Skip to main content

ನಿಸರ್ಗದ ಆರ್ಕಿಟೆಕ್ಟ್ ಗಳು!


ಆವತ್ತು ಸುಮ್ಮನೆ ಸಂಜೆ ಬಲ್ಪ್ ಉರಿಸಿಕೊಂಡು ಮನೆಯಲ್ಲಿ ಕುಳಿತಿದ್ದೆ. ಬಲ್ಪ್ ಉರಿಸಿದ ಹತ್ತೇ ನಿಮಿಷದಲ್ಲಿ ಹಾತೆ ಹುಳುಗಳ ಹಾವಳಿ ಶುರುವಾಯಿತು.  ಕೊನೆಗೆ ಅವುಗಳ ಉಪಟಳ ಹೆಚ್ಚಾಗಿ ಲೈಟ್ ಅನ್ನೇ ಬಂದುಮಾಡಿಬಿಟ್ಟೆ. ಸ್ವಲ್ಪ ಹೊತ್ತು ಬಿಟ್ಟು ನೋಡಿದರೆ ಸುಮಾರು ಒಂದು ಬುಟ್ಟಿಯಷ್ಟು ಹುಳುಗಳು ಸತ್ತು ಬಿದ್ದಿವೆ! ಸೂಕ್ಷ್ಮ ವಾಗಿ ನೋಡಿದಾಗ ತಿಳಿಯಿತು, ಇವು ಬೇರೆ ಜಾತಿಯ ಹುಳುಗಳಲ್ಲ ನಾವೆಲ್ಲರು ಬೈದುಕೊಳ್ಳುವ ವರಲೆಗಳೆ ಎಂದು. ವರ್ಷವಿಡಿ ರೆಕ್ಕೆಯಿಲ್ಲದೇ ಹುತ್ತದಲ್ಲಿಯೇ ಇರುವ ವರಲೆಗಳು ಮಳೆಗಾಲದಲ್ಲಿ ಮಾತ್ರ ಅದು ಏಕೆ ರೆಕ್ಕೆ ಬಂದು   ಹೊರಗೆ ಬರುತ್ತವೆಯೋ?  ಬಹುಶಃ ಇವು ಒಂದು ಹುತ್ತದಿಂದ ಮತ್ತೊಂದು ಜಾಗಕ್ಕೆ ಪಡೆಯನ್ನು ಸಾಗಿಸುವ ಕೆಲಸ ಇರಬೇಕು. ಆದರೂ ಬೆಳಕಿಗೆ ಆಕರ್ಶಿತವಾಗಿ ಬರುವುದೇಕೆ? ಅದೇಕೆ ಅವು ಮಳೆಗಾಲದಲ್ಲಿಯೇ ಹೊರಬೀಳಬೇಕು?

ಚಿಕ್ಕ ಮಕ್ಕಳು ಹಠ ಮಾಡಿದರೆ "ಎಂತಾ ವರಲೆ ಹಿಡಿತ್ಯಾ" ಎಂದು ಬೈಯುವ ವರೆಗು ಈ ವರಲೆಗಳು  ನಮ್ಮ ಜೀವನದಲ್ಲಿ ' ಹಾಸು ಹೊಕ್ಕಿವೆ'. ಅಚ್ಚ ಕನ್ನಡದಲ್ಲಿ ಇದನ್ನು ಗೆದ್ದಲು ಎಂದು ಕರೆದರೂ ನಮ್ಮ ಕಡೆ ವರಲೆ ಎಂದೇ ಹೇಳುವುದರಿಂದ, ನಾನು ಈ ಲೇಖನದುದ್ದಕ್ಕೂ ವರಲೆ ಎಂದೇ ಬಳಸುತ್ತೇನೆ. ಇವುಗಳ ಹುತ್ತವನ್ನು ಮುರಿದು ಹಾಕಿ, ಸ್ವಲ್ಪ ಸಮಯದ ನಂತರ ಬಂದು ನೋಡಿದರೆ ಹುತ್ತ ಎಂದೂ ಮುರಿದೇ ಇರಲಿಲ್ಲವೇನೊ ಎನ್ನುವ ಮಟ್ಟಿಗೆ ಮತ್ತೆ ಕಟ್ಟಿಬಿಡುವ ಚಾಲಾಕಿಗಳು ಈ ವರಲೆ.

