Skip to main content

ಸಸ್ಯಲೋಕದ ಮಾಂಸಹಾರಿಗಳು!

    ಮೊನ್ನೆ  ಗದ್ದೆ ಬಯಲಿಗೆ ಹೋಗಿದ್ದೆ. ಗದ್ದೆಯ ತುಂಬೆಲ್ಲ ಅಲ್ಲಲ್ಲಿ  ಸರಿಯಾಗಿ  ಕಣ್ಣಿಗೆ ಕಾಣದಷ್ಟು ಚಿಕ್ಕ  ಕೆಂಪು ಕೆಂಪು ಚುಕ್ಕಿ! ಅಷ್ಟಕ್ಕೂ ನಮ್ಮ ಗದ್ದೆಗೇನು ಸಿಡುಬು ಬಂದಿಲ್ಲ, ಅವು Drosera ಗಿಡಗಳು. ಹತ್ತಿರದಿಂದ  ನೋಡಿದರೆ ಹೂವಿನ ಹಾಗೆ ಕಾಣುತ್ತದೆ. ಕೆಲವೊಮ್ಮೆ ನನಗೆ ಆಗ ತಾನೇ ತೊಳೆದಿಟ್ಟ ಚಮಚಗಳನ್ನು ವೃತ್ತಾಕಾರವಾಗಿ ಜೋಡಿಸಿಟ್ಟಂತೆ  ಕಾಣುತ್ತವೇ.

ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ನಮ್ಮ ಪುಸ್ತಕದಲ್ಲಿ ಒಂದು ವಿಚಿತ್ರವಾದ ಬೋನಿನಂತಿದ್ದ ಒಂದು ಗಿಡ ಇತ್ತು. ಅದನ್ನು Venus Flytrap ಎನ್ನುತ್ತಾರೆ. ಇದು ಒಂದು ಕೀಟಾಹಾರಿ ಸಸ್ಯ ಎಂದೆಲ್ಲಾ ಉದ್ದುದ್ದ ಬರೆದುಕೊಂಡಿದ್ದ ಆ ಗಿಡದ ಬಗ್ಗೆ ಅದೇನು ಆಸಕ್ತಿ ಇರಲಿಲ್ಲ. ನಾನು  ಅದೇ ಸಮಯದಲ್ಲಿ ನಮ್ಮ ಮನೆಯ ಬೆಳೆ  ಕಟಾವಾಗಿ ಮುಗಿದಿದ್ದ  ಗದ್ದೆಯಲ್ಲಿ ಆಟ ಆಡಲು ಹೋಗುತ್ತಿದ್ದೆ. ಒಂದು ದಿನ ಆಡುತ್ತಿರುವಾಗ ನೆಲದ ಮೇಲೆ ಕೆಂಪು ಹೂವೊಂದು ಬಿದ್ದಂತೆ ಕಂಡಿತು.  ಅದೇನೆಂದು ಬಗ್ಗಿ ನೋಡಿದೆ. ಅದು ಹೂವಲ್ಲ, ಅಲ್ಲಿಯೇ ಇದ್ದ ಒಂದು ಗಿಡ ವಾಗಿತ್ತು. ಅದರ ಮೇಲೆ ಇಬ್ಬನಿ ಬಿದ್ದಂತೆ ಹನಿಗಳು ಬಿದ್ದಿದ್ದವು. ಕೊನೆಗೆ ಹುಡುಕಿ ನೋಡಿದಾಗ ಅದು Drosera ಎಂದು ತಿಳಿಯಿತು.ಇನ್ನೊಮ್ಮೆ ನಾನು 6 ನೇ ತರಗತಿಯಲ್ಲಿದ್ದಾಗ  ಬೆಳಿಗ್ಗೆ ಶಾಲೆಗೆ ಹೋದಾಗ ಅಲ್ಲಿನ ಗಾರ್ಡನ್ ನಲ್ಲಿ ಎಲ್ಲಾ ಮಕ್ಕಳೂ ಗುಂಪು ಗೂಡಿದ್ದನ್ನು ನೋಡಿ ನಾನು ಅಲ್ಲಿಗೆ ಹೋದೆ. ಹೋಗಿ ನೋಡಿದರೆ ಅಲ್ಲಿ ಹಸಿರು ಚೀಲಗಳನ್ನು ಹೊಂದಿದ್ದ ಗಿಡವೊಂದು ಕಂಡಿತು.ಎಲ್ಲರೂ ಹೂಜಿ ಗಿಡ ಎಂದು ಹೇಳುತಿದ್ದರು. ಅದರಲ್ಲಿ ಕೆಲವರು ಇರುವೆ, ನೊಣಗಳನ್ನು ಹಿಡಿದು ಹಾಕುತ್ತಿದ್ದರು. ನಾನು ಒಂದೆರಡು ಗೆದ್ದಲು ಗಳನ್ನು ನೈವೇದ್ಯ ಕೊಟ್ಟೆ.😉

