2 020ರಲ್ಲಿ ಲಾಕ್ಡೌನ್ ಶುರುವಾದಾಗಿನಿಂದ ಹತ್ತು ತಿಂಗಳು ನಾನು ಮಾಡಿದ್ದು ಪುಸ್ತಕ ಓದಿದ್ದು ಅಷ್ಟೇ . ಆಗ ತಾನೇ ಮನೆಯಲ್ಲಿ ಸುಮಾರು 30-40 ಪುಸ್ತಕಗಳು ಬಂದು ಕುಳಿತಿದ್ದವು. ಡಾ. ಕೆ. ಎನ್. ಗಣೇಶಯ್ಯ ಅವರ ಪುಸ್ತಕಗಳು, ತೇಜೋ ತುಂಗಭದ್ರಾ, ಪುನರ್ವಸು,ಮಧ್ಯಗಟ್ಟ ಎಲ್ಲವೂ ಪುಸ್ತಕದ ಷೆಲ್ಫ್ ಏರಿ ಕುಳಿತಿದ್ದವು. ಒಂದಿಷ್ಟು ಪುಸ್ತಕಗಳು ಮೊದಲೇ ಅಮ್ಮ ಮತ್ತು ಅಪ್ಪನಿಂದ ಬುಕ್ ಆಗಿಬಿಟ್ಟಿತ್ತು.ಮೊದಲು ಬರೀ ಮಕ್ಕಳ ಕಥೆಗಳನ್ನು ಮತ್ತು fantasyಗಳನ್ನೇ ಓದುತ್ತಾ ಐದಾರು ತಿಂಗಳು ಕಳೆದಿದ್ದ ನಾನು ಹೀಗೆ ಒಂದು ದಿನ ಅಪ್ಪ ಗಣೇಶಯ್ಯನವರ ಕರಿಸಿರಿಯಾನದ ಬಗ್ಗೆ ಹೇಳುತಿದ್ದದ್ದನ್ನು ಕೇಳಿ ಕುತೂಹಲದಿಂದ ಮಧ್ಯದಲ್ಲಿನ ಯಾವುದೋ ಹಾಳೆ ತೆಗೆದು ಓದಿದೆ. ವಿಜಯನಗರದ ಹೆಸರನ್ನು ನೋಡಿ ಕುತೂಹಲ ಬಂತು. ಮೊದಲ ಪುಟದಿಂದ ಓದುತ್ತಾ ಹೋದೆ. ಅದೇ ತಿಂಗಳಲ್ಲಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ್ದೆ! ಕರಿಸಿರಿಯಾನ ಎಂಬ ಹೆಸರನ್ನು ಕೇಳಿ ಒಮ್ಮೆ ಗೊಂದಲವಾದರೂ ಕೊನೆಗೆ ಓದಿ ಮುಗಿಸಿದಾಗ ಹೆಸರಿನ ಒಳಾರ್ಥ ತಿಳಿಯಿತು. ಕರಿ ಎಂದರೆ ಆನೆ, ಸಿರಿ ಎಂದರೆ ಏನು ಎಂದು ವಿವರಿಸುವುದೇನೂ ಬೇಕಿಲ್ಲ, ಐಶ್ವರ್ಯ ಎಂದು ಅರ್ಥ. ಇನ್ನು ಯಾನ ಎಂದರೆ ಪಯಣ. ಆನೆಯ ಮೇಲೆ ಐಶ್ವರ್ಯದ ಪಯಣ. ಇವರ ಎಲ್ಲಾ ಪುಸ್ತಕಗಳ ಹೆಸರುಗಳೂ ಹೀಗೆ ಪ್ರಾರಂಭವಾಗುವುದು ವಿಶೇಷ(ಉದಾಹರಣೆಗೆ: ಕನಕ ಮುಸುಕು, ಕಪಿಲಿಪಿಸಾರ ಇತ್ಯಾದಿ).ಜೊತೆಗೆ ಥ್ರಿಲ್ಲರ್ ರೀತಿಯಲ್ಲಿಯೇ ಓಡಿಸಿಕೊಂಡು ಹೋಗುವ ಈ ಪುಸ್