Skip to main content

ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು

ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು
 
ಫ಼್ಯಾಂಟಸಿ ಕಥೆಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಬಾಲಮಂಗಳದ ಡಿಂಗ, ಶಕ್ತಿಮದ್ದು, ತುಂತುರುವಿನಲ್ಲಿ ಬರುವ ಮರಿಯಾನೆ ಐರಾ, ಶೇರು.... ಇನ್ನು  ಜಗತ್ಪ್ರಸಿದ್ದ Harry Potter ಪುಸ್ತಕ ಸರಣಿ.... ಪುರಾಣವನ್ನು ಆಧರಿಸಿ ಇತ್ತೀಚಿಗೆ ಬರೆದ Sita:The Warrior of Mithila..... ಇತ್ಯಾದಿ ಪುಸ್ತಕಗಳನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ ಅಥವಾ ಹೆಸರನ್ನಾದರೂ ಕೇಳಿರುತ್ತಾರೆ. ಡಿಂಗನಂತಹ ಕಾಮಿಕ್ ಕಥೆಗಳಂತೂ ನಮ್ಮಂತ ಮಕ್ಕಳಿಗೆ ಬಹಳ ಇಷ್ಟವಾದದ್ದು. ಜಗತ್ತಿನಲ್ಲಿ ಎಲ್ಲೇ ಹೋದರೂ ಫ಼್ಯಾಂಟಸಿ ಕಥೆಗಳು ಸಿಗುತ್ತವೆ. ಈ ಪುಸ್ತಕಗಳ ಮೋಡಿಯೇ ಅಂಥದ್ದು.

   ಫ಼್ಯಾಂಟಸಿ ಕಥೆಗಳನ್ನು ಓದುತ್ತಿದ್ದರೆ ಸಮಯ ಓಡಿದ್ದೇ ತಿಳಿಯುವುದಿಲ್ಲ. ಅದರದ್ದು ಬೇರೆಯದೇ ಪ್ರಪಂಚ. ಇಲ್ಲಿ ಕಲ್ಪನೆಗೆ ಮಿತಿಯೆಂಬುದೇ ಇಲ್ಲ. ಮಾಟಗಾತಿಯರು ಒಳ್ಳೆಯವರೂ ಆಗಬಹುದು... ಕೆಟ್ಟವರೂ ಆಗಬಹುದು. ಪ್ರಾಣಿ ಪಕ್ಷಿಗಳು ಮಾತನಾಡಲೂಬಹುದು... ಮನುಷ್ಯನೇ ಪ್ರಾಣಿಯಾಗಿ ಮಾರ್ಪಾಡಾಗಲೂಬಹುದು. ಇಂತಹ ಜಗತ್ತು ನಮಗೊಂದಿದ್ದಿದ್ದರೆ ಎಷ್ಟು ಚೆನ್ನ?
 

 ಮಕ್ಕಳಿಂದ ಹಿರಿಯರ ವರೆಗೂ ಇದು ಇಷ್ಟವಾಗುತ್ತದೆ. ತಾನೂ ಕಥೆಯ ನಾಯಕ/ನಾಯಕಿಯಂತೆ ‍‍‍‍‍ಸಾಹಸಿಯಾಗಬೇಕೆಂದು ಎಲ್ಲರಿಗೂ ಅನಿಸುತ್ತದೆ. ಡಿಂಗನನ್ನು ನೋಡಿ ಅವನ ಹಾಗೆಯೇ ಹಾರಬೇಕೆಂದು ಹೋದವರೆಷ್ಟೋ...ಹೋಗಿ ಬಿದ್ದು ಗಾಯ ಮಾಡಿಕೊಂಡವರೆಷ್ಟೋ! ಈ ಕಥೆಗಳ ಪಾತ್ರಗಳೆಲ್ಲ ನಮ್ಮ ಪಾಲಿನ ಹೀರೋಗಳೇ. ಇನ್ನು  ನಮ್ಮ  ಕನ್ನಡದಲ್ಲಿ ಮಕ್ಕಳಿಗಾಗಿ ಫ಼್ಯಾಂಟಸಿ ಕಥೆಗಳು ಸ್ವಲ್ಪ ಕಡಿಮೆಯೆಂದೇ ಹೇಳಬಹುದು. ನಮ್ಮದೇ ಕೊಳ್ಳಿ ದೆವ್ವಗಳು,ನಮ್ಮದೇ ಭೂತದ  ಕಥೆಗಳು ಎಷ್ಟೆಲ್ಲಾ ಇದ್ದರೂ ಮಕ್ಕಳಿಗೆಂದು ಈ ರೀತಿಯ ಪುಸ್ತಕಗಳಿರುವುದು ಸ್ವಲ್ಪ ಕಡಿಮೆಯೆ. 