ವರಲೆಗಳ  ಕಥೆ ವಿಶಿಷ್ಟವಾದದ್ದು ಹಾಳುಬಿದ್ದ ಮರದ ಕಂಬಕ್ಕೆ, ಹುತ್ತದಲ್ಲಿ ಇರುವ ಪುಟ್ಟ ವರಲೆಗಳೇ ಮುಂದೆ ಬೆಳೆದ ಮೇಲೆ ರೆಕ್ಕೆ ಬಂದು ಹಾರಾಡಲು ಶುರು ಮಾಡುತ್ತವೆ.
ಆದರೆ ಏಕೆ ಹಾಗೆ ಮಾಡುತ್ತವೆ? 
ಈ ವರಲೆಗಳು (Termites) ವರ್ಷಕೊಮ್ಮೆ ಮಳೆಗಾಲದಲ್ಲಿ ರೆಕ್ಕೆ ಬಂದು ಒಮ್ಮೇಲೆ ಹುತ್ತದಿಂದ ಇದು ಮುಗಿಯುವುದೇ ಇಲ್ಲವೇನೊ ಎನ್ನುವ ಅಕ್ಷಯ ಪಾತ್ರೆಯಂತೆ ಪುಟುಪುಟನೆ ಹೊರಬರಲು ಪ್ರಾರಂಭಿಸುತ್ತವೆ. ಒಂದು ಕಡೆಯ ದ್ವಾರ ಮುಚ್ಚಿದರೆ ಮತ್ತೊಂದು ಕಡೆಯಿಂದ ಹೊರಗೆ ಜಿಗಿಯುತ್ತವೆ .ಆದರೆ ನಾವೆಲ್ಲರು ತೊಂದರೆಯೆಂದು ಭಾವಿಸಿರುವ ಇವು ನಿಜವಾಗಿಯು ಅತ್ಯಂತ ಉಪಯುಕ್ತ ಮತ್ತು ಭೂಮಿಯ ನೈಸರ್ಗಿಕ ಜಾಲವನ್ನು ಸರಿಯಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಒಮ್ಮೆ ನಮ್ಮ ಮನೆಯಲ್ಲಿನ ಕಬ್ಬು ಗಳು ಸಾಯುತ್ತಿದ್ದವು. ಕೊನೆಗೆ ಇದು ವರಲೆಗಳ ಕಾಟ ಇದು ಎಂದು ತಿಳಿಯಿತು. ಇನ್ನೇನು ಮಾಡುವುದು? ಮನೆಯ ಕೆಲಸದ ತಿಮ್ಮ  ತಾನು ಇದಕ್ಕೆ ಕೀಟನಾಶಕ ಹಾಕುತ್ತೇನೆ ಎಂದ. ಆದರೆ ಅಪ್ಪ ಇದನ್ನು ಒಪ್ಪಲಿಲ್ಲ. ಕೆಲ ದಿನಗಳ ಬಳಿಕ ವರಲೆ ಕಾಟ ಸಂಪೂರ್ಣ ನಿಂತುಹೋಯಿತು. ತಿಮ್ಮನನ್ನು ಕೇಳಿದಾಗ ತಾನು ಅಡುಗೆ  ಎಣ್ಣೆ ಬೆರೆಸಿದ ಅಕ್ಕಿಯನ್ನು  ಕಬ್ಬಿನ ಗದ್ದೆಯಲ್ಲಿ ಚೆಲ್ಲಿದ್ದಾಗಿಯೂ , ಅದರಿಂದ ಇರುವೆಗಳು ಬಂದು ಗೆದ್ದಲನ್ನು ತಿಂದವು ಎಂದೂ ಹೇಳಿದ. ತಿಮ್ಮನ ನಿಸರ್ಗದ ಬಗೆಗಿನ ಜ್ಞಾನ ಎಷ್ಟು ಸಂಕೀರ್ಣ ನೈಸರ್ಗಿಕ ಚಕ್ರವನ್ನೂ ಒಳಗೊಂಡಿದೆ ಎಂದು ಆಶ್ಚರ್ಯವಾಯಿತು. ಯಾವುದೋ ಕೀಟನಾಶಕಗಳನ್ನು ತಂದು ಬಳಸುವ ಬದಲು ನಿಸರ್ಗದಲ್ಲಿ ಸ್ವಾಭಾವಿಕವಾಗಿ ಇರುವ ಭಕ್ಷ್ಕಗಳನ್ನು ಅಲ್ಲಿಗೆ ತಂದರೆ ಎಷ್ಟು ಸುಲಭವಾಗಿ ಸಂಸ್ಯೆ ಬಗೆಹರಿಸಬಹುದು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಅಲ್ಲದೇ ನಾವೆಲ್ಲರು ಇವುಗಳನ್ನು ವಿನಾಕಾರಣ ಬೈದುಕೊಳ್ಳುವ ಬದಲು  ಸ್ವಲ್ಪ  ನಿಸರ್ಗದಲ್ಲಿನ ಇವುಗಳ  ಪಾತ್ರವನ್ನು ಗಮನಿಸಬಹುದಲ್ಲವೆ ?ಇಷ್ಟು ಚಿಕ್ಕ ಜೀವಿಗಳು ಭೂಮಿಯನ್ನು ಸರಿಯಾಗಿ ಇಡಲು ಸಾಧ್ಯವೇ ಎಂದುಕೊಳ್ಳಬಹುದು.ಆದರೆ ಇವು  ನೋಡಲು ಚಿಕ್ಕದಾದರೂ ಮಾಡುವ ಕೆಲಸ ಮಾತ್ರ ದೊಡ್ಡದು.

