Skip to main content

NaNoWriMo YWP - 2020 : ಮಕ್ಕಳೂ ಕಾದಂಬರಿ ಬರೆಯಬಹುದು!

 ಹೆಸರು ವಿಚಿತ್ರವಾಗಿದೆ ಅಲ್ಲವೇ? ಹೌದು. ಇದರ ಹೆಸರಿನಂತೆ ಈ ಕಾರ್ಯಕ್ರಮದ ಗುರಿ ಕೂಡ ವಿಶಿಷ್ಟವೇ. ಇದನ್ನು ನಾನೋರಿಮೊ ಎನ್ನಿ, ಇಲ್ಲವೇ ಚಿಕ್ಕದಾಗಿ ನ್ಯಾನೋ ಎನ್ನಿ .... ಏನಾದರೂ ಅನ್ನಿ. ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಏನಂತೀರಿ?  ಈ ಬಾರಿ ಕೋರೋನಾದ ಕಾರಣವಾಗಿ  ಹೇಗೂ ಶಾಲೆಗಳು ಮುಚ್ಚಿದ್ದರಿಂದ ನಾನು ಅಲ್ಪ ಸ್ವಲ್ಪ ನನಗೆ ತೋಚಿದ್ದನ್ನು ಬರೆಯುತ್ತಿದ್ದೆ. ಹೀಗೆ ನಾನು ಬ್ಲಾಗ್ ಬರೆಯಲು ಶುರುಮಾಡಿದ್ದು. ಒಂದು ದಿನ ಇಂಟರ್ನೆಟ್ನಲ್ಲಿ ಅಲೆದಾಡುತ್ತಿದ್ದಾಗ ಆಕಸ್ಮಿಕವಾಗಿ ಮಕ್ಕಳಿಗಾಗಿ ಇರುವ ಕಾರ್ಯಕ್ರಮಗಳ ಬಗ್ಗೆ ಇದ್ದ ಒಂದು ಲೇಖನ ಸಿಕ್ಕಿತು . ಅದರಲ್ಲಿ ಓದುತ್ತಾ ಹೋದಂತೆ ಈ NaNoWriMo  ದ ಬಗ್ಗೆ ಸ್ವಲ್ಪ  ತಿಳಿಯಿತು. ಕುತೂಹಲಕಾರಿ ವಿಷಯವಿದು  ಎನಿಸಿತು, ನೋಡೋಣ ಎಂದು ಆ website   ಗೆ ಭೇಟಿ ಕೊಟ್ಟೆ.             

     