 

    ಜಗತ್ಪ್ರಸಿದ್ಧ ಫ಼್ಯಾಂಟಸಿ ಕಥೆಗಳಲ್ಲಿ ಮೊದಲು ನಿಲ್ಲುವುದು Harry Potter ಸರಣಿ.  ಜಗತ್ತಿನ ಎಲ್ಲಾ ಮಕ್ಕಳ ಮನಸೆಳೆದಿರುವ ಪುಸ್ತಕ ಇದು.ಹ್ಯಾರಿ ಎಂಬ ಅನಾಥ,ತನ್ನ ಚಿಕ್ಕಮ್ಮನ ಮನೆಯಲ್ಲಿ ಬೆಳೆದ ಹುಡುಗ ಅವನ ೧೧ನೆ ಹುಟ್ಟುಹಬ್ಬದ ದಿನ  ಹ್ಯಾಗ್ರಿಡ್ ಎಂಬ ದೈತ್ಯನಿಂದ ತಾನು ಒಬ್ಬ ಮಾಂತ್ರಿಕನೆಂದೂ (Wizard) ಮತ್ತು  ವೊಲ್ಡೆಮೊರ್ಟ್‌ ಎಂಬ ಜಗತ್ತನ್ನು ಆಳಲು ಬಯಸಿದ್ದ  ಕ್ರೂರಿ ಮಾಂತ್ರಿಕ ನನ್ನು ೧ ವರ್ಷ ವಯಸ್ಸಿನ ಮಗುವಾದಾಗ ಆಕಸ್ಮಿಕವಾಗಿ ಸೋಲಿಸಿದ್ದೇನೆಂದೂ, ತನ್ನ ತಂದ್-ತಾಯಿ ಸಹ ಅವನ ಕೈಯಲ್ಲೇ ಹತರಾದವರೆಂದೂ ತಿಳಿಯುತ್ತದೆ. ನಂತರ ಹಾಗ್ವಾರ್ಟ್ಸ್ ಎಂಬ ಜಾದೂ ಕಲಿಸುವ ಶಾಲೆಗೆ ಹೋಗುವಾಗ ತನ್ನ ಗೆಳೆಯರಾದ ರಾನ್(Ron) ಮತ್ತು ಹರ್ಮಾಯ್ನಿ(Hermione ) ಯರ ಜೊತೆಗೆ ವೊಲ್ಡೆಮೊರ್ಟ್ನನ್ನು ಸೋಲಿಸುತ್ತಾನೆ. ಮಧ್ಯೆ ಬರುವ ತನ್ನ ಪಾಲಕರ ಗೆಳೆಯರು, ಹಾಗ್ವಾರ್ಟ್ಸ್ ನ ನಾಲ್ಕು ಗುಂಪುಗಳು(Houses:Gryffindor ,Slytherin, Hufflepuff, Ravenclaw) , ಮಾಂತ್ರಿಕರ ಆಟ ಕ್ವಿಡಿಚ್(Quidditch) ಇತ್ಯಾದಿಗಳು ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಮಾಂತ್ರಿಕರೆಂದರೆ ಕೆಟ್ಟವರೆಂಬ ನಮ್ಮ ಯೋಚನೆ ಉಲ್ಟಾ ಆಗುತ್ತದೆ

Percy Jackson ಸರಣಿ: ಇದೂ ಸಹ ಒಬ್ಬ ಹನ್ನೆರಡು ವರ್ಷದ ಬಾಲಕ ಪರ್ಸಿ ತಾನು ಗ್ರೀಕ್ ಪುರಾಣದಲ್ಲಿನ ದೇವತೆಯ ಮಗನೆಂದೂ, ತನ್ನ ತಾಯಿ ಸಾಮಾನ್ಯ ಮನುಷ್ಯಳಾದರೂ ತಂದೆ ಪೊಸೈಡನ್(Poseidon) ಎಂಬ ಸಮುದ್ರ ದೇವತೆಯೆಂದು ತಿಳಿಯುತ್ತದೆ. ಕೊನೆಗೆ ಕ್ಯಾಂಪ್ ಹಾಫ಼್ ಬ್ಲಡ್(Camp half blood) ಅಂದರೆ ಅವನ ಹಾಗೆಯೆ ಅರ್ಧ ಮಾನವ-ಅರ್ಧ ದೇವತೆ (Demi Gods)  ಮಕ್ಕಳ ಜಾಗಕ್ಕೆ ಹೋಗುತ್ತಾನೆ. ಮುಂದೆ ದುಷ್ಟ ದೇವತೆಯೊಬ್ಬ ಮೇಲೇರುವುದನ್ನು ತಡೆಯಲು ಸಫಲನಾಗುವನೇ? ಎಂಬುದು ಮುಖ್ಯ ಕಥೆ. ಇದೂ ಸಹ ನಮ್ಮ ಕಲ್ಪನೆಗಳಿಗೆ ಆಸ್ಪದ ಕೊಡುತ್ತಾ  ತನ್ನದೇ ಹೊಸತನವನ್ನು ಇಟ್ಟುಕೊಂಡಿರುವ ಕಥೆ.
  