ಅಷ್ಟಕ್ಕೂ ಇವು ಮಾಡುವುದಾದರೂ ಏನು?:
ಮಳೆಗಾಲದಲ್ಲಿ ಬಿದ್ದ ಮಳೆನೀರನ್ನು  ವರಲೆ ಹುತ್ತದಷ್ಟು ಚೆನ್ನಾಗಿ ಇಂಗಿಸಿಕೊಳ್ಳುವ ಇಂಗುಗುಂಡಿ ನಾವು ಮನುಷ್ಯರ ಬಳಿ ಮಾಡುವುದು ಕಷ್ಟವೇ. ಇವುಗಳ ಅನುಕರಣೆ ಮಾಡಬಹುದಷ್ಟೆ. ಇವುಗಳ ಹುತ್ತ ನೋಡಲು‌ ಒಂದಿಷ್ಟೂ ಜಾಗ ಬಿಡದಂತೆ ಕಟ್ಟಿದಂತೇ ಕಂಡರೂ ಇದು ಮಾತ್ರ ಚಿಕ್ಕ ಚಿಕ್ಕ ತೂತುಗಳಿಂದ ತುಂಬಿರುತ್ತದೆ. ಇದೇ ತೂತುಗಳು ಗಾಳಿ ಸರಾಗವಾಗಿ ಓಡಾಡಲು ಆಗುವಂತೇ ಮಾಡುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇದು ಜೀವಿಗಳ ಶ್ವಾಸಕೋಶದ ರೀತಿಯಲ್ಲಿಯೇ ಕೆಲಸ ಮಾಡುತ್ತದೆ. ಇದು ಭೂಮಿಯ ಶ್ವಾಸಕೋಶವೇ ಸರಿ! ಹುತ್ತದ ಮೇಲೆ ಅಂದ ನೆಲದಿಂದ ಮೇಲೆ ೯೫-೧೦೫  ಡಿಗ್ರೀ ಫ಼್ಯಾರನ್ ಹೀಟ್ ಇದ್ದರೆ ಹುತ್ತದ ಒಳಗೆ ೭೭-೮೭ ಡಿಗ್ರೀ ಫ಼್ಯಾರನ್ ಹೀಟ್ ಮಾತ್ರ ಇರುತ್ತದೆ. ಇದರಷ್ಟು ಒಳ್ಳೆಯ ಏಸಿ ಯಾವ ಕಂಪೆನಿಯದ್ದು ಆಗಿರಲು ಸಾಧ್ಯವಿಲ್ಲವೇನೊ.

