Skip to main content

The Night Diary : ಒಂದು ಗೆರೆಯಿಂದ ಜನ ವೈರಿಗಳಾಗಬಲ್ಲರೇ?

The Night Diary : ಸ್ವಾತಂತ್ರ್ಯ ಕಾಲದ ಕಥೆ

 " All that suffering, all that death, for nothing. I will never understand, as long as I live, how a country could change overnight from a line drawn."
 
ದೇಶ ವಿಭಜನೆಯ ಸಮಯದಲ್ಲಿ ಚೂರು ಚೂರಾದ ಜನರ ಜೀವನದ ಕಥೆ ಇದು. ನಿಶಾ ಎಂಬ ೧೨ ವರ್ಷದ , ಈಗಿನ ಪಾಕಿಸ್ತಾನದ ಮಿರ್ ಪುರ್ ಖಾಸ್ ನಗರದಲ್ಲಿ ವಾಸಿಸುತ್ತಿದ್ದ   ಕಾಲ್ಪನಿಕ ಹುಡುಗಿಯ ಕಥೆಯಿದು. ಹೆಚ್ಚು ಮಾತನಾಡದ ನಿಶಾ ತನ್ನ ಪ್ರೀತಿಯ  ಅಡುಗೆ ಮಾಡುವವ ಕಾಜ಼ಿ ಕೊಟ್ಟ ಪುಸ್ತಕದಲ್ಲಿ ಹಳೆಯ ಭಾರತದಿಂದ ಹೊಸ ಭಾರತದವರೆಗಿನ ಕಥೆಗಳನ್ನು ಬಿಚ್ಚಿಡುತ್ತಾ ಬರುತ್ತಾಳೆ.

ತಾನು ಮತ್ತು ತನ್ನ ಅವಳಿ ತಮ್ಮ ಅಮಿಲ್ ಹುಟ್ಟುವಾಗಲೆ ತೀರಿಹೋದ ಮುಸ್ಲಿಂ ತಾಯಿ ಮತ್ತು  ವೈದ್ಯನಾದ ಹಿಂದು ತಂದೆ ಮತ್ತು ಅಜ್ಜಿ ಇರುವ ಪುಟ್ಟ ಕುಟುಂಬದ  ಪಾಕಿಸ್ತಾನದಿಂದ ಭಾರತಕ್ಕೆ  ವಲಸೆ ಬರುವ ಕಥೆ ಇದು.
ಮನೆ ಬಿಟ್ಟು ಜೊಧ್ ಪುರಕ್ಕೆ ಹೋಗುವಾಗ ಅಡುಗೆ ಮಾಡುವ ಕಾಜ಼ಿಯನ್ನು ಏಕೆ ಬಿಟ್ಟು ಹೋಗಬೇಕು ಎಂಬ ಅವಳಿಗಳ ಪ್ರಶ್ನೆ, ಮಾರ್ಗ ಮಧ್ಯದಲ್ಲಿ ಅಮ್ಮನ ಸಹೋದರನ  ಮನೆಯಲ್ಲಿ ಅಡಗುತಾಣವಾಗಿ ಉಳಿದುಕೊಂಡಾಗ ಎದುರಿನ ಮನೆಯ ಹಫ಼ಾ ಎಂಬ ಮುಸ್ಲಿಮ್ ಹುಡುಗಿಯ ಜೊತೆಗೆ  ಮಾತಾಡುವ ಆಸೆ, ರಾಜಸ್ತಾನದ ಮರುಭೂಮಿಯಲ್ಲಿ ನೀರಿಗಾಗಿ ನಡೆಯುವ ಕೊಲೆಗಳ ಕಥೆ ಎಲ್ಲವೂ ಒಬ್ಬ ಹುಡುಗಿಯ ದೃಷ್ಟಿಕೋನದಲ್ಲಿ  ಲೇಖಕಿ ನೋಡಿದ್ದಾರೆ . ಬೇರೆ ಧರ್ಮದವರು ಬೇರೆ ರೀತಿಯ ಮಾನವರೆ ? ತಾವು ಎಲ್ಲಿಗೆ ಸೇರಿದವರೆಂಬ ಗೊಂದಲಗಳನ್ನು ಇಟ್ಟುಕೊಂಡೆ ತನ್ನ ತೀರಿಕೊಂಡ ತಾಯಿಗೆ ಪತ್ರ ಬರೆಯುತ್ತಾ,  ಬಂಗಲೆಯಲ್ಲಿ   ವಾಸಿಸುತ್ತಿದ್ದವಳು ಜೋಧಪುರದಲ್ಲಿ ಒಂದು ಚಿಕ್ಕ ಕೊಣೆಯ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬರುತ್ತದೆ. ಪಾಕಿಸ್ತಾನದ ತನ್ನ ಮನೆಯಲ್ಲಿ ಬಿಟ್ಟುಬಂದ ಆಟಿಕೆಗಳನ್ನು ಈಗ ಯಾರೊ ಆಡುತ್ತಿರಬಹುದು ಎಂಬ ಯೋಚನೆ, ಒಂದು ಗೆರೆಯಿಂದ ಗೆಳೆಯರಂತೆ ಇದ್ದ ಜನ ಏಕೆ ವೈರಿಗಳಾದರು? ಎಂಬ ಮುಗ್ದ ಪ್ರಶ್ನೆ, ತಾನು ಎರಡು ಕಡೆಯಲ್ಲಿ ಇರಬಹುದಲ್ಲವೆ ಎಂಬ ತರ್ಕ ಇತ್ಯಾದಿ ಭಾವನೆಗಳು ಪುಸ್ತಕವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ದುಗುಡ , ತಲ್ಲಣಗಳು ಒಂದೆಡೆಯಾದರೆ ತನ್ನ  ಪ್ರೀತಿಯ  ಕಾಜ಼ಿ  ಧರ್ಮ ಬೇರೆಯಾದರೂ , ಪಾಕಿಸ್ತಾನದಿಂದ ತಪ್ಪಿಸಿಕೊಂಡು ಜೋಧ್ ಪುರ ಕ್ಕೆ ಬಂದಾಗಿನ ಸಂಭ್ರಮ ಮುಂತಾದ ಘಟನೆಗಳು ನಾವು ಮತ್ತೆ ಬದುಕಬಲ್ಲೆವು ಎಂಬ ಭರವಸೆಯನ್ನು ನಿಶಾಳಿಗೆ ಕೊಡುತ್ತದೆ.