ಈ ಬಾರಿ ಕೋರೋನಾ ಲಾಕ್ಡೌನ್ ನಲ್ಲಿ ಅಪ್ಪ ಒಂದಿಷ್ಟು ಹೂಜಿ ಗಿಡ ಅಂದರೆ Pitcher Plant ಗಳನ್ನು ತರಿಸೋಣ ಎಂದು ಒಂದು ಗಿಡವನ್ನು ಎಲ್ಲಿಂದಲೋ ತರಿಸಿದರು.ಇವಕ್ಕೆ ಬರೀ cocopeat ಮಾತ್ರ ಸಾಕು. ಗೊಬ್ಬರ,ಮಣ್ಣು ಏನೂ ಬೇಡ. 
.ಕೀಟಾಹಾರಿ ಸಸ್ಯಗಳು ಸಾಮಾನ್ಯವಾಗಿ ತಮಗೆ ಪೋಷಕಾಂಶ ಗಳನ್ನು ಒದಗಿಸಿಕೊಳ್ಳಲು ಈ ರೀತಿ ಕೀಟಗಳನ್ನು ಭಕ್ಷಿಸುತ್ತವೆ. ಆದರೆ ನಾವು ಈ cocopeat ಬದಲು  ಅದಕ್ಕೆ ಬೇಕಾದ  ಪೋಷಕಾಂಶಗಳನ್ನು ಒದಗಿಸುವ ಗೊಬ್ಬರ ಕೊಟ್ಟರೆ ಹೂಜಿ  ಗಿಡದ ಪೋಷಕಾಂಶದ ಅಗತ್ಯತೆ ಪೂರ್ಣವಾಗುತ್ತದೆಯಲ್ಲ , ಆಗ ಅದು ಕೀಟ ಭಕ್ಷಣೆ ಬಿಟ್ಟು ಸಾಧಾರಣ ಗಿಡವಾಗಬಲ್ಲದೆ? 
ನಾವು ಒಂದು ಪ್ರಯೋಗ ಮಾಡಿದೆವು. 
 ಚಿಗುರುತ್ತಿರುವ pitcher plant 
 ಆ ಹೂಜಿಗಿಡ ಸ್ವಲ್ಪ ದೊಡ್ಡದಾದ ಮೇಲೆ ಮತ್ತೊಂದು ಗಿಡ ತರಿಸಿ, ಆ ಗಿಡವನ್ನು ಗೊಬ್ಬರ, ಮಣ್ಣು ಎಲ್ಲವೂ ಸರಿಯಾಗಿದ್ದ  ಪಾಟ್ ನಲ್ಲಿ ಹಾಕಿ ಬೆಳೆಸಿದೆವು. ವಿಚಿತ್ರವೆಂದರೆ ನಮ್ಮ ಅನುಮಾನ ಸರಿಯಾಗಿಬಿಟ್ಟಿತು. ಆ ಗಿಡವು ಹೂಜಿ ಆಕಾರದ ಚೀಲಗಳನ್ನು ಚಿಗುರಿಸಲೆ ಇಲ್ಲ! ಒಂದು ತಿಂಗಳಲ್ಲಿ ವೆಜಿಟೀರಿಯನ್ ಆಗಿ ಇದು ಕೀಟಾಹಾರಿ ಸಸ್ಯವೇ ಅಲ್ಲ ಎನ್ನುವ ರೀತಿ ಕಾಣುತ್ತಿತ್ತು. 
