Skip to main content

Posts

Showing posts from November, 2021

ಕಾಡಿನ ಹಾಡು!

ಇವತ್ತು ದೀಪಾವಳಿ ರಜೆಗೆಂದು ಮನೆಗೆ ಬಂದಾಗ , ಮನೆಯಲ್ಲಿ ಎರಡು ಮೂರು ಸೌಂಡ್ ರೆಕಾರ್ಡರ್ ಗಳು ಬಂದು ಕುಳಿತಿದ್ದವು.  ಅವು ಏಕೆ ಬಂದಿದೆ ಎಂದು  ಕುತೂಹಲದಿಂದ ಕೇಳಿದಾಗ,ಈ ಉಪಕರಣಗಳನ್ನು ಜೀವ ವಿಜ್ಞಾನಿ Dr. ಕೆ. ವಿ ಗುರುರಾಜ ಅವರು ಕೊಟ್ಟಿದ್ದು, ಇವು ಕಾಡನ್ನು ಕೇಳುವ  ಹೊಸ ಅಧ್ಯಯನದ  ಪರಿಕರಗಳೆಂದು ಎಂದು ತಿಳಿಯಿತು. ಆದರೆ ಕಾಡು ಕೇಳುವುದೆಂದೆಂದರೆ? ಕಾಡನ್ನು ನೋಡಬಹುದೆ ಹೊರತು, ಕೇಳಲು ಸಾಧ್ಯವಿಲ್ಲ ಎಂದಲ್ಲವೇ?     ಕೇಳಬಹುದು. ನೀವು ಎರಡು ನಿಮಿಷ ಹೊರಗಿನ ಪರಿಸರಕ್ಕೆ ಕಿವಿಗೊಟ್ಟು  ಕೇಳಿ. ಅದು ಮರುಭೂಮಿಯಾಗಿದ್ದರು ಯಾವುದಾದರೂ ಸದ್ದು ಕೇಳಿಸುತ್ತದೆ. ಅದು ವಾಹನಗಳ ಸದ್ದೇ ಆಗಿರಬಹುದು. ಅಥವಾ ಹಕ್ಕಿಗಳ ಚಿಲಿಪಿಲಿಯೇ ಆಗಿರಬಹುದು. ಅಥವಾ ಎಲೆಗಳೆ ಆಗಿರಬಹುದು. ಇಂತಹ ಸದ್ದುಗಳನ್ನು soundscapes ಎನ್ನುತ್ತಾರೆ.                ಹೀಗೆ ಕಾಡಿನಲ್ಲಿ ಸಿಗುವ ಸದ್ದುಗಳನ್ನು ರೆಕಾರ್ಡ್  ಮಾಡಿ ಅದರ ಮೂಲಕ ಕಾಡನ್ನು ಮತ್ತೊಂದ ದೃಷ್ಟಿಕೋನದಿಂದ ನೋಡಬಹುದದಲ್ಲವೇ? ಇದಕ್ಕೇ ನಾನು ಕಾಡನ್ನು ಕೇಳಬಹುದು ಎಂದಿದ್ದು. ನಾನು ಮೊದಲೊಮ್ಮೆ camera traps ಗಳ ಮೂಲಕ ಕಾಡಿನ ಚಲನವಲನಗಳನ್ನು ಗಮನಿಸುವ ಬಗಗೆ  ಬರೆದಿದ್ದೆ. ಅದು ಕಾಡು ನೋಡುವ ಪರಿ. ಇದು ಕಾಡು ಕೇಳುವ ಪರಿ.  ಕಳೆದ ವಾರವಷ್ಟೆ ಈ  soundscapes  ಬಗ್ಗೆ ಓದಿ...