Skip to main content

Posts

Showing posts from March, 2021

ಕೋಟೆ ನೋಡಲು ಹೋದೆ!

ಮೊನ್ನೆ  ಮಾರ್ಚ್ 7 ನೇ ತಾರೀಕು ನಾವು ನಮ್ಮದೇ ಊರಿನ ಐತಿಹಾಸಿಕ ತಾಣ, ಸೊಂದಾ ಕೋಟೆಗೆ ಹೋಗಿದ್ದೆವು. ಮೊದಲು ಸೋದೆ ಎಂದು ಹೆಸರಾಗಿದ್ದ ಈ ಊರಿನ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ. ಮೊದಲಿನಿಂದಲೂ ಸೊಂದಾ ಕೋಟೆಗೆ ಹೋಗಬೇಕು ಎಂದುಕೊಂಡಿದ್ದ ನಾನು ಈ ಬಾರಿ ನನ್ನ ಗೆಳೆಯರೂ  ಬರುತ್ತಾರೆ ಎಂದಾಗ ಖುಷಿಯಿಂದ ಹೊರಟು  ನಿಂತೆ. ಸಿರಸಿಯಿಂದ ಸುಮಾರು 15-16  ಕಿಲೋಮೀಟರ್ ದೂರವಿರುವ ಸೊಂದಾದಲ್ಲಿ ಬರೀ ಕೋಟೆಯಷ್ಟೆ ಅಲ್ಲದೆ  ಅದೇ ಅರಸರೆ ಕಟ್ಟಿಸಿದ ಸ್ವರ್ಣವಳ್ಳಿ ಮಠ , ವಾದಿರಾಜ ಮಠ ಮತ್ತು ಜೈನ ಮಠಗಳೂ ಇವೆ. ಅಲ್ಲೆಲ್ಲ ನಾನು ಹಲವು ಬಾರಿ ಹೋಗಿ ಬಂದಿದ್ದರಿಂದ ಈ ಬಾರಿ ಬರೀ ಕೋಟೆಗೆ ಮಾತ್ರ ಭೇಟಿ ಕೊಟ್ಟೆ.      1555 ರಲ್ಲಿ ಅರಸಪ್ಪ ನಾಯಕ ಎಂಬ ಅರಸ ಈ ರಾಜ್ಯವನ್ನು ಸ್ಥಾಪಿಸಿದನಂತೆ. ವಿಚಿತ್ರ ನೋಡಿ, ಅರಸನ ಹೆಸರೇ ಅರಸಪ್ಪ ನಾಯಕ!  ಈ ಸೋದೇ ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಆಗ ವಿಜಯನಗರದಲ್ಲಿದ್ದದ್ದು ಸದಾಶಿವರಾಯ ಎಂಬ ರಾಜ. ಈ ಅರಸಪ್ಪ ನಾಯಕ ಒಬ್ಬ ಜೈನ ರಾಜನಾಗಿದ್ದನಂತೆ.1565 ರಲ್ಲಿ ವಿಜಯನಗರದ ಪತನವಾದ ನನತರ ಈ ಸಾಮ್ರಾಜ್ಯ ಬಹಮನಿ ಸುಲ್ತಾನರ ಸಾಮಂತ ರಾಜ್ಯವಾಯಿತು. ಅರಸಪ್ಪನ ನಾಯಕನ ಮರಣದ ನಂತರ  1674 ರಲ್ಲಿ ಶಿವಾಜಿ ಈ ಸಾಮ್ರಾಜ್ಯವನ್ನು ವಶ ಪಡಿಸಿಕೊಂಡ ಎಂದೂ ಕೊನೆಗೆ ಪೋರ್ತುಗೀಸರ ಕಾಲದಲ್ಲಿ ಈ ರಾಜವಂಶ ಕಾರವಾರಕ್ಕೆ ಹೋಗಿ ಅಲ್ಲಿ ಸದಾಶಿವಘಡ ಎಂಬ ಕೋಟೆ ಸ್ಥಾಪಿಸಿತೆಂದು ಕೆಲ ಪುಸ್ತಕಗಳಲ್ಲಿ  ಓದಿದೆ. ಹಾಗೆಯೇ ಸೋದೆಯ ರಾಜರ ವ