 ನಾನು ಇದು ಕೀಟ ಹಿಡಿಯುವುದನ್ನು ಬಿಡಬಹುದು ಎಂದು ಭಾವಿಸಿದ್ದೆ, ಈ ರೀತಿ ತನ್ನ ಒಂದು ಭಾಗವನ್ನೇ ಬಿಟ್ಟು ಬಿಡುತ್ತದೆ ಎಂದು ಯೋಚಿಸಿಯೂ ಇರಲಿಲ್ಲ. 
Pitcher plant 
 ಈಗ ಈ ಗಿಡ  ನಮ್ಮ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್!. ಬಂದವರೆಲ್ಲರಿಗೂ,ಅದರಲ್ಲಿಯೂ ಮಕ್ಕಳಿಗೆ ತುಂಬಾ ಇಷ್ಟ.ಮಳೆಗಾಲದಲ್ಲಿ ಉಂಬಳಗಳನ್ನು ತೆಗೆದು  ಹಾಕಲು ಉಪ್ಪು,ಸುಣ್ಣವನ್ನು ಇಡುವುದು  ಈಗ ನಿಂತುಹೋಗಿದೆ. ಎದುರಿಗೆ ಇರುವ pitcher plant ನ ಚೀಲಕ್ಕೆ ಹಾಕಿದರೆ ಆಯ್ತು. ಮುಂದಿನದು ಅದೇ ನೋಡಿಕೊಳ್ಳುತ್ತದೆ. ಒಮ್ಮೆಯಂತೂ ಒಂದು ಪುಟ್ಟ ಕಪ್ಪೆ ಅದರಲ್ಲಿ ಸಿಕ್ಕಿಬಿದ್ದರೂ ಅದು ಹೇಗೋ ತಪ್ಪಿಸಿಕೊಂಡು ಬಂದಿತ್ತು.
venus flytrap 
  ಒಂದೆರಡು ತಿಂಗಳ ನಂತರ ಮತ್ತೆ   venus flytrap ಗಿಡವನ್ನು ತರೋಣ   ಎಂದು ನಿರ್ಧಾರವಾಯಿತು. ನನ್ನ 6     ವರ್ಷದ ತಮ್ಮ  ಫೋಟೊಗಳನ್ನು     ನೋಡಿ ಇದು ತನ್ನ ಕೈಯನ್ನು   ತಿನ್ನುವಷ್ಟು ದೊಡ್ಡದು ಎಂದು ಭಾವಿಸಿದ್ದ. ಏನಾದರೂ ಹಟ ಮಾಡಿದರೆ venus flytrap ತರವನ? ಎಂದರೆ ಸಾಕು.ಯಾವ ಗುಮ್ಮ ನೂ ಬೇಡ.ಬಂದ ಮೇಲೆ ಗೊತ್ತಾಗಿದ್ದು.. ಇದು ಕೈ ಅಲ್ಲ, ಕಿರುಬೆರಳನ್ನು ತಿನ್ನಲೂ ಆಗದಷ್ಟೂ ಚಿಕ್ಕದು ಎಂದು. 

