೨೦೧೨ ಅಕ್ಟೋಬರ್ ೯ , ತಾಲಿಬಾನಿ ಉಗ್ರನೊಬ್ಬ ೧೪ ವರ್ಷ ವಯಸ್ಸಿನ ಮಲಾಲ ಯುಸಫ಼ೈಜಿಯಾ ಎಂಬ ಹುಡುಗಿಯ ತಲೆಗೆ ಹೊಡೆದ ಒಂದು ಗುಂಡು ಪ್ರಪಂಚದ ಸಾವಿರಾರು ಶಿಕ್ಷಣ ವಂಚಿತ ಮಕ್ಕಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವಂತೆ ಮಾಡಿತು. ಜಗತ್ತಿಗೆ ಅನಾಮಿಕಳಾಗಿದ್ದ ಇದೇ ಮಲಾಲಳಿಗಾಗಿ ಜಗತ್ತು ಪ್ರಾರ್ಥಿಸಿತ್ತು.
ಮಲಾಲ ಈಗ ಬರಿ ಹೆಸರಾಗಿ ಉಳಿದಿಲ್ಲ . ಆಕೆ ಒಬ್ಬ ಶಕ್ತಿಯಾಗಿದ್ದಾಳೆ. ತನ್ನ ಹುಟ್ಟಿದ ಊರಾದ ಸ್ವಾತ್ ಕಣಿವೆ ತಾಲಿಬಾನಿ ಆಕ್ರಮಿತ ಪ್ರದೇಶವಾಗಿದ್ದರೂ , ಜನರು ತಲೆಯೆತ್ತಿ ನೋಡಲೂ ಭಯಪಡುತ್ತಿದ್ದ ಸಮಯದಲ್ಲಿ ಅದೇ ತಾಲಿಬಾನಿಗಳ ವಿರುದ್ಧ ದನಿಯೆತ್ತಿ ಮಾತಾಡಿದ ಹುಡುಗಿ ಈಕೆ. ಕೇವಲ ೧೧ ವರ್ಷದವಳಾಗಿದ್ದಾಗ ಪಾಕಿಸ್ತಾನದ ಪೇಶಾವರದ ಪ್ರೆಸ್ ಕ್ಲಬ್ ನಲ್ಲಿ " ಮೂಲಭೂತ ಹಕ್ಕಾದ ಶಿಕ್ಷಣವನ್ನು ನಮ್ಮಿಂದ ಕಿತ್ತುಕೊಳ್ಳಲು ಆ ತಾಲಿಬಾನಿಗಳಿಗೆ ಎಷ್ಟು ಧೈರ್ಯ? " ಎಂದು ಪ್ರಶ್ನಿಸಿದ್ದಳು.
ಬಿಬಿಸಿ ಪತ್ರಿಕೆಗಾಗಿ ಸ್ವಾತ್ ಕಣಿವೆಯ ಪರಿಸ್ಥಿತಿ ಬಗ್ಗೆ ಗುಲ್ಮಕೈ ಎಂಬ ಗುಪ್ತ ನಾಮದಲ್ಲಿ ದಿನಚರಿ ಬರೆಯುತ್ತಿದ್ದ ಈಕೆ ಮತ್ತು ಅವಳ ತಂದೆ ಅದಾಗಲೆ ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವಳ ತಂದೆ ಜೀಯುದ್ದೀನ್ ಯುಸಫ಼ೈಜಿಯ ಶಿಕ್ಷಣ ತಜ್ಞ ರಾಗಿ, ಖುಶಾಲ್ ಎಂಬ ಶಾಲೆಗಳನ್ನು ನಡೆಸುತ್ತಿದ್ದವರು. ಮಲಾಲಾಳೆ ಹೇಳುವಂತೆ ಅವಳ ತಂದೆ ಅವಳಲ್ಲಿ ಬತ್ತದ ಸ್ಥೈರ್ಯವನ್ನು ತುಂಬಿದವರು.
ಬಿಬಿಸಿ ಯಲ್ಲಿ ಬರೆಯುತ್ತಿದ್ದ ದಿನಚರಿ ಪ್ರಸಿದ್ಧವಾದಂತೆ ಅವಳ ಜೀವನದ ಬಗ್ಗೆ ಬಿಬಿಸಿ, ನ್ಯುಯಾರ್ಕ್ ಟೈಮ್ಸ್ ಮುಂತಾದ ಮಾಧ್ಯಮಗಳು ಸಾಕ್ಶ್ಯಚಿತ್ರ ತಯಾರಿಸಿದರು. ಇದರಿಂದ ಆಕೆ ಸಾರ್ವಜನಿಕವಾಗಿ ಪ್ರಸಿದ್ಧಳಾದಳು. ಸಿಎನ್ ಎನ್ ನ ಸಂದರ್ಶನದಲ್ಲಿ "ನನಗೆ ಶಿಕ್ಷಣ ಪಡೆಯುವ ಹಕ್ಕಿದೆ, ಮಾತನಾಡುವ ಹಕ್ಕಿದೆ " ಎಂದು ಉತ್ತರಿಸಿದ್ದಳು.ಪರಿಣಾಮ, ಅವಳ ತಂದೆಗೂ ಸಹ ತಾಲಿಬಾನಿಗಳ ಜೀವ ಬೆದರಿಕೆ ಬಂದಿತ್ತು. ಇದೆಲ್ಲದರಿಂದ ಸಹಜವಾಗಿ ತಂದೆ ಜಿಯಾಯುದ್ದೀನ್ ತಮ್ಮ ಪರಿವಾರವನ್ನು ಪೇಶಾವರದ ತಮ್ಮ್ಮ ಗೆಳೆಯರ ಮನೆಗೆ ಕಳಿಸಿದರು. " ನನಗೆ ಇಲ್ಲಿ ಬೇಸರ ಬರುತ್ತಿದೆ. ಏಕೆಂದರೆ ಇಲ್ಲಿ ಓದಲು ಪುಸ್ತಕಗಳು ಇಲ್ಲ." ಎಂದು ಆಕೆ ತನ್ನ ದಿನಚರಿಯಲ್ಲಿ ಬರೆದಿದ್ದಾಳೆ.ವಾತಾವರಣ ತಿಳಿಯಾದ ನಂತರ ಮನೆಗೆ ಹೋದಾಗ" ನನಗೆ ನನ್ನ ಕಪಾಟನ್ನು ತೆಗೆಯಲು ನೋವಾಗುತ್ತದೆ. ನನ್ನ ಶಾಲಾ ಸಮವಸ್ತ್ರ, ಬ್ಯಾಗ್ ನೋಡಿದಾಗ ನಾನು ಮತ್ತೆ ಶಾಲೆಗೆ ಹೋಗಲಾರೆನೋ ಎಂದು ಅನಿಸಿ ಬೇಸರವಾಗುತ್ತದೆ." ಎಂದು ಬರೆದಿದ್ದಳು.
