ಯಾವುದೋ ದೂರದೇಶದಿಂದ ಬಂದು ನಮ್ಮವರಲ್ಲಿ ಒಂದಾಗಿ ನಮ್ಮವರಂತೆ ಇದ್ದು ಮರಳಿದವರು ಹಲವರಿದ್ದಾರೆ. ನಮ್ಮ ಮನೆಗೆ ಹೀಗೆ ಬರುವ ಹಲವಾರು ವಿಧ್ಯಾರ್ಥಿಗಳು, ಪ್ರವಾಸಿಗರು, ಸಂಶೋಧಕರು ಮುಂತಾದವರಲ್ಲಿ ಹಲವರು ನಮ್ಮವರಲ್ಲಿಯೇ ಒಂದಾಗಿದದು ನಮ್ಮವರೇ ಎನಿಸುವಷ್ಟು ಆಪ್ತರಾಗಿರುವವರೂ ಇದ್ದಾರೆ. ಅಂತವರಲ್ಲಿ ಕೆಲವರ ಬಗ್ಗೆ ಇಲ್ಲಿ ಸ್ವಲ್ಪ ಮಾಹಿತಿ ಇದೆಯಷ್ಟೆ. Photo by Sayan Nath on Unsplash Lisa Andresen : ಈಕೆ ನಮ್ಮ ಮನೆಗೆ ಬಂದಿದ್ದು ತನ್ನ m.sc thesisನ ಕೆಲಸಕ್ಕಾಗಿ ಭಾರತಕ್ಕೆ ತನ್ನ ಸಬಾಟಿಕಲ್ ಗಾಗಿ ಮೊದಲೂ ಬಂದಿದ್ದ ಇವಳು ಕುಂದಾಪುರದಲ್ಲಿ ಇದ್ದಿದ್ದಳು. ಬಂದಿದ್ದು 2018 ರ ಅಂತ್ಯದಲ್ಲಿ ಅಂದರೆ ಡಿಸೆಂಬರ್ ಸಮಯದಲ್ಲಿ. ಇಂದಿಗೂ ನಮ್ಮ ಕುಟುಂಬದ ಜೊತೆ ಹೆಚ್ಚು ಸಂಪರ್ಕದಲ್ಲಿರುವವರಲ್ಲಿ ಲೀಸಾ ಕೂಡಾ ಒಬ್ಬಳು. ಇವಳು ಬಂದ ಸಮಯದಲ್ಲಿ ಊರಲ್ಲಿ ಯಕ್ಷಗಾನ , ತಾಳಮದ್ದಳೆಯ ಸಮಯ. ಶಾಲೆಯಲ್ಲಿ ಕ್ರಿಸ್ಮಸ್ ದಿನವೇ ಗ್ರಾಮೋತ್ಸವ ಹಾಗೂ ಕಲಿಕೋತ್ಸವವೂ ಇತ್ತು. ಅಂದು ಎಲ್ಲರ ಜೊತೆಗೂ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದಳು. ಮೋಜೀನ ಆಟದ ಸ್ಪರ್ಧೆಯೊಂದರಲ್ಲಿ ಊರಿನವರ ಪರವವಾಗಿ ಆಟವಾಡಿ ಒಂದು ಬಹುಮಾನವನ್ನೂ ಗೆದ್ದುಕೊಂಡಿದ್ದಳು. ಈಗಲೂ ಕ್ರಿಸ್ಮಸ್ ದಿನದಂಡು ನಮಗೆ ಒಂದು ಪತ್ರದೊಂದಿಗೆ ಏನಾದರೂ chocolate ಅಥವಾ ಮತ್ತೇನಾದರೂ ಉಡುಗೊರೆಯನ್ನ...