಕು ಅಷ್ಟೊಂದೇನೂ ಪ್ರಖರವಲ್ಲ. ಬರೀ 500-530 ನಾನೋ ಮೀಟರ್ ಅಷ್ಟೇ. ಆದರೆ ಇವು ನೋಡಲು ಮಾತ್ರ ಕಾಡಿನಲ್ಲಿ ದೀಪಾವಳಿಯಿದ್ದಂತೆ ಕಾಣುತ್ತದೆ. luciferase ಇರುವುದರಿಂದ ಇದಕ್ಕೆ ಹಸಿರು ಬಣ್ಣ. ಯಾವ ರಾಸಾಯನಿಕವಿದೆಯೋ ಅದರ ಆಧಾರದ ಮೇಲೆ ಬಣ್ಣ ಬದಲಾಗುತ್ತದೆ.
ಆದರೆ ಇವು ಬೆಳಕು ಸೂಸಲು ಒಂದು ಕಾರಣ ಬೇಕಲ್ಲವೇ?ಇದಕ್ಕೆ ಉತ್ತರ ಹುಡುಕಲು 2015 ರಲ್ಲಿ ವಿಜ್ಞಾನಿಗಳು ಮೇಘಾಲಯದ ಕಾಡಿನಲ್ಲಿ ಒಂದು ಪ್ರಯೋಗ ಮಾಡಿದರು. ಇದೆ ರೀತಿಯಲ್ಲಿಯೇ ಇರುವ ಅಣಬೆಗಳನ್ನು (ನಮ್ಮ ಕಡೆ ಇರುವದು ಪಾಚಿಯ ರೀತಿ ಇರುತ್ತದೆ) ನಕಲು ಮಾಡಿ ಪ್ಲಾಸ್ಟಿಕ್ ನ ಅಣಬೆಗಳನ್ನು ಮಾಡಿದರು. ಒಂದು ಅಣಬೇಗೆ ಈ ಬೆಳಕನ್ನು ಎಲ್ಈಡಿ ಲೈಟ್ ಮೂಲಕ ಕೊಟ್ಟು ಅದರ ಬಳಿ ಅಂಟಿನ ಮುದ್ದೆಯನ್ನು ಹಚ್ಚಿದರು. ಒಂದು ರಾತ್ರಿ ಕಾಡಿನಲ್ಲಿ ಇದನ್ನು ಇತ್ತು ನೋಡಿದಾಗ, ಬೆಳಕು ಇದ್ದ ಅಣಬೆಗೆ ಹೆಚ್ಚು ಕೀಟಗಳು ಆಕರ್ಷಿತವಾಗಿದ್ದವು. ಬೆಳಕಿಲ್ಲದವು ಹಾಗೆಯೇ ಇದ್ದವು. ಇವು ಅಣಬೆಯ ಬೀಜ ಪ್ರಸಾರಕ್ಕೆ ಬರಬಹುದೇನೋ ಎಂದು ನಂಬಿದ್ದಾರೆ.ಭಾರತದಲ್ಲಿ ಪಶ್ಚಿಮ ಘಟ್ಟ, ಪೂರ್ವ ಘಟ್ಟಗಲ್ಲಿ ಇದು ಕಂಡುಬಂದಿದೆಯಂತೆ.
PHOTO HTTP://STEVEAXFORD.SMUGMUG.COM
ಹಾಗಾದರೆ ನಮ್ಮ ಕಾಡಿನಲ್ಲಿರುವವು ಬೆಳಕು ಚೆಲ್ಲುವುದು ಇದೆ ಕಾರಣಕ್ಕೆ? ಸರಿಯಾಗಿ ಗೊತ್ತಿಲ್ಲ. ವಿಚಿತ್ರಯವೆಂದರೆ ಮರದ ಬೇರುಗಳಲ್ಲಿ ಇರುವ mycelium fungi ಕೂಡ ಮಣ್ಣಿನ ಅಡಿಯಲ್ಲಿ ಇದೆ ರೀತಿ ವರ್ತಿಸುತ್ತದೆಯಂತೆ. ಇದರ ಉತ್ತರ ಇನ್ನೂ ದೊರೆತಿಲ್ಲ. ಕೆಲವು ವಿಜ್ಞಾನಿಗಳು ಹೇಳುವುದೇನೆಂದರೆ ಇವು ಎಲ್ಲವೂ ಬೇರೆ ಬೇರೆ ಕಾರಣಗಳಿಗಾಗಿಯೇ ಬೆಳಕು ಹೊಮ್ಮಿಸುವ ಹಾಗೆ ರೂಪುಗೊಂಡಿವೆ ಎಂದು.
ನಾನು ಈ fungi ಗೆ radium ಪಾಚಿ ಎಂದು ಕರೆಯುತ್ತಿದೆ. radium ಹಾಗೆಯೇ ಹೊಳೆಯುತ್ತವೆಯಲ್ಲ ಅದಕ್ಕೆ. ಅಂದಹಾಗೆ ನನಗೊಂದು ಅನುಮಾನ : ಕೊಳ್ಳಿದೆವ್ವ ಕಾದಲ್ಲಿ ಕೊಳ್ಳಿ ಹಿಡು ಓಡಾಡುತ್ತದೆ ಎನ್ನುತ್ತಾರಲ್ಲ, ಆ ಕೊಳ್ಳಿದೆವ್ವ ಇದೇ ಆಗಿರಬಹುದೆ? ನನಗಂತೂ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ತಿಳಿಸಿ.
Wow Vanya!!! Bioluminescence is soo intriguing! I really learnt a lot from your post! I am surely going to be doing more research on it ;)
ReplyDeleteHave a wonderful day! :)
Thanks Maith!
DeleteWow amazing post.
ReplyDeleteThanks Adarsh
Delete