ಇವಳ ಮಾತುಗಳಿಂದ ತಾಲಿಬಾನಿಗಳು ಶಾಲೆಯಿಂದ ವಾಪಸಾಗುವಾಗ ಬಸ್ಸಿನೊಳಗೆ ನುಗ್ಗಿ ಅವಳ ಹಣೆಗೆ ಗುಂಡಿಟ್ಟರು. ನಂತರ ಅವಳನ್ನು ಪೇಶಾವರದ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದರೂ ಮೆದುಳಿನ ಎಡಭಾಗದಲ್ಲಿ ಊತ ಕಣಿಸಿಕೊಂಡಿದ್ದರಿಂದ ಲಂಡನ್ನಿನ ಬರ್ಮಿಂಗ್ಹ್ಯಾಮ್ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಮುಂದುವರೆಸಿದರು. ಅವಳ ತಂದೆ ಪತ್ರಿಕಾಗೋಷ್ಠಿಯಲ್ಲಿ " ಅವಳನ್ನು ಲಂಡನ್ ಗೆ ಸಾಗಿಸುವಾಗ ಅವಳ ಮೆದುಳು ಅಪಾಯಕಾರಿಯಾಗಿ ಊದಿಕೊಂಡಿತ್ತು. ಅವಳ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಬೇಕಾಗಿ ಬರಬಹುದು ಎಂದು ಭಾವಿಸಿದ್ದೆ." ಎಂದು ಹೇಳಿದ್ದಾರೆ. ನಂತರದಲ್ಲಿ ಮಲಾಲ ಚೇತರಿಸಿಕೊಂಡರೂ ಹಣೆಯ ಮೇಲೆ ಆಗಿದ್ದ ತೂತನ್ನು ಟೈಟಾನಿಯಮ್ ಪ್ಲೇಟ್ ನಿಂದ ಮುಚ್ಚಿದರು. ತಾಲಿಬಾನ್ ಸಂಘಟನೆಯು ಈ ಘಟನೆಯ ಜವಬ್ದಾರಿ ಹೊತ್ತಿದ್ದು, ೧೦,೦೦೦ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದೆ.
ಇದಾದ ೨ ವರ್ಷಗಳ ನಂತರ ಇವಳು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಭಾರತದ ಕೈಲಾಶ್ ಸಥ್ಯಾರ್ಥಿ ಅವರೊಂದಿಗೆ ಪಡೆದಳು. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅತೀ ಕಿರಿಯ ವಯಸ್ಸಿನ ವ್ಯಕ್ತಿ ಇವಳು.
ಈಗ ಏನು ಮಾಡುತ್ತಿದ್ದಾಳೆ ಮಲಾಲ?: ಚಿಕಿತ್ಸೆಯ ನಂತರ ಅಲ್ಲಿಯೆ ಉಳಿದ ಮಲಾಾಲ ಈ ವರ್ಷ Oxford universityಇಂದ ಪದವಿ ಪಡೆದಿದ್ದಾಳೆ.
Gulmakai, He named me Malala ಮುಂತಾದ ಚಿತ್ರಗಳು, ಡಾಕ್ಯುಮೆಂಟರಿಗಳು ಸಾವಿರದ ಸಂಖ್ಯೆಯಲ್ಲಿ ಬಿಡುಗಡೆಯಾಗಿದೆ. Malala's magic pencil, I am Malala ಇತ್ಯಾದಿ ಪುಸ್ತಕಗಳನ್ನು ಬರೆದಿದ್ದಾಳೆ.
ಮಲಾಲ, ಗ್ರೇಟಾ ಥಂಬರ್ಗ್, ಮಂಗೋಲಿಯಾದ ಜಾನಪದ ಕಥೆಯ ಪಾತ್ರ ಮುಲಾನ್, ಸೆವೆರ್ನ್ ಸುಜ಼ುಕಿ ಹೀಗೆ ಹಲವರು ಬದಲಾವಣೆಗೆ ಕಾರಣವಾಗಿದ್ದಾರೆ.
ಇವರೆಲ್ಲರೂ ಭವಿಷ್ಯದ ಶಕ್ತಿಯಾಗಲಿ ಎಂದು ಹಾರೈಸೋಣವೆ!! ನಾವೂ ಬದಲಾವಣೆಯ ಭಾಗವಾಗೋಣವೆ?
~ ವನ್ಯಾ ಸಾಯಿಮನೆ
೯ ನೇ ತರಗತಿ
👌👏👏...
ReplyDeleteThanks
Delete