ಅಷ್ಟಕ್ಕೂ ಈ NaNoWriMo ಎಂದರೇನು?:   National  Novel  Writing Month  ಅಂದರೆ ಒಂದು ತಿಂಗಳಿನಲ್ಲಿ ಒಂದು ನೀಳ್ಗತೆಯನ್ನು ಬರೆದು ಮುಗಿಸುವುದು ಎಂದರ್ಥ! ಇದು ಮೊದಲು ಪ್ರಾರಂಭವಾದದ್ದು ಬರಹಗಾರರಿಗೆ ಎಂದು. ನವೆಂಬರ್ ನ ಒಂದು ತಿಂಗಳ ಅವಧಿಯಲ್ಲಿ ಒಂದು ೫೦,೦೦೦ ಪದಗಳಿರುವ ಒಂದು ನೀಳ್ಗತೆಯನ್ನು ಬರೆದರೇ ಅವರು ವಿಜೇತರಾಗುತ್ತಾರೆ. ಇಲ್ಲಿ ನಿರ್ಣಾಯಕರೆಂದು ಯಾರೂ ಇಲ್ಲ…. ನಮಗೆ ನಾವೇ ನಿರ್ಣಾಯಕರು! ೫೦,೦೦೦ ಪದಗಳು ೧೮ ವರ್ಷ ಮೇಲ್ಪಟ್ಟವರಿಗೆ ಕನಿಷ್ಠ ಪದಮಿತಿಯಾಗಿರುತ್ತದೆ, ಆದರೆ ಇದೆ ಕಾರ್ಯಕ್ರಮದ ಬಾಲ  ರೂಪವಾದ NaNoWriMo YWP ನಲ್ಲಿ ಮಕ್ಕಳು ತಮಗೆ ಬೇಕಾದಷ್ಟು ಪದಮಿತಿ   ಇಟ್ಟುಕೊಳ್ಳಬಹುದು. ಕೆಲವರು ೧೨,೦೦೦ ಪದಮಿತಿ ಇಟ್ಟುಕೊಂಡರೆ, ಇನ್ನು ಕೆಲವರು ೫,೦೦೦ ಪದಮಿತಿ ಇಟ್ಟುಕೊಳ್ಳಬಹುದು. ಯಾವ ತರಗತಿಯವರು ಎಷ್ಟು ಪದಮಿತಿ ಇಟ್ಟುಕೊಳ್ಳಬಹುದು ಎಂಬ  ಒಂದಿಷ್ಟು ಕೈಪಿಡಿಗಳು ಇಲ್ಲಿ ಉಚಿತವಾಗಿ ಲಭ್ಯ ! ಇಲ್ಲಿ ಹಲವಾರು  ತರಗತಿಗಳು, ಗ್ರಂಥಾಲಯದ ಗುಂಪುಗಳು ಎಲ್ಲರು ಭಾಗವಹಿಸುತ್ತವೆ. ಮಕ್ಕಳಲ್ಲಿ ಬರೆಯುವ ಆಸಕ್ತಿ ಹುಟ್ಟಿಸಲು ಇದು ಸಹಾಯಕಾರಿ ಎನ್ನುತ್ತಾರೆ ಇದರಲ್ಲಿ ಭಾಗವಹಿಸುವವರು. ಎಲ್ಲರೂ ತಮ್ಮ ಆಸಕ್ತಿಗಳಿಗೆ ಸಂಬಂಧಿಸಿದಂತೆ ಕಥೆಗಳನ್ನು ಆರಿಸಿಕೊಳ್ಳಬಹುದು, ಕೆಲ ಮಕ್ಕಳು ಫ್ಯಾಂಟಸಿ ಕಥೆಗಳನ್ನು ಬರೆದರೆ, ಇನ್ನು ಕೆಲವರು ಚಿಕ್ಕ ಕಥೆಗಳ ಸಂಗ್ರಹವನ್ನು ಬರೆಯುತ್ತಾರೆ. ಇದು ಒಂದು ರೀತಿಯ Self pushing system. ಇಲ್ಲಿ ನವೆಂಬರ್ ತಿಂಗಳ ಹೊರತಾಗಿಯೂ ಏಪ್ರಿಲ್ ಮತ್ತು ಜೂಲೈ ತಿಂಗಳಲ್ಲಿ ಕ್ಯಾಂಪ್ NaNoWriMo, short story competionಗಳು  ಇತ್ಯಾದಿ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ.   ಮಕ್ಕಳಿಗೋ ಇಲ್ಲಿ ಉಚಿತವಾಗಿ  ಅವಕಾಶವಿದೇ.  ನಾನು ಈ ಬಾರಿ ಇದರಲ್ಲಿ ಬಾಗವಹಿಸಿದ್ದೆ ಎಂದು ಆಗಲೇ ಹೇಳಿದ್ದೆ ಅಲ್ಲವೇ? ಸರಿ, ನನ್ನ ಅನುಭವವನ್ನು ಸ್ವಲ್ಪ ಹೇಳಲೇ?


