ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು ಫ಼್ಯಾಂಟಸಿ ಕಥೆಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಬಾಲಮಂಗಳದ ಡಿಂಗ, ಶಕ್ತಿಮದ್ದು, ತುಂತುರುವಿನಲ್ಲಿ ಬರುವ ಮರಿಯಾನೆ ಐರಾ, ಶೇರು.... ಇನ್ನು ಜಗತ್ಪ್ರಸಿದ್ದ Harry Potter ಪುಸ್ತಕ ಸರಣಿ.... ಪುರಾಣವನ್ನು ಆಧರಿಸಿ ಇತ್ತೀಚಿಗೆ ಬರೆದ Sita:The Warrior of Mithila..... ಇತ್ಯಾದಿ ಪುಸ್ತಕಗಳನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ ಅಥವಾ ಹೆಸರನ್ನಾದರೂ ಕೇಳಿರುತ್ತಾರೆ. ಡಿಂಗನಂತಹ ಕಾಮಿಕ್ ಕಥೆಗಳಂತೂ ನಮ್ಮಂತ ಮಕ್ಕಳಿಗೆ ಬಹಳ ಇಷ್ಟವಾದದ್ದು. ಜಗತ್ತಿನಲ್ಲಿ ಎಲ್ಲೇ ಹೋದರೂ ಫ಼್ಯಾಂಟಸಿ ಕಥೆಗಳು ಸಿಗುತ್ತವೆ. ಈ ಪುಸ್ತಕಗಳ ಮೋಡಿಯೇ ಅಂಥದ್ದು.  ಫ಼್ಯಾಂಟಸಿ ಕಥೆಗಳನ್ನು ಓದುತ್ತಿದ್ದರೆ ಸಮಯ ಓಡಿದ್ದೇ ತಿಳಿಯುವುದಿಲ್ಲ. ಅದರದ್ದು ಬೇರೆಯದೇ ಪ್ರಪಂಚ. ಇಲ್ಲಿ ಕಲ್ಪನೆಗೆ ಮಿತಿಯೆಂಬುದೇ ಇಲ್ಲ. ಮಾಟಗಾತಿಯರು ಒಳ್ಳೆಯವರೂ ಆಗಬಹುದು... ಕೆಟ್ಟವರೂ ಆಗಬಹುದು. ಪ್ರಾಣಿ ಪಕ್ಷಿಗಳು ಮಾತನಾಡಲೂಬಹುದು... ಮನುಷ್ಯನೇ ಪ್ರಾಣಿಯಾಗಿ ಮಾರ್ಪಾಡಾಗಲೂಬಹುದು. ಇಂತಹ ಜಗತ್ತು ನಮಗೊಂದಿದ್ದಿದ್ದರೆ ಎಷ್ಟು ಚೆನ್ನ?  ಮಕ್ಕಳಿಂದ ಹಿರಿಯರ ವರೆಗೂ ಇದು ಇಷ್ಟವಾಗುತ್ತದೆ. ತಾನೂ ಕಥೆಯ ನಾಯಕ/ನಾಯಕಿಯಂತೆ ಸಾಹಸಿಯಾಗಬೇಕೆಂದು ಎಲ್ಲರಿಗೂ ಅನಿಸುತ್ತದೆ. ಡಿಂಗನನ್ನು ನೋಡಿ ಅವನ ಹಾಗೆಯೇ ಹಾರಬೇಕೆಂದು ಹೋದವರೆಷ್ಟೋ...ಹೋಗಿ ಬಿದ್ದು ಗಾಯ ಮಾಡಿಕೊಂಡವರೆಷ್ಟೋ! ಈ ಕಥೆಗಳ ಪಾತ್ರಗಳೆಲ್ಲ ನಮ್ಮ ಪ