ಈ ಹುತ್ತದ  ಉದಾಹರಣೆಯನ್ನು ಬಳಸಿ ಜಿಂಬಾಬ್ವೆಯ ಎಸ್ಟೇಜ್ ಸೆಂಟರ್ ಎಂಬ ಕಟ್ಟಡವನ್ನು  ನಿರ್ಮಿಸಿದ್ದಾರಂತೆ. ಈ ರೀತಿ ನಿಸರ್ಗದ ಉದಾಹರಣೆಗಳನ್ನು ನೋಡಿಕೊಂಡು ತನಗೆ ಬೇಕಾದದ್ದನ್ನು ಮಾಡಿಕೊಳ್ಳುವುದಕ್ಕೆ ಬಯೋ ಮಿಮಿಕ್ರಿ  (Bio Mimicry)ಎನ್ನುತ್ತಾರೆ. ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗೆ ಇರುವಂತೇ ಹುತ್ತವನ್ನು ಇಷ್ಟು ಅದ್ಭುತ ವೇಗದಲ್ಲಿ ಕಟ್ಟುವ ವರಲೆಗಳು ನಿಜಕ್ಕೂ ಅತ್ಯಪೂರ್ವ ಜೀವಿಗಳೆ ಸರಿ.
ಈ ವರಲೆಗಳ ಹಾಗೆ ಅದ್ಭುತ ಆರ್ಕಿಟೆಕ್ಟ್ ಗಳು ಇನ್ನೂ ಹಲವಿವೆ ಅವುಗಳಲ್ಲಿ ಕೀಟ ಜಗತ್ತಿಗೆ ಸೇರಿದವು ಹೆಚ್ಚಾದರೂ, ಡ್ಯಾಮ್ ಕಟ್ಟುವ ಬೀವರ್ ಮುಂತಾದವುಗಳೂ ಇವೆ. ನಮ್ಮ ಸುತ್ತಮುತ್ತಲಿನ ಜೇನು ಹುಳ, ಇರುವೆ, ಸೌಳಿಗಳು ಎಲ್ಲವೂ ಆರ್ಕಿಟೆಕ್ಟ್ ಗಳೇ.
      ಜೇನುಹುಳಗಳನ್ನೇ ತೆಗೆದುಕೊಳ್ಳಿ, ಅವುಗಳು ಷಡ್ ಭುಜಾಕಾರದಲ್ಲಿಯೇ ಜೇನುರಟ್ಟು( honey comb) ಏಕೆ ಕಟ್ಟುತ್ತವೆ? ಚೌಕಾಕಾರದಲ್ಲಿ ಕಟ್ಟಬಹುದಿತ್ತಲ್ಲವೇ? ಹೋಗಲಿ ವೃತಾಕಾರದಲ್ಲಿ ಕಟ್ಟಬಹುದಿತ್ತಲ್ಲವೆ? ಪಂಚಭುಜಾಕರದಲ್ಲಿ ಏಕಿಲ್ಲ?


