"The greatest threat to our planet is the belief that someone else will save it . - Robert Swan ಭೂಮಿಗಿರುವ ಅತ್ಯಂತ ದೊಡ್ಡ ಸಂಕಷ್ಟ ಎಂದರೆ ಅದು ಭೂಮಿಯನ್ನು ಮತ್ತೊಬ್ಬರು ಉಳಿಸುತ್ತಾರೆ ಎಂಬ ನಿರ್ಲಕ್ಷ್ಯ ಭಾವ - ರಾಬರ್ಟ್ ಸ್ವಾನ್ ನಮ್ಮ ದೇಹದ ತಾಪಮಾನ ಎರಡು ಡಿಗ್ರೀ ಹೆಚ್ಚಾದರೆ ನಮಗೇನಾಗಬಹುದು? ಹೆಚ್ಚೆಂದರೆ ಸಣ್ಣ ಜ್ವರ ಬರಬಹುದಷ್ಟೇ. ಆದರೆ ಭೂಮಿಯ ತಾಪಮಾನ ಇನ್ನೂ 2 ಡಿಗ್ರೀ Celcius ಹೆಚ್ಚಾದರೆ..? ನಾವು ಮತ್ತೆ ಭೂಮಿಯನ್ನು ಸುಸ್ಥಿತಿಗೆ ತರಲಾರದ ಸ್ಥಿತಿಗೆ ಹೋಗಿಬಿಡಬಹುದು! ಸಮುದ್ರ ಮಟ್ಟ ಹೆಚ್ಚಾಗಿ, ಅನೇಕ ದ್ವೀಪಗಳು ಮುಳುಗಿ ಹೋಗಬಹುದು,ಕರಾವಳಿ ಇಲ್ಲವಾಗಬಹುದು. ಪ್ರವಾಹ ಗಳು (ಇನ್ನೂ) ಹೆಚ್ಚಾಗಬಹುದು.ಇವೆಲ್ಲವೂ ನೂರಾರು ವರ್ಷಗಳ ನಂತರ ಆಗುವಂತದ್ದಲ್ಲ. ಈಗ ಆಗುತ್ತಿರುವಂತದ್ದು. ಭೂಮಿಯ ತಾಪಮಾನವನ್ನು 1.5 ಡಿಗ್ರೀ celsius ನಲ್ಲಿಯೇ ನಿಯಂತ್ರಿಸದಿದ್ದರೆ ಇವೆಲ್ಲವೂ ಆಗುತ್ತದೆ. ಇದೇ ಉದ್ದೇಶದಿಂದಲೇ ಪ್ಯಾರಿಸ್ ಅಗ್ರೀಮೆಂಟ್ ಮಾಡಿದ್ದು .ಈ ಪ್ಯಾರಿಸ್ ಅಗ್ರೀಮೆಂಟ್ ಗೆ ಈಗ 5 ವರ್ಷ. 5 ನೇ ವರ್ಷದ ಸಲುವಾಗಿ ಮೊನ್ನೆ ನ್ಯೂಸ್ ಚಾನೆಲ್ ಒಂದರಲ್ಲಿ ಇದರ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಇದೇನಿದು ಎಂದು ಪ್ಯಾರಿಸ್ ಅಗ್ರೀಮೆಂಟ್ ಬಗ್ಗೆ ಕುತೂಹಲದಿಂದ ಒಂದಿಷ್ಟು ಹುಡುಕಿದೆ.ಹೀಗೆ ಹುಡ...