ನೀರಿನ ಅಭಾವದಿಂದ ತಾವಿನ್ನು ಸತ್ತೇ ಹೊಗುತ್ತೇವೆ ಎಂಬಾಗ ಮಳೆ ಬಂದು ಜೀವ ಉಳಿಸುವುದೊಂದಾದರೆ, ಅದೇ ನೀರಿಗಾಗಿ ಇಬ್ಬರ ಜಗಳವಾಗಿ ಕೊಲೆಗಳೆ ನಡೆಯುವ ಘಟನೆ ಇನ್ನೊಂದು ಬದಿಯಲ್ಲಿ ನಿಲ್ಲುತ್ತದೆ. 
ಕೊನೆಯಲ್ಲಿ ಕಾಜ಼ಿ ಮತ್ತೆ ಬಂದಾಗ ನಿಶಾ ಹೀಗೆ ಬರೆಯುತ್ತಾಳೆ :
" To Nehru, Jinnah, India, and Pakistan, to the men who fight and kill—you can’t split us. You can’t split love."
( ನೆಹರು, ಜಿನ್ನಾ,ಭಾರತ, ಪಾಕಿಸ್ತಾನ,ಯಾರು ಜನರನ್ನು ಧರ್ಮಕ್ಕಾಗಿ ಕೊಂದಿರೋ- ನೀವು ನಮ್ಮನ್ನು ಬೇರ್ಪಡಿಸಲಾಗದು.ನೀವು ಪ್ರೀತಿಯನ್ನು ಬೇರ್ಪಡಿಸಲಾಗದು!)
ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲಿ ಈ ಪುಸ್ತಕ ಈಗ ಬಂದು ಸೇರಿದೆ. ನಿಶಾ ಮತ್ತು ಅಮಿಲ್ ತಮ್ಮ ಜೀವನವನ್ನು ಮತ್ತೆ ಸರಿಮಾಡಿಕೊಳ್ಳುತ್ತಾರೆಯೆ?ನಿಶಾ ತಾನು ಎಲ್ಲಿಗೆ ಸೇರಿದವಳೆಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾಳೆಯೇ?

ಇದು ನಮ್ಮ ನಡುವಿನ   ಅದೆಷ್ಟೋ   ಆ್ಯನ್ ಫ಼್ರಾಂಕ್ ಗಳ ಕಥೆಯ ಕಾಲ್ಪನಿಕ ರೂಪ.



Comments

  1. ತುಂಬಾ ತುಂಬಾ ಚೆನ್ನಾಗಿ ಬರೆಯುತ್ತಿರುವೆ ಪುಟ್ಟಿ. ಅಸಾಧಾರಣ ಕುತೂಹಲದಿಂದ ಗಮನಿಸುವಿಕೆ ಹಾಗೂ ಸ್ವಂತಿಕೆಯ ಶೈಲಿ ಎಲ್ಲ ಬರಹಗಳಲ್ಲೂ ಎದ್ದು ಕಾಣುತ್ತಿವೆ.
    ಹೀಗೇ ಮುಂದುವರಿಯಲಿ. ನಿನ್ನ ಕನಸು,
    ಕಲ್ಪನೆಗಳ ಹಾರಾಟಕ್ಕೆ ಆಕಾಶವೂ ಮಿತಿಯಾಗದಿರಲಿ. ಶುಭಹಾರೈಕೆಗಳು.

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...