 
ಏಕೆಂದರೆ, ವೃತ್ತಗಳನ್ನು ನೋಡಿ, ಅಲ್ಲಿ ಆಕೃತಿಗಳ ಮಧ್ಯ ಚಿಕ್ಕ ಜಾಗ ಉಳಿದುಬಿಡುತ್ತದೆ.ಆಗ ಜಾಗದ ಉಪಯೋಗ ಸರಿಯಾಗಿ ಆಗುವುದಿಲ್ಲ. ನಮಗೆ ಅದು ಚಿಕ್ಕ ವಿಷಯವಾಗಿರಬಹುದು. ಆದರೆ ಜೇನುಹುಳುಗಳಷ್ಟು ಚಿಕ್ಕ ಜೀವಿಗಳಿಗೆ ಅಷ್ಟು ಜಾಗ ತುಂಬಾ ಮಹತ್ವದ್ದು. ಹೀಗಾಗಿ ವೃತ್ತ ಜೇನುಹುಳುಗಳಿಗೆ ಉಪಯುಕ್ತವಲ್ಲ.
                ಇನ್ನು ಚೌಕ ಮತ್ತು ತ್ರಿಕೋನಗಳು. ಇವು ಜಾಗ ಸರಿಯಾಗಿ ಬಳಕೆ ಮಾಡಿದರೂ ಸಹ ಹೆಚ್ಚು ಜೇನನ್ನು ತುಂಬಿಡಲು ಈ ಆಕೃತಿಗಳು ಸಹಕಾರಿಯಲ್ಲ. ಹೀಗಾಗಿ ಜೇನುಹುಳುಗಳಿಗೆ ಈ ಆಕೃತಿಗಳು ಉಪಯೋಗವಾಗುವುದಿಲ್ಲ. ಇನ್ನು ಪಂಚಭುಜಾಕೃತಿ, ಇದು ಕೂಡಾ ವೃತ್ತದಂತೆಯೇ ಮಧ್ಯದಲ್ಲಿ ಜಾಗ ಉಳಿದುಬಿಡುವಂತೆ ಮಾಡುತ್ತದೆ. 
        ಈಗ ಷಡ್ಭುಜಾಕೃತಿಯನ್ನು ನೋಡಿ, ಇದರಲ್ಲಿ ಜಾಗದ ಉಳಿತಾಯವೂ ಆಗುತ್ತದೆ. ಜೊತೆಗೆ ಹೆಚ್ಚು  ಜಾಗವೂ ಸಿಗುತ್ತದೆ. ಜೊತೆಗೆ ಒಂದೇ ಕಡೆಯಲ್ಲಿ ಚೌಕದ ವಿ‌ನ್ಯಾಸದಲ್ಲಿ ಆಗುವ ಹಾಗೆ ಒಂದೇ ಕಡೆಯಲ್ಲಿ ಭಾರ ಬಿದ್ದು   ಜೇನುಗೂಡು ಮುರಿಯುವ ಅಪಾಯವೂ ಇರುವುದಿಲ್ಲ. ಹೀಗಾಗಿ ಜೇನುಹುಳಗಳು ಬಳಸುವುದು ಷಡ್ಭುಜಾಕೃತಿಯನ್ನೇ.  ಇವೆಲ್ಲವೂ ಎಷ್ಟು ವೈಜ್ನಾನಿಕವಾಗಿದೆಯಲ್ಲವೇ? ಮಾನವನಿಗೆ  ವರ್ಷಗಳ  ಸಂಶೋಧನೆಯ ನಂತರ ತಿಳಿದದ್ದು ಜೇನುಹುಳಗಳಿಗೆ   ಕೋಟ್ಯಾಂತರ ವರ್ಷಗಳ ಹಿಂದಿನಿಂದಲೇ ತಿಳಿದಿತ್ತು ಎಂದಾಯಿತಲ್ಲವೇ? 
         ಜೇನುಹುಳುಗಳು  ಮರಕ್ಕೆ ಗೂಡು ಕಟ್ಟುವ ಪರಿ ಇನ್ನೂ ಚೆನ್ನ. ಶಿರಸಿಯಿನದ ಯಲ್ಲಾಪುರಕ್ಕೆ ನನ್ನ ಅಜ್ಜನಮನೆಗೆ  ಹೋಗುವ ಮಾರ್ಗದಲ್ಲಿರುವ ಒಂದು  ಮರಕ್ಕೆ ಸುಮಾರು ೪೦-೫೦ ಜೇನುಗೂಡುಗಳು ಕಟ್ಟಿವೆ.
ಪುಟ್ಟ ಜೀವಿಗಳಾದರೂ ಈ ವರಲೆ, ಜೇನುನೊಣಗಳ ವಾಸ್ತುಶಿಲ್ಪದ ವಿಜ್ಞಾನ ಎಂಥಾ ದೊಡ್ಡ ಇಂಜೀನೀರ್, ವಾಸ್ತುಶಿಲ್ಪಿಗಳಿಗೂ ಸ್ಪೂರ್ತಿಯಾಗುವಂತದ್ದು.

Reference : Balachandra Sayimane, National Geographic, TED talks, BBC Earth.

Comments

  1. ಸಣ್ಣ ಸಣ್ಣ ವಿಷಯಗಳೇ ಆದರೂ, ನಿಸರ್ಗದಿಂದ ನಾವು ಕಲಿಯುವ ಪಾಠ ಬಹಳಷ್ಟಿದೆ....

    ReplyDelete
  2. rathnakar upadhya
    ತುಂಬಾ ಸೋಜಿಗದ ವಿಷಯಗಳು...ಹುತ್ತದ ಮಣ್ಣಿಗೆ ಔಷಧಿ ಗುಣಗಳೂ ಇವೆ...ಅಪ್ಪನನ್ನು ಕೇಳಿ ಸ್ವಲ್ಪ ಹೇಳಿ....ವರಲೆ ಒಂದು ಸೃಷ್ಟಿಯ ಕೌತುಕ....

    ReplyDelete
  3. Lovely post, Vanya! I really like your blog theme and your posts are always so informative!!

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