ಆಗಲೇ ಹೇಳಿದಂತೆ ನಾನು ಒಂದು ಲೇಖನದ ಮೂಲಕ ಈ website ಬಗ್ಗೆ ತಿಳಿದುಕೊಂಡಿದ್ದು. ಆಗಿನ್ನೂ ಸೆಪ್ಟೆಂಬರ್ ತಿಂಗಳಾಗಿದ್ದರಿಂದ,NaNoWriMo ಸ್ಪರ್ಧೆ ಇನ್ನೂ ಪ್ರಾರಂಭವಾಗಿರಲಿಲ್ಲ. ಹೀಗಾಗಿ ವರ್ಷದ ಇದಕ್ಕೆ ನಾನು ಹೆಚ್ಚೇನೂ ಮಹತ್ವ ಕೊಟ್ಟಿರಲಿಲ್ಲ. ಸುಮಾರು ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್ ನಲ್ಲಿ  ಇಮೇಲ್ ಒಂದು ಬಂತು : ‘NaNoWriMo is    approaching.  If  you want  to take  part ,then  please visit the website’ ಎಂದು! ನನಗೆ ಆ ಹೊತ್ತಿಗೆ ಇಮೇಲ್ ಬರದಿದ್ದರೆ  ಮರೆತೇ ಹೋಗಿರುತಿತ್ತೇನೋ. ಕೊನೆಗೆ   ಪ್ರಯತ್ನಿಸೋಣವೆಂದು ಸೈನ್ ಇನ್ ಆದೆ. ಅಕ್ಟೋಬರ್ ಅವರು preptober  ಅಂದರೆ ಕಥೆಯ ಬಗ್ಗೆ ಯೋಚಿಸಲು ಎಂದು ಒಂದು ತಿಂಗಳನ್ನು  ಮೀಸಲಿಡುತ್ತಾರೆ. ಹಾಗೆಯೇ ನಾನು ಸಹ ಒಂದು ಸರಳವಾದ ಕಥೆಯನ್ನೇ ಯೋಚಿಸಿದ್ದೆ, ಆದರೆ ಇಂಗ್ಲಿಷ್ ನಲ್ಲಿ ಬರೆಯಬೇಕಲ್ಲಾ? ನನಗೆ ಕನ್ನಡದಲ್ಲಿ ಮೊದಲಿನಿಂದಲೂ ಲೇಖನಗಳನ್ನು, ಕವಿತೆಗಳನ್ನು ಬರೆದಿದ್ದರೂ ಕಥೆಯನ್ನೂ ಎಂದೂ ಬರೆದವನಲ್ಲ. ಹೀಗಾಗಿ ಸ್ವಲ್ಪ ತಲೆಬಿಸಿಯಾಗಿದ್ದು ನಿಜ. ನಂತರ ಮೊದಲು ಒಂದಿಷ್ಟು short story  ಗಳನ್ನು ಇಂಗ್ಲಿಷ್ನಲ್ಲಿ ಬರೆದಿದ್ದರಿಂದ, ಒಂದು ಕೈ ಪ್ರಯತ್ನಿಸುವಾ ಎಂದು ಹೊರಟೆ. ಆಶ್ಚರ್ಯವೆಂಬಂತೆ ನನಗೆ ಇಂಗ್ಲಿಷ್ನಲ್ಲಿ ಬರೆಯುವುದು ಕಷ್ಟವೇನೂ ಆಗಲಿಲ್ಲ, ಸಲೀಸಾಗಿಯೇ ಮೂಡಿಬಂತು. Littlehill diaries  ಎಂದು ಹೆಸರಿಟ್ಟೆ. ನನಗೆ ತುಂಬಾ ಖುಷಿಕೊಟ್ಟ  ನನ್ನ ಕಥೆಗಳಲ್ಲಿ ಇದೂ ಒಂದು. 


ಬರೆಯಲು ಇಷ್ಟಪಡುವವರಿಗೆ, ಮಕ್ಕಳಿಗೆ   ಇದು ಒಂದು ಉತ್ತಮ platform  ಎಂಬುದು ನನ್ನ  ಅಭಿಪ್ರಾಯ. ಫಲಿತಾಂಶ ಖುಷಿ ಕೊಟ್ಟಿದೆ, ನೀವೂ ಮಕ್ಕಳಾಗಿದ್ದರೆ ನೀವೂ ಪ್ರಯತ್ನಿಸಿ. ನಿಮಗೂ ಇಷ್ಟವಾಗಬಹುದು. ಅಂದಹಾಗೆ  ನಮ್ಮ ಕನ್ನಡದಲ್ಲೂ  ವ್ಯವಸ್ಥೆ ಇದ್ದಿದ್ದರೆ  ಚೆನ್ನಾಗಿರುತಿತ್ತು ಅಲ್ಲವೇ? ಇದಕ್ಕೆ ಏನಂತೀರಿ?



( ವಿ. ಸೂ :   ಈಗ ನವೆಂಬರ್  ಮುಗಿದುಹೋಗಿರುವುದರಿಂದ,  ಈ ಸ್ಪರ್ಧೆ ಇರುವುದಿಲ್ಲ,  ನಿಮ್ಮದೇ ವೈಯಕ್ತಿಕವಾಗಿ ಒಂದು ಚಾಲೆಂಜ್ ತರಹ  ಮಾಡಬಹುದು..)



ನಿಮಗೆ ಈ websiteಗೆ  ಭೇಟಿ ಕೊಡಬೇಕು ಎನಿಸಿದಲ್ಲಿ  click ಮಾಡಿ 
 


NaNoWriMo Cerificate

 


Comments

  1. Wow, I didn't know about this, Vanya! I just tried out this website, and it was very nice :)

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...