 ಚಿಕ್ಕ ಇರುವೆಯೊಂದು ಸಿಹಿಯ ಆಸೆಗೆ ಮರುಳಾಗಿ ಕೆಂಪು- ಹಸಿರು ಬಣ್ಣದ ಪುಟ್ಟ ಬಾಯಿಯಂತಿರುವ ಸಸ್ಯವೊಂದರಲ್ಲಿ ಬೀಳುತ್ತದೆ. ಆ ಬಾಯಿ ಲಬಕ್ಕನೆ ಶಿಕಾರಿ ಮಾಡಿದಂತೆ ತನ್ನ ಬಾಯಿಯನ್ನು ಮುಚ್ಚಿಬಿಡುತ್ತದೆ...  

ಇದು ಯಾವುದೋ ಸಿನೆಮಾದ ದೃಶ್ಯವಲ್ಲ, ಪರಿಸರದಲ್ಲಿ ನಡೆಯುವ ನಿತ್ಯದ ಘಟನೆ. 

  ಚಳಿಗಾಲದಲ್ಲಿ ಇದು hibernation ಗೆ ಹೋಗುತ್ತದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಮನೆಯ ಚಳಿ ಇದಕ್ಕೆ ತಾಗಲೇ ಇಲ್ಲ!  ಬಂದ ಮೊದಲ  ದಿನ ನಾನು ಸುಮ್ಮನೆ ಅದರ ಬಾಯಿಯೊಳಗೆ ಒಂದು ಚಿಕ್ಕ ಎಲೆಯನ್ನು  ಹಾಕಿದೆ. ಅದು ಪಟಕ್ಕನೆ ಬಾಯಿ ಮುಚ್ಚಿಕೊಂಡಿತು. ಇಡೀ ದಿನ ಹಾಗೆಯೇ ಇತ್ತು. ಇದರ ಸಹಜ ಗುಣ ಇದು. ಒಮ್ಮೆ ತಿಂದರೆ ಆಯಿತು ಇಡೀ ದಿನ ಬಾಯಿ ಮುಚ್ಚಿಕೊಂಡೆ ಇರುತ್ತದೆ. ಪಾಪ,ಹೀಗೆ ತುಂಬಾ ಸರಿ ಬಾಯಿ ಮುಚ್ಚಿಕೊಂಡು ಅರೆಹೊಟ್ಟೆಯಲ್ಲಿ ದಿನ ಕಳೆದಿದೆ. ಅಂದಿನಿಂದ ದಿನಾ ಅದಕ್ಕೆ ಭರ್ಜರಿ ಸ್ಪೂನ್ ಫಿಡಿಂಗ್ ನಡೆಯಿತು. ಎಲ್ಲಿ, ಯಾವ ಕೀಟ ಕಂಡರೂ ಹಿಡಿದುಕೊಂಡು ಬಂದು ಇದರ ಬಾಯಿಗೆ ತುರುಕುತಿದ್ದೆವು. ಈಗ Pitcher Plant ಆಕರ್ಷಣೆ ಕಡಿಮೆ.ಇದರ ಪಾಟನ್ನು ನೀರು ತುಂಬಿದ ಇನ್ನೊಂದು ಪಾತ್ರೆಯೊಳಗೇ ಇಟ್ಟಿದ್ದೇವೆ. ತೇವಾಂಶ ತುಂಬಾ ಬೇಕಲ್ಲ ಇದಕ್ಕೆ.
     ಈಗ ನಮ್ಮನೆಯಲ್ಲಿ ಮೂರು ಜಾತಿಯ Pitcher plantಗಳು, ಒಂದು venus flytrap ಇವೆ. ನಮ್ಮ ನಡುವೆಯೇ drosera ದಂತಹ ಅದೆಷ್ಟು ಕುತೂಹಲಕಾರಿ ಕೀಟಾಹಾರಿ ಸಸ್ಯಗಳಿವೆಯೋ ಯಾರಿಗೆ  ಗೊತ್ತು? ಹುಡುಕಿದರೆ ಇನ್ನೆಷ್ಟು ಸಿಗಬಹುದೋ........


Comments

  1. Hi Vanya! Love the new header!! Great post—I've seen pitcher plants before, and have always wanted to know how to grow one!

    ReplyDelete
    Replies
    1. Thanks Maya! Yup, they're so amazing and easy to grow.

      Delete
  2. This was such an illuminating post Vanya! Carnivorous plants are fascinating!
    BTW, Your new header is gorgeous!! 😊
    Have a great day!

    ReplyDelete
    Replies
    1. Thanks Maith! I agree, they are sooo fascinating.

      Delete
  3. great post !! obsessed with your website (so pretty)
    check my blog here: https://lalaworldofsmeeha.blogspot.com/
    found your blog as you left a comment on mine

    ReplyDelete
    Replies
    1. Thanks a Smeeha. Even I love your blog too. Thanks for the support

      Delete
  4. ಲಾಕ್ ಡೌನ್ ವೇಳೆ ಹಾಗೆ ಸುಮ್ಮನೆ ಹಳೆಯ ದಿನಗಳಲ್ಲಿ ನಮ್ಮ ಗದ್ದೆಗಳಲ್ಲಿ ನಾವು ನೋಡುತ್ತಿದ್ದ ಹಾಗೂ ಅದರೊಟ್ಟಿಗೆ ಆಟವಾಡುತ್ತಿದ್ದ ಈ ಸಸ್ಯಗಳು ನೆನಪಿಗೆ ಬಂದು ಈ ಸಸ್ಯಗಳ ಬಗ್ಗೆ ಗೆಳೆಯನೊಂದಿಗೆ ಮಾತಾಡುತ್ತ ನೆನೆಪಿಗೆ ಬಂತು ಅದಕ್ಕಾಗಿ ಹುಡುಕಿದಾಗ ಅದೇ ಸಸ್ಯದ ವಿವರ ನಿಮ್ಮಿಂದ ವಿವರವಾಗಿ ಸಿಕ್ಕಿತು ನಿಮಗೆ ಧನ್ಯವಾದ 🙏🏾

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...