The Land Of Stories ಸರಣಿ :ನಮ್ಮ  ಸಿಂಡರಲ್ಲ, ಸ್ನೊ ವ್ಹೈಟ್  ನಂತಹ ಕಥೆಗಳಲ್ಲಿ  'ನಂತರ ಎಲ್ಲರೂ ಸುಖವಾಗಿದ್ದರು' ಎಂಬ ಅಂತ್ಯದ ನಂತರ ಏನಾಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡಿರಬಹುದು. Connor &Alex(Alexandra) ಎಂಬ ಇಬ್ಬರು ಅವಳಿ ಮಕ್ಕಳು ಆಕಸ್ಮಿಕವಾಗಿ Land of Stories ಎಂಬ ಪುಸ್ತಕದ ಜಗತ್ತಿಗೆ ಹೋಗಿಬಿಡುತ್ತಾರೆ. ನಂತರ ಅಲ್ಲಿಂದ ಹೊರಬರುವ ಪ್ರಯತ್ನದಲ್ಲಿ ತಮ್ಮ ಅಜ್ಜಿ ಇದೇ ನಾಡಿನವರು ಎಂಬ ಸತ್ಯ ತಿಳಿಯುತ್ತದೆ. ನಂತರ ಆ ಮಕ್ಕಳು ತಮ್ಮ ತಂದೆಯನ್ನು ಹುಡುಕಲು ಹೋಗುವ ಕಥೆಯೇ ಇದು. ನಾವ್ಯಾರು ಯೋಚಿಸಿರದ ದೃಷ್ಟಿಕೋನದಲ್ಲಿ ಲೇಖಕರು ಬರೆದಿದ್ದಾರೆ. 


  Aru Shah  ಸರಣಿ : ಇದು ನಮ್ಮದೇ ಪುರಾಣಗಳನ್ನು ಆಧರಿಸಿದ ಕಥೆ. ಅರು ಅಥವಾ ಅರುಂಧತಿ ಎಂಬ ೧೨ ವರ್ಷದ ಹುಡುಗಿ ತನ್ನ ಗೆಳೆಯರಿಗೆ ತೋರಿಸಲೆಂದು ತನ್ನ ಅಮ್ಮ ನ ಮ್ಯುಸಿಯಮ್ ನಲ್ಲಿರುವ ಭರತನ ದೀಪವನ್ನು ಹಚ್ಚಿಬಿಡುತ್ತಾಳೆ. ಆದರೆ ಆ ದೀಪ ಶಾಪಗ್ರಸ್ತ ದೀಪವಾಗಿದ್ದು ಜಗತ್ತನ್ನು ನಿಲ್ಲಿಸಿಬಿಡುತ್ತದೆ.ತನ್ನ  ಜಗತ್ತನ್ನು ಸರಿ ಮಾಡುವ ಪ್ರಯತ್ನದಲ್ಲಿ ಇವಳು ಹೊಸ ಗೆಳೆಯರನ್ನು ಮಾಡಿಕೊಳ್ಳುತ್ತಾಳೆ. ಣಂತರ ತಾನು ಇಂದ್ರನ ಮಗಳು ಹಾಗೂ ಮಹಾಭಾರತದ ಅರ್ಜುನನ ಸ್ವರೂಪ ಎಂಬ ಸತ್ಯವನ್ನು ಅರಿತು ಜಗತ್ತನ್ನು ಸರಿ ಮಾಡಲು ಹೊರಡುತ್ತಾಳೆ.    ಈಕೆ ಜಗತ್ತನ್ನು ಮತ್ತೆ ನಡೆಯುವಂತೆ ಮಾಡಬಲ್ಲಳೇ? 
ಇದು ನಮ್ಮದೇ ಪುರಾಣವನ್ನು ಆಧರಿಸಿದ ಕಥೆ. ನಮ್ಮದೇ ಎಂದು ಹೇಳಬಹುದಾದ ಒಂದು ಫ಼್ಯಾಂಟಸಿಗಳು.
                           ಹ್ಯಾರಿಯ ಮಾಂತ್ರಿಕ ಜಗತ್ತಿನಿಂದ ಪರ್ಸಿಯ ಹಾಫ಼್ ಬ್ಲಡ್ ಕ್ಯಾಂಪ್ ನವರೆಗೂ......... ಕಾನ್ನರ್&ಆಲೆಕ್ಸರ ಕಥೆಗಳ ನಾಡಿನಿಂದ ಅರುವಿನ ಪಾಂಡವರ ಕಥೆಯವರೆಗೂ..... ಡಿಂಗ ನಿಂದ  ಹಿಡಿದು ಶಕ್ತಿಮದ್ದಿನ ವರೆಗೂ........ ಎಷ್ಟೊಂದು ಪುಸ್ತಕಗಳಿವೆ ಈ ಪ್ರಕಾರದಲ್ಲಿ! 

Comments

  1. Wow, this is such a nice post! Thanks to your post, I learnt about the Aru Shah series which I will read now! Just followed your blog too!

    ReplyDelete
    Replies
    1. Thanks Maya.. For your support, I viewed your blog. It's awesome.

      Delete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ...