Skip to main content

ಎಲ್ಲಿಂದಲೋ ಬಂದವರು !

  ಯಾವುದೋ ದೂರದೇಶದಿಂದ ಬಂದು ನಮ್ಮವರಲ್ಲಿ ಒಂದಾಗಿ ನಮ್ಮವರಂತೆ ಇದ್ದು ಮರಳಿದವರು ಹಲವರಿದ್ದಾರೆ. ನಮ್ಮ ಮನೆಗೆ  ಹೀಗೆ ಬರುವ ಹಲವಾರು ವಿಧ್ಯಾರ್ಥಿಗಳು, ಪ್ರವಾಸಿಗರು, ಸಂಶೋಧಕರು ಮುಂತಾದವರಲ್ಲಿ ಹಲವರು ನಮ್ಮವರಲ್ಲಿಯೇ ಒಂದಾಗಿದದು ನಮ್ಮವರೇ ಎನಿಸುವಷ್ಟು ಆಪ್ತರಾಗಿರುವವರೂ ಇದ್ದಾರೆ. ಅಂತವರಲ್ಲಿ ಕೆಲವರ ಬಗ್ಗೆ  ಇಲ್ಲಿ ಸ್ವಲ್ಪ ಮಾಹಿತಿ ಇದೆಯಷ್ಟೆ. 

Photo by Sayan Nath on Unsplash
Lisa Andresen

ಈಕೆ ನಮ್ಮ ಮನೆಗೆ ಬಂದಿದ್ದು ತನ್ನ m.sc  thesisನ ಕೆಲಸಕ್ಕಾಗಿ ಭಾರತಕ್ಕೆ ತನ್ನ ಸಬಾಟಿಕಲ್ ಗಾಗಿ ಮೊದಲೂ  ಬಂದಿದ್ದ ಇವಳು ಕುಂದಾಪುರದಲ್ಲಿ ಇದ್ದಿದ್ದಳು.  ಬಂದಿದ್ದು 2018 ರ ಅಂತ್ಯದಲ್ಲಿ  ಅಂದರೆ ಡಿಸೆಂಬರ್ ಸಮಯದಲ್ಲಿ. ಇಂದಿಗೂ ನಮ್ಮ ಕುಟುಂಬದ ಜೊತೆ ಹೆಚ್ಚು ಸಂಪರ್ಕದಲ್ಲಿರುವವರಲ್ಲಿ ಲೀಸಾ ಕೂಡಾ ಒಬ್ಬಳು. ಇವಳು ಬಂದ ಸಮಯದಲ್ಲಿ ಊರಲ್ಲಿ ಯಕ್ಷಗಾನ , ತಾಳಮದ್ದಳೆಯ ಸಮಯ. ಶಾಲೆಯಲ್ಲಿ ಕ್ರಿಸ್ಮಸ್ ದಿನವೇ ಗ್ರಾಮೋತ್ಸವ ಹಾಗೂ  ಕಲಿಕೋತ್ಸವವೂ ಇತ್ತು. ಅಂದು  ಎಲ್ಲರ ಜೊತೆಗೂ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದಳು. ಮೋಜೀನ ಆಟದ ಸ್ಪರ್ಧೆಯೊಂದರಲ್ಲಿ  ಊರಿನವರ ಪರವವಾಗಿ ಆಟವಾಡಿ ಒಂದು ಬಹುಮಾನವನ್ನೂ ಗೆದ್ದುಕೊಂಡಿದ್ದಳು. ಈಗಲೂ ಕ್ರಿಸ್ಮಸ್ ದಿನದಂಡು ನಮಗೆ  ಒಂದು ಪತ್ರದೊಂದಿಗೆ ಏನಾದರೂ chocolate ಅಥವಾ ಮತ್ತೇನಾದರೂ ಉಡುಗೊರೆಯನ್ನು ಕಳಿಸಕೊಡುತ್ತಾಳೆ. ಅವಳ ತಂಗಿಯರ ಜೊತೆಗೆ ಆಗಾಗ ಪತ್ರ ವಿನಿಮಯವೂ ಆಗುತ್ತಿರುತ್ತದೆ.

    ನಮಗೆ ligretto ಎಂಬ ಹೊಸ ಆಟವನ್ನು ಪರಿಚಾಯಿಸಿದವಳು ಇವಳು .ಈಗಲೂ ಇದು ನನಗೆ ಮೆಚ್ಚಿನ ಆಟ. ನಂತರ ಮತ್ತೆ ಕುಂದಾಪುರಕ್ಕೆ ಹೋದಾಗ ನಮ್ಮೂರಿನ ಗ್ರಾಮೋತ್ಸವಾದ ಫೋಟೊಗಳನ್ನು ಪೋಸ್ಟ್ನಲ್ಲಿ  ಕಳಿಸಿದ್ದಳು. ಅವಳು ಭಾರತದಲ್ಲಿ ಓಡಾಡಿರುವಷ್ಟು, ನಾವೂ ಸಹ ಓಡಾಡಿದಲ್ಲವೇನೋ! ಅಮ್ಮನೊಂದಿಗೆ ಸೇರಿ ಕ್ರಿಸ್ಮಸ್ ನಂದು ginger bread ಮಾಡಿದ್ದಳು. ಒಮ್ಮೆ, ನನಗೆ ನಿಶಾಚರಿ ಪ್ರಾಣಿಗಳ ಮಂಡಲ ಕಲರಿಂಗ್ ಬುಕ್ ಕೊಟ್ಟಿದ್ದಳು. ನಂತರ ವಾಪಸು ಜರ್ಮನಿಗೆ ಹಿಂತಿರುಗಿದ ನಂತರ ಬೆಂಡೆಕಾಯಿ ಪಲ್ಯ, ರೋಟಿಗಳನ್ನು ಮಾಡಿ ನಮಗೆ ಫೋಟೋ ಕಳಿಸಿದ್ದಳು. ನಮಗೆ ಅತ್ಯಂತ ಆಪ್ತವಾಗಿರುವ ವಿದೇಶಿಗರಲ್ಲಿ ಲೀಸಾ ಕೂಡಾ ಒಬ್ಬಳು.

swedish pepper coker made by my mother and Lisa

ಅದೇ ರೀತಿ ನಾನು 5-6 ವರ್ಷದವಳಿದ್ದಾಗ ಬಂದವರಲ್ಲಿ ಸೋಫಿ ಕೂಡಾ ಒಬ್ಬಳು. ಈಕೆಯೂ ಜರ್ಮನಿಯವಳೆ. ನನಗೆ choco butter , play dough ಗಳನ್ನು ಪರಿಚಯಿಸಿದವಳು. ಜೊತೆಗೆ ನನ್ನ ಮೊದಲ ಇಂಗ್ಲೀಶ್ ಪುಸ್ತಕವೂ ಇವಳು ಕೊಟ್ಟಿದ್ದೆ! ಅವಳು ಕೊಟ್ಟ Alice in the wonderland picture book ಈಗಲೂ ನನ್ನ ತಮ್ಮ ಓದುತ್ತಾನೆ.

ನಮ್ಮನೆಗೆ ಬಂದವರಲ್ಲಿ ವಿಧ್ಯಾರ್ಥಿಗಳು ಹಾಗೂ ಸಂಶೋಧಕರೆ ಹೆಚ್ಚು, ಆದರೆ ಅವರೆಲ್ಲರೂ ನಮಗೆ ಅತ್ಯಂತ ಆಪ್ತರಾಗಿದ್ದವರೆ. ಅಪ್ಪನ ಸಹಪಾಟಿಯಾಗಿದ್ದ ಚೀನಾದ ಹರಾನ್ ಎಂಬಾಕೆ ನಮ್ಮ ಮನೆಗೆ ನಾನು ಚಿಕ್ಕವಳಿದ್ದಾಗ ಬಂದಿದ್ದಳು. ಇವಳೂ ಸಹ ನಮಗೆ ಅತ್ಯಂತ ಆಪ್ತರಾಗಿರುವವರಲ್ಲಿ ಒಬ್ಬಳು. ಮೊದಲು ಬಂದಾಗ ನಮ್ಮ ಬಾಲೀವುಡ್ ಚಿತ್ರಗಳನ್ನು ನೋಡಿದ್ದ ಈಕೆ ಆ ಚಿತ್ರಗಳಲ್ಲಿನ ನೃತ್ಯ ನೋಡಿ , ಭಾರತದಲ್ಲಿ ದಿನಾ ನೃತ್ಯ ಮಾಡುತ್ತಾರೆ ಎಂದು ಭಾವಿಸಿದ್ದಳು! ಜೊತೆಗೆ ನಮ್ಮ ಜೊತೆ ಹತ್ತಿರದ ಪೇಟೆಗೆ ಹೂದಾಗ ಬೈಕ್ ನಿಂದ ಎಲ್ಲರೂ ಒಟ್ಟಿಗೆ ಬಿದ್ದದ್ದು,ಹೀಗೆ ಹಲವಾರು ಸವಿನೆನಪುಗಳಿವೆ.

ಇನ್ನೊಬ್ಬಳು ತಾಯ್ದಾ.ಈಕೆ ಕ್ರುವೇಶಿಯದವಳು . ಇವಳು ಬಂದಿದ್ದು ನಾನು 2011 ರಲ್ಲಿ . ಗೆರಮಣಿಯಲ್ಲಿ ಅಪ್ಪನ ಸಹಪಾಟಿಯಾಗಿದ್ದವಳು. ಇತ್ತೀಚೆಗೆ (ಕೋರೋನಾ ಬರುವ ಮುಂಚೆಯೇ) ಒಂದು ಪತ್ರ ಬರೆದಿದ್ದಳು. ಜೊತೆಗೆ ಚಾಕ್ಲೆಟ್ ಗಳನ್ನೂ ಕಳಿಸಿದ್ದಳು. ನಿಜ ಹೇಳಬೇಕೆಂದರೆ, ನನಗೆ ಪತ್ರ ಗಳ ಬಗ್ಗೆ ಆಸಕ್ತಿ ತಂದಿದ್ದೇ ಇಂತಹ ಪತ್ರಗಳಿಂದ!


ಇನ್ನೊ ಹಲವಾರು ಜನರಿದ್ದಾರೆ.ಜರ್ಮನಿಯ ಲೀನ ಮತ್ತು ಸೆಬಾಸ್ಟಿಯನ್, Alyosha.. ಹೀಗೆ ಇನ್ನೂ ಹತ್ತಾರು ಜನರಿದ್ದಾರೆ. ಕೋರೋನಾ ಇಲ್ಲದಿದ್ದರೆ ಈ ಲಿಸ್ಟ್ ಗೆ ಇನ್ನು ಹೆಚ್ಚು ಜನ ಸೇರಬಹುದಿತ್ತು.



 


Comments

  1. Wow!!! I loved this post Vanya! It must've been so fun to interact with people from other countries and learn new things :)
    And those cookies look very delicious!
    Hopefully, after this pandemic everything will come back to normal.

    ReplyDelete
  2. This was so fun to read, Vanya!! Those look so delicious! Great post :))

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